ಹಸುಗೂಸಿನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಬಂದ ಮಹಿಳೆಗೆ ನೆರವಾಗಿದ್ದು ಒಬ್ಬ ಮಹಿಳಾ ಕಾನ್ಸ್‌ಟೇಬಲ್

Woman constable takes care of infant while mother writes exam in Ahmedabad
Published on

ಅಹಮದಾಬಾದ್: ಮಹಿಳಾ ಪೇದೆಯೊಬ್ಬರು ತಮ್ಮ 6 ತಿಂಗಳ ಮಗನೊಂದಿಗೆ 'ಗುಜರಾತ್ ಹೈಕೋರ್ಟ್ ಪ್ಯೂನ್ ನೇಮಕಾತಿ' ಪರೀಕ್ಷೆ ಬರೆಯಲು ಬಂದಿದ್ದರು. ಇನ್ನೋರ್ವ ಮಹಿಳಾ ಪೇದೆ ಪರೀಕ್ಷೆಯವರೆಗೂ ಮಗುವನ್ನು ಜೋಪಾನವಾಗಿ ನೋಡಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗುಜರಾತ್‌ನ 'ಹೈಕೋರ್ಟ್ ಪ್ಯೂನ್ ನೇಮಕಾತಿ' ಪರೀಕ್ಷೆಯು ಅಹಮದಾಬಾದ್‌ನ ಓಧವ್‌ನಲ್ಲಿ ನಡೆಯಿತು. ಈ ಪರೀಕ್ಷೆಗೆ ಮಹಿಳಾ ಪೇದೆಯೊಬ್ಬರು ತಮ್ಮ 6 ತಿಂಗಳ ಮಗುವಿನ ಜತೆಗೆ ಬಂದಿದ್ದರು. ಒಂದೆಡೆ ಪರೀಕ್ಷೆ ಶುರುವಾಗುತ್ತಿದ್ದಂತೆ ಮಗು ಅಳತೊಡಗಿತು. ಅಂತಹ ಪರಿಸ್ಥಿತಿಗಳಲ್ಲಿ ಪರೀಕ್ಷೆ ಬರೆಯುವುದು ಅವಳಿಗೆ ಸವಾಲಿನಂತೆ ಆಗಿತ್ತು. ಪರಿಸ್ಥಿತಿಯನ್ನು ನೋಡಿದ ಕಾನ್ಸ್‌ಟೇಬಲ್ ದಯಾ ಬೆನ್ ಮಧ್ಯಪ್ರವೇಶಿಸಿ, ಮಗುವನ್ನು ನಾನು ನೋಡಿಕೊಳ್ಳುತ್ತೇನೆ. ನೀವು ಪರೀಕ್ಷೆಗೆ ಹಾಜರಾಗಿ ಎಂದು ಸಹಾಯ ಮಾಡಿದರು.

ಅಹಮದಾಬಾದ್ ಪೊಲೀಸರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ನಂತರ ಕಾನ್ಸ್‌ಟೇಬಲ್ ಮಗುವಿನೊಂದಿಗೆ ಆಟವಾಡುತ್ತಿರುವ ಫೋಟೋಗಳು ವೈರಲ್ ಆಗಿವೆ.

ನೆಟಿಜನ್‌ಗಳು ಈ ವಿಡಿಯೋಗೆ 'ಥ್ಯಾಂಕ್ಯೂ ವೆರಿ ಮಚ್ ಅಕ್ಕ' ಎಂದು ಕಮೆಂಟ್ ಮಾಡಿದ್ದಾರೆ. ನಿಜವಾಗಿಯೂ ದಯಾ ಬೆನ್ ಉತ್ತಮ ಪೊಲೀಸ್ ಸ್ಟೇಬಲ್ ಎಂದು ಹೇಳುತ್ತಾ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಅಹಮದಾಬಾದ್‌ನ ಓಧವ್‌ನಲ್ಲಿ ಪರೀಕ್ಷೆ ಬರೆಯುತ್ತಿದ್ದ ತಾಯಿಗೆ ದಯಾ ಎಂಬ ಮಹಿಳಾ ಕಾನ್‌ಸ್ಟೆಬಲ್ ಸಹಾಯ ಮಾಡಿದ್ದಾಳೆ. 'ಮಗು ಅಳಲು ಆರಂಭಿಸಿದಾಗ ದಯಾ ಮಧ್ಯ ಪ್ರವೇಶಿಸಿ ಮಹಿಳೆ ಪರೀಕ್ಷೆ ಬರೆಯಲು ಸಹಾಯ ಮಾಡಿದಳು' ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಪೋಸ್ಟ್ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net