

ಮುಂಬೈ: 14 ಬಾರಿ ಪ್ರಯತ್ನಿಸಿದರೂ ತಾಯಿಯಾಗಲು ಸಾಧ್ಯವಾಗಲಿಲ್ಲ, ಆದರೆ ಸಲ್ಮಾನ್ ಖಾನ್ ಸಲಹೆಯಿಂದಾಗಿ ಎರಡು ಮಕ್ಕಳಿಗೆ ತಾಯಿಯಾಗಿದ್ದೇನೆ ಎಂದು ಬಾಲಿವುಡ್ ಬೆಡಗಿ ಕಾಶ್ಮೀರಾ ಶಾ ಹೇಳಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗುತ್ತಿದೆ.
ತೆಲುಗು ಸಿನಿಮಾಗಳ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ಬಾಲಿವುಡ್ ಬೆಡಗಿ ಕಾಶ್ಮೀರಾ ಶಾ. ಹಿಂದಿ, ತಮಿಳು, ಮರಾಠಿ, ಭೋಜ್‌ಪುರಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಬಾಲಿವುಡ್‌ನಲ್ಲಿ, ಅವರು ಬಿಗ್ ಬಾಸ್, ಖತ್ರೋನ್ ಕೆ ಖಿಲಾಡಿ 4, ನಾಚ್ ಬಲಿಯೇ 3 ನಂತಹ ಜನಪ್ರಿಯ ಟಿವಿ ಶೋಗಳಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡರು. 2003 ರಲ್ಲಿ ಬ್ರಾಡ್ ಲಿಟ್ಟರ್‌ಮ್ಯಾನ್ ಅವರನ್ನು ವಿವಾಹವಾದರು ಮತ್ತು ನಾಲ್ಕು ವರ್ಷಗಳ ನಂತರ ಭಿನ್ನಾಭಿಪ್ರಾಯಗಳಿಂದ ಬೇರ್ಪಟ್ಟರು.
ಅದರ ನಂತರ ಅವರು ಜನಪ್ರಿಯ ನಟ ಮತ್ತು ಟಿವಿ ನಿರೂಪಕ ಕೃಷ್ಣ ಅಭಿಷೇಕ್ ಅವರನ್ನು 2013 ರಲ್ಲಿ ವಿವಾಹವಾದರು. ಇಬ್ಬರೂ ಜನಪ್ರಿಯ ಕಪಿಲ್ ಶರ್ಮಾ ಶೋನಲ್ಲಿ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡರು. ಇದರೊಂದಿಗೆ ಬಿ-ಟೌನ್‌ನಲ್ಲಿ ಈ ಜೋಡಿ ಒಳ್ಳೆಯ ಹೆಸರು ಗಳಿಸಿದೆ. ಆದರೆ ಈ ದಂಪತಿ ಮಕ್ಕಳ ವಿಚಾರವಾಗಿ ಹಲವು ವರ್ಷಗಳಿಂದ ಬೇಸರದಲ್ಲಿದ್ದರು. ಮಕ್ಕಳಿಗಾಗಿ ಸುಮಾರು 14 ಬಾರಿ ಪ್ರಯತ್ನಿಸಿದರೂ ವಿಫಲವಾಗಿದ್ದರು. ಐವಿಎಫ್ ಮೂಲಕ ಮಗುವನ್ನು ಪಡೆಯಲು ಪ್ರಯತ್ನಿಸಿದರು ಆದರೆ ಯಶಸ್ವಿಯಾಗಲಿಲ್ಲ. ಆದರೆ ಇತ್ತೀಚಿನ ಸಂದರ್ಶನವೊಂದರಲ್ಲಿ ಸಲ್ಮಾನ್ ನೀಡಿದ ಒಂದು ಸಲಹೆಯಿಂದ ಇಬ್ಬರೂ ಪೋಷಕರಾಗಿದ್ದಾರೆ ಎಂದು ನಟಿ ಹೇಳಿಕೊಂಡಿದ್ದಾರೆ.
'ಬಾಡಿಗೆ ತಾಯ್ತನದ ಮೂಲಕ ಪೋಷಕರಾಗಲು ಪ್ರಯತ್ನಿಸುವಂತೆ ಸಲ್ಮಾನ್ ಸಲಹೆ ನೀಡಿದ್ದಾರೆ. ಇದರೊಂದಿಗೆ, ನಾನು ಮತ್ತು ಕೃಷ್ಣ ಅವರು ಬಾಡಿಗೆ ತಾಯ್ತನವನ್ನು ಪ್ರಯತ್ನಿಸಿದೇವು. ಮದುವೆಯಾದ ಸುಮಾರು ನಾಲ್ಕು ವರ್ಷಗಳ ನಂತರ ಇಬ್ಬರು ಮಕ್ಕಳ ಪೋಷಕರಾಗಿದ್ದೇವೆ' ಎಂದಿದ್ದಾರೆ ಕಾಶ್ಮೀರಾ ಶಾ.
'ಆದರೆ, ಕಾಶ್ಮೀರಿ ಗ್ಲಾಮರ್‌ಗಾಗಿ ಬಾಡಿಗೆ ತಾಯ್ತನದ ಮೊರೆ ಹೋಗಿದ್ದು, ಮಕ್ಕಳ ಜನನದ ನಂತರ ತನಗೆ ತುಂಬಾ ತೊಂದರೆಯಾಗಿದೆ ಎಂದು ವರದಿಯಾಗಿದೆ. ಈಗ ನಿಜ ಹೇಳಬೇಕೆಂದರೆ ಆ ಸುದ್ದಿಗಳೆಲ್ಲ ವದಂತಿಗಳು ಅಷ್ಟೆ. ಸಲ್ಮಾನ್ ಸಲಹೆಯಿಂದ ಮನೆ ಗಿಜಿಗುಡುತ್ತಿದೆ. ಸಂತೋಷ ನೆಲೆಸಿದೆ' ಎಂದು ಹೇಳಿಕೊಂಡಿದ್ದಾರೆ.