ಟೀ ಕುಡಿಯುತಾ ಕುಳಿತಿದ್ದ ವೃದ್ಧನ ಕಿಸೆಯಲ್ಲಿದ್ದ ಮೊಬೈಲ್ ಸ್ಫೋಟ!

Mobile Blast
Published on

ತಿರುವನಂತಪುರ: ವ್ಯಕ್ತಿಯೊಬ್ಬ ಚಹಾ ಸೇವಿಸುತ್ತಾ ಕುಳಿತಿದ್ದ ಸಂದರ್ಭದಲ್ಲಿ, ಶರ್ಟ್ ಜೇಬಿನಲ್ಲಿದ್ದ ಮೊಬೈಲ್ ಸಿಡಿದಿರುವ ಘಟನೆ ಕೇರಳದ ಮರೋಟಿಚಾಲ್ ಎಂಬಲ್ಲಿ ನಡೆದಿದೆ. ಘಟನೆಯ ದೃಶ್ಯ ಹೋಟೆಲ್​​ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬೆಳಗ್ಗೆ 10 ಗಂಟೆಯ ವೇಳೆ 70 ವರ್ಷದ ಇಲಿಯಾಸ್ ಎಂಬುವರು ಹೋಟೆಲ್​ನಲ್ಲಿ ಚಹಾ ಕುಡಿಯುತ್ತಿದ್ದ ಸಂದರ್ಭದಲ್ಲಿ ಮೊಬೈಲ್ ಬ್ಲಾಸ್ಟ್ ಆಗಿರುವ ಘಟನೆ ನಡೆದಿದೆ ಎಂದ ವರದಿಯಾಗಿದೆ. ಏಕಾಏಕಿ ಮೊಬೈಲ್ ಸಿಡಿಯುತ್ತಿದ್ದಂತೆ ಶರ್ಟ್​ಗೆ ಬೆಂಕಿ ಹತ್ತಿಕೊಂಡಿದೆ. ಕೂಡಲೇ ಎಚ್ಚೆತ್ತಕೊಂಡ ಇಲಿಯಾಸ್, ಕಿಸೆಯಿಂದ ಮೊಬೈಲ್ ಹೊರಕ್ಕೆಸೆದಿದ್ದಾರೆ. ಕೂಡಲೇ ಅಲ್ಲಿದ್ದ ಹೋಟೆಲ್ ಸಿಬ್ಬಂದಿ ಅವರ ರಕ್ಷಣೆಗೆ ಬಂದಿದ್ದಾರೆ.

ಮೊಬೈಲ್​ನ ಬ್ಯಾಟರಿ ದೋಷದಿಂದ ಮೊಬೈಲ್ ಸಿಡಿದಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಅದೃಷ್ಟವಶಾತ್ ಘಟನೆಯಿಂದ ಯಾವುದೇ ಪ್ರಾಣಾಪಾಯವಾಗಿಲ್ಲ. ಘಟನೆಯ ಬಗ್ಗೆ ಪೊಲೀಸರು ವೃದ್ಧನನ್ನು ವಿಚಾರಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಕಳೆದ ವರ್ಷ 1000 ರೂ. ನೀಡಿ ಮೊಬೈಲ್ ಖರೀದಿಸಿದ್ದು, ಈವರೆಗೆ ಯಾವುದೇ ಸಮಸ್ಯೆ ಕಂಡು ಬಂದಿರಲಿಲ್ಲ ಎಂದು ಪೊಲೀಸರಿಗೆ ವೃದ್ಧ ತಿಳಿಸಿದ್ದಾನೆ ಎಂದು ವರದಿಯಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net