

ದುಬೈ: ಅದೃಷ್ಟ ಬಂದರೆ ಒದ್ದುಕೊಂಡು ಬಂದುಬಿಡುತ್ತದೆ ಎನ್ನುತ್ತಾರೆ. ಆ ಮಾತು ಇಲ್ಲೊಬ್ಬ ವ್ಯಕ್ತಿಗೆ ಸತ್ಯವಾಗಿದೆ. ಕೇರಳದಿಂದ ದೂರದ ದುಬೈಗೆ ಹೋಗಿ ಡ್ರೈವರ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ವ್ಯಕ್ತಿ ಇದೀಗ 40 ಕೋಟಿ ರೂಪಾಯಿಯ ಒಡೆಯನಾಗಿದ್ದಾನೆ.
ಕೇರಳ ಮೂಲದ ರಂಜಿತ್ ಸೋಮರಾಜನ್ (37) ಈ ರೀತಿ ಅದೃಷ್ಟ ಒಲಿಸಿಕೊಂಡ ವ್ಯಕ್ತಿ. ಆತ ಅಲ್ಲಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಾನಂತೆ. 2008ರಲ್ಲಿ ದುಬೈಗೆ ಹೋದ ಅವನಿಗೆ ಅಲ್ಲಿಯೇ ಕುಟುಂಬವೂ ಇದೆ. ಕಳೆದ ಮೂರು ವರ್ಷಗಳಿಂದ ರಂಜಿತ್ ಮತ್ತು ಆತನ ಸ್ನೇಹಿತರು ಲಾಟರಿ ಟಿಕೆಟ್ ಖರೀದಿಸುತ್ತಿದ್ದಾರಂತೆ. ಅದೇ ರೀತಿ 10 ಜನ ಸ್ನೇಹಿತರು ಸೇರಿಕೊಂಡು ಜೂನ್ 29ರಂದು ರಂಜಿತ್ ಹೆಸರಿಗೆ ಲಾಟರಿ ಟಿಕೆಟ್ ಖರೀದಿಸಿದ್ದರು.
ಆ ಲಾಟರಿಯಲ್ಲಿ ಎರಡು ಅಥವಾ ಮೂರನೇ ಬಹುಮಾನ ಬರಬಹುದು ಎನ್ನುವ ನಂಬಿಕೆ ರಂಜಿತ್ಗೆ ಇತ್ತಂತೆ. ಆದರೆ ಅವನ ಅದೃಷ್ಟಕ್ಕೆ ಮೊದಲನೇ ಬಹುಮಾನವೇ ಬಂದುಬಿಟ್ಟಿದೆ. ಈ ಮೂಲಕ 40 ಕೋಟಿ ರೂಪಾಯಿ ರಂಜಿತ್ ಮತ್ತು ಆತನ ಸ್ನೇಹಿತರ ಪಾಲಾಗಿದೆ. (ಏಜೆನ್ಸೀಸ್)