VIDEO: ಮಹಿಳೆಯ ದುರಂತ ಸಾವು; ಮುಚ್ಚಿದ ಗಾಜಿನ ಬಾಗಿಲ ಬಳಿಯೇ ಕಾದಿತ್ತು ಮರಣ...

Woman Death
Published on

ಎರ್ನಾಕುಲಂ: ಯಾರಿಗೆ ಹೇಗೆ ಸಾವು ಬರುತ್ತದೆಯೆಂಬುದು ಊಹಿಸಲೂ ಸಾಧ್ಯವಾಗದ ವಿಷಯ. ಈ ಮಹಿಳೆಗೆ ಸಾವು ಬ್ಯಾಂಕ್​ನ ಗಾಜಿನ ಬಾಗಿಲಿನ ಬಳಿ ಕಾದಿತ್ತು.

ಎರ್ನಾಕ್ಕುಲಂ ಜಿಲ್ಲೆಯ ಬ್ಯಾಂಕ್​ವೊಂದರಲ್ಲಿ ನಡೆದ ಈ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೃಶ್ಯ ನೋಡಿದರೆ ಒಂದು ಕ್ಷಣ ಸಂಕಟವಾಗದೆ ಇರದು. ಇದನ್ನೂ ಓದಿ: ಖುಷಿಯಿಂದ ಊರಿಗೆ ಹೊರಟಿದ್ದ ಯುವಕ ಬಸ್​ನಲ್ಲೇ ಸಾವು; ಅಂಥದ್ದೇನಾಯಿತು ಈ ಸಾಫ್ಟ್​ವೇರ್​ ಉದ್ಯೋಗಿಗೆ?

ಬೀನಾ ಪೌಲ್​ (40) ಎಂಬುವರು ಎರ್ನಾಕುಲಂನ ಪೆರಂಬವೂರ್​ನಲ್ಲಿರುವ ಒಂದು ಬ್ಯಾಂಕ್​ಗೆ ಯಾವುದೋ ಕೆಲಸಕ್ಕೆಂದು ತೆರಳಿದ್ದರು. ಆದರೆ ಬ್ಯಾಂಕ್​ ಒಳಗೆ ಹೋಗುವಾಗ ಅವರು ಒಂದು ಮುಖ್ಯವಾದ ದಾಖಲೆಯನ್ನು ಹೊರಗೆ ತಮ್ಮ ಕಾರಿನಲ್ಲಿಯೇ ಬಿಟ್ಟು ಬಂದಿದ್ದರು. ಅದನ್ನು ಅರ್ಜೆಂಟ್ ಆಗಿ ಬ್ಯಾಂಕ್​ಗೆ ಕೊಡಬೇಕಿದ್ದ ಕಾರಣ, ಓಡುತ್ತ ಹೋದರು. ಆದರೆ ಆ ಬ್ಯಾಂಕ್​ ಬಾಗಿಲು ಗಾಜಿನಿಂದಾಗಿದ್ದ ಕಾರಣ ಅದು ಮುಚ್ಚಿದ್ದರೂ ಅವರ ಗಮನಕ್ಕೆ ಬರಲಿಲ್ಲ. ಬೀನಾ ಅವಸರದಲ್ಲಿ ಓಡುತ್ತ ಹೋಗಿ ಬಾಗಿಲಿಗೆ ಗುದ್ದಿ ಕೆಳಗೆ ಬಿದ್ದರು.

ಬೀನಾ ತಲೆ ಬಾಗಿಲಿಗೆ ಬಲವಾಗಿ ಗುದ್ದಿದ ಕಾರಣ ಗ್ಲಾಸ್​ ಕೂಡ ತುಂಡಾಗಿ ಬಿತ್ತು. ಆಕೆಯಂತೂ ತೀವ್ರ ನೋವಿನಿಂದ ತಮ್ಮ ಮೇಲಿನ ನಿಯಂತ್ರಣವನ್ನೇ ಕಳೆದುಕೊಂಡರು. ದುರಂತವೆಂದರೆ ಗಾಜಿನ ಒಂದು ಚೂರು ಮಹಿಳೆಯ ಹೊಟ್ಟೆಗೆ ಹೊಕ್ಕಿತ್ತು. ಇದರಿಂದ ತೀವ್ರ ಗಾಯಗೊಂಡಿದ್ದ ಅವರು ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಇದನ್ನೂ ಓದಿ:ಕೊವಿಡ್​-19ಗೆ ಯಾರೂ ಭಯಪಡಬೇಡಿ…ಭಾರತ ಸಮರ್ಥವಾಗಿ ಹೋರಾಡುತ್ತಿದೆ: ಪ್ರಧಾನಿ ಮೋದಿ

ಆಕೆ ಗಾಯಗೊಳ್ಳುತ್ತಿದ್ದಂತೆ ಅಲ್ಲಿಯೇ ಇದ್ದ ಒಂದಷ್ಟು ಜನರು ಬೀನಾರ ಸಹಾಯಕ್ಕೆ ಬಂದರು. ಕುಳಿತುಕೊಳ್ಳಲು ಕುರ್ಚಿಯನ್ನೂ ಕೊಟ್ಟರು. ನಂತರ ಒಂದು ಬಟ್ಟೆಯಿಂದ ಪೂರ್ತಿಯಾಗಿ ಮುಚ್ಚಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸೇರಿದ್ದಾರೆ..

ಬೀನಾ ಅವರು ಬ್ಯಾಂಕ್​ ಬಾಗಿಲಿಗೆ ಗುದ್ದಿ ಕೆಳಗೆ ಬೀಳುವ ವೇಳೆ ಅಲ್ಲಿ ಒಟ್ಟು ಮೂವರು ಮಹಿಳಾ ಉದ್ಯೋಗಿಗಳು ಇದ್ದರು. ಒಂದು ಕ್ಷಣ ಅಲ್ಲಿ ಏನಾಯಿತು ಎಂಬುದೇ ಹಲವರಿಗೆ ಗೊತ್ತಾಗಲಿಲ್ಲ ಎಂದು ತಿಳಿಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾಳೆ ಬೀನಾ ಅವರ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net