More

    ಬುಕ್ ಮಾಡಿದ್ದ ಆಟೋ ರಿಕ್ಷಾಗಾಗಿ 71 ನಿಮಿಷ ಕಾದವನ ತಾಳ್ಮೆಗೆ ಸಲಾಂ ಎಂದ ನೆಟ್ಟಿಗರು!

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಬಹುತೇಕ ಮಂದಿ ಓಲಾ ಅಥವಾ ಉಬರ್ ಆ್ಯಪ್​ ಮೂಲಕ ಆಟೋ ರಿಕ್ಷಾ ಬುಕ್ ಮಾಡಿ ನಗರದಲ್ಲಿ ಸಂಚರಿಸುತ್ತಾರೆ. ಸದಾ ವಾಹನ ದಟ್ಟಣೆ ಇರುವ ಬೆಂಗಳೂರಿನ ಕೆಲವು ಪ್ರದೇಶದಲ್ಲಿ ಬುಕ್ ಮಾಡಿರುವ ಆಟೋ ಬರುವುದು ಸಹಜವಾಗಿಯೇ ತಡವಾಗುತ್ತದೆ.

    ಆಟೋ ಬರುವುದು 5-10 ನಿಮಿಷ ತಡವಾದರೆ ಸಾಕು, ಕಾಯುವ ತಾಳ್ಮೆ ಪ್ರಯಾಣಿಕರಿಗೆ ಇರುವುದಿಲ್ಲ. ಸಿಟ್ಟಿನಲ್ಲಿ ಚಾಲಕನ ಮೇಲೆ ರೇಗಾಡುವ ಮಂದಿ ನಮ್ಮ ನಡುವೆಯೇ ಇದ್ದಾರೆ. ಆದರೆ ಇಲ್ಲೊಬ್ಬ ಪ್ರಯಾಣಿಕ ಬುಕ್ ಮಾಡಿರುವ ಆಟೋ ರಿಕ್ಷಾಕ್ಕಾಗಿ ಬರೋಬ್ಬರಿ 71 ನಿಮಿಷ ಕಾದು ಕುಳಿತಿದ್ದಾನೆ. ಸದ್ಯ ಈತನ ತಾಳ್ಮೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

    ಬೆಂಗಳೂರಿನ ನಿವಾಸಿ ಅನುಶಾಂಕ್ ಜೈನ್ ಎಂಬುವರು ಉಬರ್ ಆ್ಯಪ್‌ನಲ್ಲಿ ಬುಕ್ ಮಾಡಿರುವ ಆಟೋ ಕುರಿತು ಟ್ವಿಟರ್‌ನಲ್ಲಿ ಸ್ಕ್ರೀನ್‌ಶಾಟ್ ಒಂದನ್ನ ಪೋಸ್ಟ್ ಮಾಡಿದ್ದಾರೆ. ಪ್ರಯಾಣಿಕ ಬುಕ್ ಮಾಡುವ ವೇಳೆ ಆಟೋ 24 ಕಿ.ಮೀ. ದೂರದಲ್ಲಿ ಕಾಣಿಸುತ್ತಿತ್ತು ಮತ್ತು ತಾನಿರುವ ಸ್ಥಳಕ್ಕೆ ಬರಲು 71 ನಿಮಿಷ ಬೇಕಾಗುತ್ತದೆ ಎಂದು ಹೇಳುತ್ತಿತ್ತು. ಹೀಗಿದ್ದರೂ ಪ್ರಯಾಣಿಕ ಮಾತ್ರ ಆಟೋ ಬುಕ್ ಮಾಡಿದ್ದಾನೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

    ಟ್ವಿಟ್ಟರ್ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಅನೇಕ ಬಳಕೆದಾರರು ಹಾಸ್ಯಭರಿತವಾದ ಕಮೆಂಟ್ ಮಾಡುತ್ತಿದ್ದಾರೆ. ಈ ಸ್ಕ್ರೀನ್​​ಶಾಟ್​ನ್ನು ‘ವರ್ಕ್​ ಫ್ರಮ್ ಹೋಮ್’ ಕಂಪೆನಿಗಳ ಎಚ್​ಆರ್​(HR)ಗಳಿಗೆ ಕಳುಹಿಸಬೇಕು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇಷ್ಟು ಹೊತ್ತು ಬುಕ್ ಮಾಡಿದ್ದ ಆಟೋಗಾಗಿ ಕಾದಿರುವ ವ್ಯಕ್ತಿಯ ಬಗ್ಗೆ ಅಪಾರ ಗೌರವ ಇದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts