KCET 2023 | ನಾಳೆ ಫಲಿತಾಂಶ ಪ್ರಕಟ

results
Published on

ಬೆಂಗಳೂರು: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2023ರ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಾಳೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಿದೆ.

ಫಲಿತಾಂಶ ಪ್ರಕಟ ಪಡಿಸಲು ಕೆಇಎ ನಿರ್ಧಾರ ಮಾಡಿದ್ದು, 2023 ಜೂನ್​​ 15 ರಂದು ಬೆಳಿಗ್ಗೆ 11.00 ರಿಂದ ಪ್ರಾಧಿಕಾರದ ವೆಬ್ ಸೈಟ್ http://kea.kar.nic.in ನಲ್ಲಿ ಫಲಿತಾಂಶ ಪ್ರಕಟ ವಾಗಲಿದೆ.

ಮೇ 21 , 22 ರಂದು ‌ನಡೆದಿದ್ದ ಸಿಇಟಿ ಪರೀಕ್ಷೆಯ ‌ಕೀ ಉತ್ತರಗಳನ್ನು ಕೆಇಎ ಈಗಾಗಲೇ ಪ್ರಕಟ ಮಾಡಿದೆ. 2 ಲಕ್ಷದ 39 ಸಾವಿರದ 716 ಜನ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2023ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ ಬಿಡುಗಡೆ ಕಾರ್ಯಕ್ರಮವನ್ನು ಪ್ರಾಧಿಕಾರದ ಸಭಾಂಗಣದಲ್ಲಿ ಗುರುವಾರ ಬೆಳಿಗ್ಗೆ 9:30 ಆಯೋಜಿಸಿದ್ದು, ಡಾ: ಎಮ್. ಸಿ. ಸುಧಾಕರ್ ಮಾನ್ಯ ಉನ್ನತ ಶಿಕ್ಷಣ ಸಚಿವರು ಫಲಿತಾಂಶವನ್ನು ಬಿಡುಗಡೆಗೊಳಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net