More

    VIDEO | ಕಾಳಿಂಗ ಸರ್ಪಕ್ಕೆ ಚುಂಬನ;ಈತನ ಧೈರ್ಯ ಕಂಡು ದಂಗಾದ ನೆಟ್ಟಿಗರು!

    ನವದೆಹಲಿ: ಒಂದು ಕ್ಷಣ ಹಾವುಗಳನ್ನು ಕಂಡರೆ ಎಷ್ಟೇ ಧೈರ್ಯವಂತರ ಎದೆಯಲ್ಲೂ ಭಯ ಹುಟ್ಟೇ ಹುಟ್ಟುತ್ತದೆ! ಆದರೆ ಇಲ್ಲೊಬ್ಬ ವ್ಯಕ್ತಿ ಭಯಾನಕವಾದ ಕಾಳಿಂಗ ಸರ್ಪಕ್ಕೆ ಮುತ್ತುಕೊಟ್ಟಿದ್ದಾನೆ. ಇದೀಗ ಭಯಾನಕ ಎನಿಸುವಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಮಂದಿ ಒಂದು ಕ್ಷಣ ದಂಗಾಗಿದ್ದಾರೆ.

    ಹಾವುಗಳು ವಿಷಕಾರಿಯಾಗಿರುವುದರಿಂದ ಯಾರೂ ಅವುಗಳ ಹತ್ತಿರಕ್ಕೂ ಹೋಗುವುದಿಲ್ಲ. ಎಲ್ಲಾದರು ಅನಿರೀಕ್ಷಿತವಾಗಿ ಹಾವು ಕಂಡರೆ ಕನಸಿನಲ್ಲೂ ಬಂದು ಕಾಡುತ್ತದೆ ಎಂದು ಹಲವು ಮಂದಿ ಭಯ ಪಡುತ್ತಾರೆ. ಇದೆಲ್ಲದರ ನಡುವೆ ಈತ ಬರೋಬ್ಬರಿ 12 ಅಡಿ ಉದ್ದದ ಕಾಳಿಂಗ ಸರ್ಪಕ್ಕೆ ಚುಂಬಿಸಿದ್ದಾನೆ.

    ಇದನ್ನೂ ಓದಿ: ನನಗೆ ಮಗು ಬೇಕು… ಗಂಡನನ್ನು ಮನೆಗೆ ಕಳುಹಿಸಿಕೊಡಿ! ಜೈಲು ಅಧಿಕಾರಿಗೆ ಪತ್ರ ಬರೆದ ಕೈದಿಯ ಪತ್ನಿ

     
     
     
     
     
    View this post on Instagram
     
     
     
     
     
     
     
     
     
     
     

    A post shared by Animal and Reptile Addict (@nickthewrangler)

    ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಕಾಳಿಂಗ ಸರ್ಪಕ್ಕೆ ಚುಂಬಿಸಿದಾತನ ಹೆಸರು ನಿಕ್ ದಿ ರಾಂಗ್ಲರ್. ತಾನು ಪ್ರಾಣಿ ಮತ್ತು ಸರಿಸೃಪಗಳನ್ನು ಹೆಚ್ಚು ಇಷ್ಟ ಪಡುತ್ತೇನೆ ಎಂದು ಹೇಳಿಕೊಂಡಿದ್ದಾನೆ. ವಿಡಿಯೋದಲ್ಲಿ ಈತ ಸರ್ಪಕ್ಕೆ ಚುಂಬಿಸಿ, ಕ್ಯಾಮರಾಗೆ ಫೋಸ್ ನೀಡುತ್ತಿರುವುದನ್ನು ಕಾಣಬಹುದು. “ನೀವು 12 ಅಡಿ ಕಿಂಗ್ ಕೋಬ್ರಾಗೆ ಚುಂಬಿಸುತ್ತೀರಾ? ಈತ ಕೇಳಿದ್ದಾನೆ.

    ವೈರಲ್ ಆಗಿರುವ ಈ ವಿಡಿಯೋವನ್ನು ಈವರೆಗೆ 4 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅನೇಕರು ಕಮೆಂಟ್ ಮಾಡಿ ನಿಕ್​ನ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಕೆಲವು ಮಂದಿ ವಿಷ ಸರ್ಪಗಳೊಂದಿಗೆ ಸಾಹಸ ಮಾಡುವಾದ ಜಾಗರೂಕತೆ ಅಗತ್ಯ. ಸ್ವಲ್ಪ ಎಡವಿದರೂ ಜೀವಕ್ಕೆ ಕಟ್ಟಿಟ್ಟಬುತ್ತಿ ಎಂದು ಸೂಚನೆ ನೀಡಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts