ವಿಕ್ಕಿ ಯಾವಾಗಲೂ ಕೂಲ್​ ಆಗಿಯೇ ಇರುತ್ತಾರೆ; ಪತಿ ಕುರಿತು ಕತ್ರಿನಾ ಕೈಫ್​ ಮೆಚ್ಚುಗೆ ಮಾತು ಹೀಗಿದೆ..

Untitled-design-2024-09-18T160502.484
Published on

ಮುಂಬೈ: ಬಾಲಿವುಡ್​ ಕ್ಯೂಟ್​ ಕಪಲ್​ಗಳಲ್ಲಿ ಕತ್ರಿನಾ ಕೈಫ್​​ ಮತ್ತು ವಿಕ್ಕಿ ಕೌಶಲ್​ ಕೂಡ ಒಬ್ಬರು. 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ದಂಪತಿಯನ್ನು ದೊಡ್ಡ ಪರದೆಯಲ್ಲಿ ಒಟ್ಟಿಗೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಇವರ ವೈವಾಹಿಕ ಜೀವನದ ವಿಚಾರ ಹೇಳುವುದಾದರೆ ಇಬ್ಬರು ಒಬ್ಬರನ್ನೊಬ್ಬರು ಅರ್ಥೈಸಿಕೊಂಡಿರುವಂತೆ ಕಾಣುತ್ತದೆ. ವಿವಾಹವಾದ ದಿನದಿಂದ ಇಲ್ಲಿಯವರೆಗೆ ಈ ಜೋಡಿ ಬಗ್ಗೆಗಿನ ಯಾವುದೇ ನೆಗೆಟಿವ್​​ ವಿಷಯಗಳು ಕೇಳಿಬಂದಿಲ್ಲ. ಆದರೆ ಕತ್ತಿನಾ ಕೈಫ್​ ತಮ್ಮ ಪತಿ ಬಗ್ಗೆ ಹೇಳುವ ಹೊಗಳಿಕೆ ಮಾತುಗಳು ಆಗಾಗ್ಗೆ ಸಾಮಾಜಿಕ ಜಾಲತಾಣಲ್ಲಿ ಮುನ್ನೆಲೆಗೆ ಬರುತ್ತಿರುತ್ತದೆ.

ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಕತ್ರಿನಾ ಕೈಫ್​ ತಮ್ಮ ಸಂಬಂಧದ ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತಾರೆ ಮತ್ತು ಅವುಗಳನ್ನು ಹೇಗೆ ಸರಿಪಡಿಸಿಕೊಳ್ಳುತ್ತಾರೆ ಎಂಬುದರ ಕುರಿತು ಮಾತನಾಡಿದ್ದಾರೆ. ತಮ್ಮ ಪತಿ ವಿಕ್ಕಿ ಕೌಶಲ್​ ಎಷ್ಟು ಕೂಲ್​ ಆಗಿರುತ್ತಾರೆ ಎಂಬುದನ್ನು ಬಣ್ಣಿಸಿದ್ದಾರೆ. ಬ್ಯೂಟಿ, ತೂಕ ಹೆಚ್ಚಾಗುವ ಕುರಿತು, ಔಟ್​ಫಿಟ್​ ಬಗ್ಗೆ ಮಾತನಾಡುವಾಗ ತಮ್ಮ ಪತಿಯ ಸಹಕಾರ ಹೇಗಿದೆ ಎಂಬುದನ್ನು ಉದಾಹರಣೆ ನೀಡುವ ಮೂಲಕ ಬಹಿರಂಗಪಡಿಸಿದ್ದಾರೆ.

ನಾನು ವಿಕ್ಕಿ ಜತೆ ಇದ್ದಾಗ ಅಥವಾ ಯಾವುದಾದರೂ ಈವೆಂಟ್​​ಗೆ ರೆಡಿಯಾಗುವಾಗ ನಾನು ತೂಕ ಹೆಚ್ಚಾಗಿರುವ ಬಗ್ಗೆ ಹಾಗೂ ನಾನು ಲುಕ್​ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳುತ್ತೇನೆ. ನನ್ನನ್ನು ನಾನು ನೋಡಿಕೊಳ್ಳುತ್ತಿರುವುದು ನನಗೆ ಸಂತೋಷವಾಗುತ್ತಿಲ್ಲ. ನಾನು ತೂಕ ಹೆಚ್ಚಾಗಿದ್ದೇನೆ ಇದು ನನಗೆ ಕಂಫವರ್ಟ್​​ ಇಲ್ಲ ಎಂದೆಲ್ಲಾ ಕೇಳುತ್ತೇನೆ.

ಸ್ವಲ್ಪ ಸಮಯ ನನ್ನ ಬಳಿಯೇ ಕುಳಿತುಕೊಂಡು ವಿಕ್ಕಿ, ನೀವು ಹೇಗಿದ್ದರೂ ಪರವಾಗಿಲ್ಲ. ನೀನು ನೀವಾಗಿಯೇ ಇರು. ನೀವು ಹೇಗಿದ್ದೀರೋ ಹಾಗೆಯೇ ಇರಿ ಎಂದು ಎಲ್ಲರಿಗೂ ಹೇಳುವವರು ನೀವೇ ಅಲ್ಲವೆ ಎಂದು ಕೂಲ್​ ಆಗಿಯೇ ಹೇಳುತ್ತಾರೆ. ಆಗ ನಾನು ವಿಕ್ಕಿಯನ್ನು ಒಂದು ರೀತಿ ನೋಡುತ್ತೇನೆ. ಬಳಿಕ ಅವನು ಹೇ..ಒಂದು ಸೆಕೆಂಡ್ ಎಂದು ಶಾಂತವಾಗಿಯೇ ಕುಳಿತಿರುತ್ತಾರೆ ಎಂದು ಹೇಳಿದ್ದಾರೆ. ಅವರು ನೀಡುವ ಧೈರ್ಯದಿಂದಲೇ ನಾನು ಇದನ್ನು (ಬ್ರಾಂಡ್​​) ಪ್ರಾರಂಭಿಸಿದೆ. ಅವರ ಮಾತುಗಳನ್ನು ಸದಾ ನೆನೆಯುತ್ತೇನೆ ಅದು ನನಗೆ ಪ್ರಮುಖವಾಗಿದೆ ಎಂದು ಹೇಳಿದ್ದಾರೆ.

ಈ ಹಿಂದೆಯೂ ಕತ್ರಿನಾ ಕೈಫ್​​ ಶೂಟಿಂಗ್​ ಬಳಿಕ ಮನೆಗೆ ಹಿಂತಿರುಗಿದಾಗ ಕೆಲವೊಮ್ಮೆ ಕೋಪವನ್ನು ವಿಕ್ಕಿ ಮೇಲೆ ತೋರಿಸುತ್ತೇನೆ. ಆದರೆ ಅವನಿಂದ ಯಾವುದೆ ನಕಾರಾತ್ಮಕ ಪ್ರತಿಕ್ರಿಯೆ ಬರುವುದಿಲ್ಲ. ಕೂಲ್​ ಆಗಿಯೇ ಇರುತ್ತಾರೆ ಎಂದು ಹೇಳಿದ್ದರು. ಕತ್ರಿನಾ ಕೈಫ್​​ ವಿಜಯ್​ ಸೇತುಪತಿ ಜತೆ ಮೆರ್ರಿ ಕ್ರಿಸ್​ಮಸ್​​ನಲ್ಲಿ ಕೊನೆಯದಾಗಿ ಕಾಣಸಿಕೊಂಡಿದ್ದರು. ನಟನೆ ಜತೆಗೆ ಯಶಸ್ವಿ ಉದ್ಯಮಿಯಾಗುತ್ತ ಸಾಗಿರುವ ಕ್ಯಾಟ್​ 2019ರಲ್ಲಿ ತಮ್ಮ ಸೌಂದರ್ಯ ಬ್ರ್ಯಾಂಡ್ ಕೇ ಬ್ಯೂಟಿ ಬೈ ಕತ್ರಿನಾವನ್ನು ಪ್ರಾರಂಭಿಸಿದರು. ಅಂದಿನಿಂದ ಇದು ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net