

ಮೂಡಿಗೆರೆ: ಪಟ್ಟಣ, ಬಿಳಗುಳ, ಕುನ್ನಹಳ್ಳಿ, ಜನ್ನಾಪುರ, ಗೋಣಿಬೀಡು, ಬಣಕಲ್, ಜಾವಳಿ ವಿವಿಧೆಡೆ ಓಣಂ ಹಬ್ಬವನ್ನು ಸಂಭ್ರಮದಿಂದ ಮಲಯಾಳಿ ಸಮಾಜದವರು ಆಚರಿಸಿದರು. ಮನೆ ಮಂದಿಯೆಲ್ಲ ಹೊಸಬಟ್ಟೆ ಧರಿಸಿ ಮನೆ ಮುಂದೆ ವಿವಿಧ ಬಣ್ಣಗಳ ಹೂವುಗಳಿಂದ ಪೂಕಳಂ ಬಿಡಿಸಿದರು. ನವವಿವಾಹಿತರು ಮಾವನ ಮನೆಗೆ ಬಂದು ಕುಟುಂಬದವರಿಗೆಲ್ಲರಿಗೂ ಹೊಸಬಟ್ಟೆ ಕೊಟ್ಟು ಸಂಭ್ರಮಿಸುತ್ತಾರೆ. ಓಣಂ ಹಬ್ಬಕ್ಕೂ ತನ್ನದೇ ಆದ ಐತಿಹ್ಯವಿದೆ. ಹಿಂದೆ ಬಲಿ ಚಕ್ರವರ್ತಿ (ಮಹಾಬಲಿ) ಕೇರಳವನ್ನು ಆಳುವ ಸಮಯದಲ್ಲಿ ಪ್ರಜೆಗಳು ಬಹಳ ಸಂತುಷ್ಟ ಜೀವನ ನಡೆಸುತ್ತಿದ್ದರು. ರಾಜನಿಗೆ ತನ್ನ ಪ್ರಜೆಗಳ ಮೇಲೆ ಅತೀವ ಪ್ರೀತಿ, ವಾತ್ಸಲ್ಯವಿದ್ದು ಬಲಿಚಕ್ರವರ್ತಿಯ ಆಡಳಿತದಲ್ಲಿ ಮೋಸ, ವಂಚನೆ ನಡೆಯುತ್ತಿರಲಿಲ್ಲ.