ತಿರು ಓಣಂ ಸಂಭ್ರಮ

15bhr 4 ONAM
ಬಾಳೆಹೊನ್ನೂರಿನ ಬೈರೇಗುಡ್ಡದ ಅಯ್ಯಪ್ಪ ದಾಸ್ ಕುಟುಂಬಸ್ಥರು ತಿರು ಓಣಂ ಅಂಗವಾಗಿ ಆಕರ್ಷಕ ಪೂಕಳಂ ರಚಿಸಿರುವುದು.
Published on

ಬಾಳೆಹೊನ್ನೂರು: ಹೋಬಳಿಯಾದ್ಯಂತ ಕೇರಳಿಯನ್ನರು ಹಾಗೂ ಮಲಯಾಳಿ ಸಮಾಜದವರು ಭಾನುವಾರ ತಿರು ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಓಣಂ ಅಂಗವಾಗಿ ಎಂಟು ದಿನಗಳ ಮೊದಲೇ ಕೇರಳಿಯನ್ನರು ಮನೆಗಳ ಮುಂದೆ ಪ್ರತಿನಿತ್ಯ ವಿವಿಧ ಮಾದರಿಯ ಹೂವಿನ ರಂಗೋಲಿ ಬರೆದು ಹಬ್ಬವನ್ನು ಸ್ವಾಗತಿಸಿದರು. ಹೋಬಳಿ ವ್ಯಾಪ್ತಿಯ ಕೇರಳಿಯನ್ನರ ಮನೆಯಂಗಳದಲ್ಲಿ ಹಲವು ಬಗೆಯ ಪುಷ್ಪಗಳಿಂದ ರಚಿಸಿದ್ದ ವಿವಿಧ ಮಾದರಿಯ ಚಿತ್ತಾರದ ಪೂಕಳಂಗಳು ನೋಡುಗರ ಗಮನ ಸೆಳೆಯುತ್ತಿದ್ದವು.
ಪೂಕಳಂ ರಚಿಸಿದ ಮಲಯಾಳಿಗರು ದೇವಾಲಯ ಹಾಗೂ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡಿಕೊಂಡರು. ಮನೆಗಳಲ್ಲಿ ಕೇರಳದ ವಿಶೇಷ ಖಾದ್ಯಗಳನ್ನು ತಯಾರಿಸಿ ಅಕ್ಕಪಕ್ಕದವರಿಗೆ ಹಂಚಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net