ಅಭ್ಯರ್ಥಿ ಪಟ್ಟಿಯಲ್ಲಿ ಹೆಸರಿಲ್ಲವೆಂದು ತಲೆ ಬೋಳಿಸಿಕೊಂಡು ಹೋರಾಟ ನಡೆಸಿದ ಕಾಂಗ್ರೆಸ್​ ನಾಯಕಿ

congress
Published on

ತಿರುವನಂತಪುರಂ: ಕೇರಳದ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್​ ಬಿಡುಗಡೆ ಮಾಡಿದೆ. ಮಹಿಳಾ ಕಾಂಗ್ರೆಸ್​ ಘಟಕದ ಅಧ್ಯಕ್ಷೆಯ ಹೆಸರನ್ನೂ ಪಕ್ಷ ಕೈ ಬಿಟ್ಟಿದೆ. ಈ ಪಟ್ಟಿಯಿಂದ ಪಕ್ಷದ ಹಲವು ನಾಯಕರ ನಡುವೆ ವೈಮನಸ್ಸು ಉಂಟಾಗಿದ್ದು, ಅವರೆಲ್ಲ ಪಕ್ಷದ ವಿರುದ್ಧ ತಿರುಗಿ ನಿಲ್ಲುವಂತಾಗಿದೆ.

ರಾಜ್ಯ ಮಹಿಳಾ ಕಾಂಗ್ರೆಸ್​ನ ಅಧ್ಯಕ್ಷೆ ಲತಿಕಾ ಸುಭಾಷ್​ ಎತ್ತುಮನೂರ್ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಯಲು ಬಯಸಿದ್ದರಂತೆ. ಪಕ್ಷ ಆಕೆಯ ಬಯಕೆಯನ್ನು ಈಡೇರಿಸುವ ನಂಬಿಕೆಯನ್ನೂ ಇಟ್ಟುಕೊಂಡಿದ್ದರಂತೆ. ಆದರೆ ಅದು ಹುಸಿಯಾಗಿದೆ. ಕಾಂಗ್ರೆಸ್​ ಲತಿಕಾಗೆ ಟಿಕೆಟ್​ ನಿರಾಕರಿಸಿದೆ. ಇದರಿಂದಾಗಿ ಮನನೊಂದಿರುವ ಲತಿಕಾ ಕಾಂಗ್ರೆಸ್​ ವಿರುದ್ಧ ವಿಶೇಷ ರೀತಿಯಲ್ಲಿ ಹೋರಾಟ ನಡೆಸಿದ್ದಾರೆ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ತಲೆ ಬೋಳಿಸಿಕೊಂಡು ನ್ಯಾಯ ಕೇಳಿದ್ದಾರೆ.

ಕಾಂಗ್ರೆಸ್​ನಲ್ಲಿ ಮಹಿಳೆಯರನ್ನು ನಿರ್ಲಕ್ಷಿಸಲಾಗಿದೆ. ಹಲವು ವರ್ಷಗಳಿಂದ ಶ್ರಮ ಹಾಕಿ ದುಡಿದ ನಮ್ಮಂತವರನ್ನು ಲೆಕ್ಕದಲ್ಲಿ ಇಟ್ಟುಕೊಂಡಿಲ್ಲ ಎಂದು ಅವರು ದೂರಿದ್ದಾರೆ. ನಾನು ಬೇರಾವುದೇ ಪಕ್ಷವನ್ನು ಸೇರಿಕೊಳ್ಳುವುದಿಲ್ಲ. ಪಕ್ಷೇತರ ಸ್ಫರ್ದಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net