ಭಾರತೀಯ ಸಂಪ್ರದಾಯ ಮುಂದಿನ ಪೀಳಿಗೆಗೆ ಹಸ್ತಾಂತರಿಸಿ

25 nrp 1.kasapa
ಎನ್.ಆರ್.ಪುರದ ಅಗ್ರಹಾರ ಉಮಾ ಮಹೇಶ್ವರ ಸಭಾ ಭವನದಲ್ಲಿ ನಡೆದ ಶ್ರಾವಣದಲ್ಲಿ ಶ್ರವಣ ಕಾರ್ಯಕ್ರಮದಲ್ಲಿ ಕಮ್ಮರಡಿಯ ಮನೋನ್ಮಣಿಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಭಾಗ್ಯಾ ನಂಜುಂಡಸ್ವಾಮಿ, ಎಚ್.ಎಸ್.ಪೂರ್ಣೇಶ್, ಕಣಿವೆ ವಿನಯ್, ಪಿ.ಕೆ.ಬಸವರಾಜ್, ಜಯಮ್ಮ, ಶ್ಯಾಮಲಾ ಸತೀಶ್ ಇದ್ದರು.
Published on

ಎನ್.ಆರ್.ಪುರ: ಸಂಸ್ಕೃತಿ, ಸಂಪ್ರದಾಯ ಬೆಳೆಯಲು ವೈಜ್ಞಾನಿಕ ಹಿನ್ನೆಲೆಯೂ ಇದೆ ಎಂದು ಶಂಕರ ತತ್ವ ಅಭಿಯಾನ ಭಕ್ತ ವೃಂದದ ಭಜನಾ ಸಂಚಾಲಕಿ ಕಮ್ಮರಡಿಯ ಮನೋನ್ಮಣಿಮೂರ್ತಿ ತಿಳಿಸಿದರು.
ಅಗ್ರಹಾರದ ಉಮಾಮಹೇಶ್ವರ ಸಭಾಭವನದಲ್ಲಿ ತಾಲೂಕು ಕಸಾಪ ಮಹಿಳಾ ಘಟಕ ಹಾಗೂ ಕಣಿವೆ ನಾಗಪ್ರತಿಷ್ಠಾನದ ಆಶ್ರಯದಲ್ಲಿ ಶ್ರಾವಣದಲ್ಲಿ ಶ್ರವಣ ಕಾರ್ಯಕ್ರಮದಡಿ ಸಂಪ್ರದಾಯ ಹಾಡುಗಳ ಸ್ಪರ್ಧೆ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತೀಯ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು. ಸಂಪ್ರದಾಯ ಎನ್ನುವುದು ಮಹಿಳೆಯರಿಗೆ ಸೀಮಿತವಲ್ಲ. ಪುರುಷರೂ ಸಂಪ್ರದಾಯವನ್ನು ಪಾಲಿಸಬೇಕು. ಊಟ ಮಾಡುವಾಗಲೂ ಕೆಲವು ಸಂಪ್ರದಾಯಗಳಿವೆ. ಮನೆಯ ಹಿರಿಯರು ಮೊದಲು ಸಂಪ್ರದಾಯ ಪಾಲಿಸಬೇಕು. ನಮಗೆ ವಿದೇಶಿ ಸಂಸ್ಕೃತಿ ಅಗತ್ಯವಿಲ್ಲ. ಭಾರತೀಯ ಸಂಸ್ಕೃತಿಯು ಶ್ರೇಷ್ಠವಾಗಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್.ಪೂರ್ಣೇಶ್ ಮಾತನಾಡಿ, ಸಂಪ್ರದಾಯದ ಉಡುಗೆ ತೊಡುಗೆಗಳು ಮಹಿಳೆಯರಿಗೆ ಭೂಷಣ. ಕಸಾಪದಿಂದ ಮುಂದಿನ ದಿನಗಳಲ್ಲಿ ಜಾನಪದ ಗುಂಪು ಸ್ಪರ್ಧೆ ಏರ್ಪಡಿಸುತ್ತೇವೆ. ಕಣಿವೆ ವಿನಯ್ ಅವರ ಮನೆಯಲ್ಲಿ ನವೆಂಬರ್‌ನಲ್ಲಿ ಕಸಾಪ ಹೋಬಳಿ ಸಮಾವೇಶ ನಡೆಸಲಿದ್ದೇವೆ ಎಂದರು.
ಕಣಿವೆ ನಾಗಚಂದ್ರ ಪ್ರತಿಷ್ಠಾನದ ಅಧ್ಯಕ್ಷ ಕಣಿವೆ ವಿನಯ್ ಮಾತನಾಡಿ, ಸಂಪ್ರದಾಯ ಗೀತೆಗಳ ದೊಡ್ಡ ಹಬ್ಬವಾಗಿದೆ. ವಿದೇಶಿಯರು ಸಹ ಭಾರತೀಯ ಸಂಪ್ರದಾಯದ ಉಡುಗೆ ತೊಡುಗೆಗಳ ಬಗ್ಗೆ ವಿಶೇಷ ಗೌರವ ಹೊಂದಿದ್ದಾರೆ. ನಾಗಚಂದ್ರ ಪ್ರತಿಷ್ಠಾನದ ಆಶ್ರಯದಲ್ಲಿ ನವೆಂಬರ್‌ನಲ್ಲಿ ಕಸಾಪ ಹೋಬಳಿ ಸಮಾವೇಶ ಏರ್ಪಡಿಸಲಿದ್ದೇವೆ ಎಂದು ತಿಳಿಸಿದರು.
ಸಾಹಿತಿ ಜಯಮ್ಮ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪೂರ್ವಾಧ್ಯಕ್ಷ ಪಿ.ಕೆ.ಬಸವರಾಜ್, ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶ್ಯಾಮಲಾ ಸತೀಶ್, ಆಲಂದೂರು ನಂದಿನಿ, ಶಶಿಕಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net