ವಿಜಯ್​ ರ‍್ಯಾಲಿ ವೇಳೆ ಕಾಲ್ತುಳಿತ, ಸಾವು-ನೋವು! ನಿಜವಾಯ್ತು ಆತ ನುಡಿದ ಭವಿಷ್ಯ; ಹಳೆಯ ವಿಡಿಯೋ ವೈರಲ್ | ​Karur Stampede

ವಿಜಯವಾಣಿ - 2025-09-28T184133.460
Published on

​Karur Stampede: ನಿನ್ನೆ (ಸೆ.27) ತಮಿಳುನಾಡಿನ ಕರೂರಿನಲ್ಲಿ ಟಿವಿಕೆ ಪಕ್ಷದ ನಾಯಕ, ನಟ ದಳಪತಿ ವಿಜಯ್ ಆಯೋಜಿಸಿದ್ದ ಸಭೆಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಒಟ್ಟು 40 ಜನರು ಉಸಿರು ಚೆಲ್ಲಿದ್ದು, 50ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದುರ್ಘಟನೆ ಬೆನ್ನಲ್ಲೇ ಹಳೆಯ ವಿಡಿಯೋವೊಂದು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಇಡೀ ದೇಶವನ್ನೇ ಬೆಚ್ಚಿಬೀಳಿಸಿರುವ ಕರೂರಿನ ಕಾಲ್ತುಳಿತ ಘಟನೆ ಹೀಗೆ ಸಂಭವಿಸುತ್ತೆ ಹಾಗೂ ಈ ಘಟನೆಯಲ್ಲಿ 50 ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ಓರ್ವ ವ್ಯಕ್ತಿ, ಎರಡು ವಾರಗಳ ಹಿಂದಷ್ಟೇ ಭವಿಷ್ಯ ನುಡಿದಿದ್ದರು. ಅಚ್ಚರಿ ಎಂಬಂತೆ ಆ ಮಾತು ಇದೀಗ ಸತ್ಯವಾಗಿದೆ. ಇದರ ವಿಡಿಯೋ ಮತ್ತು ಟ್ವೀಟ್​ವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಟ್ವೀಟ್​ನಲ್ಲಿದ್ದ ವಿಷಯವೇನು? ​

“ತಮಿಳುನಾಡಿನಲ್ಲಿ 2026ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ಕನಿಷ್ಠ ಒಂದು ಕಾಲ್ತುಳಿತ ಸಂಭವಿಸಲಿದೆ. ಅದರಲ್ಲಿ ಕನಿಷ್ಠ 50 ಯುವಕರು ಸಾವಿಗೀಡಾಗುತ್ತಾರೆ. ಇದೆಲ್ಲದರ ಹಿಂದಿನ ಅಪರಾಧಿ ವಿಜಯ್ ಎಂಬ ಖಳನಾಯಕ. ಇವರು ಡಿಎಂಕೆಗಿಂತ 10 ಪಟ್ಟು ಹೆಚ್ಚು ವಿಷಕಾರಿ. ವಿರೋಧ ಪಕ್ಷಗಳು ಮತ್ತು ಮೈತ್ರಿಕೂಟದ ಪಾಲುದಾರರು ರಾಜಕೀಯದಲ್ಲಿ ಪರಸ್ಪರ ಕೆಸರು ಎರಚುತ್ತಿರುವುದು ರಾಜ್ಯ ರಾಜಕಾರಣದ ಮೂರ್ಖತನವನ್ನು ಎತ್ತಿ ತೋರಿಸುತ್ತದೆ ಎಂದು ಆನಂದ್ ಎಂಬುವವರು ತಮ್ಮ ಎಕ್ಸ್ (ಪ್ರಸ್ತುತ ಟ್ವಿಟರ್​)​ ಖಾತೆಯಲ್ಲಿ ಸೆ.13ರಂದು ಪೋಸ್ಟ್​ ಮಾಡಿದ್ದಾರೆ.

ಅರ್ಜಿ ವಿಚಾರಣೆ ಮದ್ರಾಸ್​ ಹೈಕೋರ್ಟ್​ಗೆ

ಈ ಮಧ್ಯೆ, ಇಂದು (ಸೆ.28) ಸಂಜೆ 4.30ಕ್ಕೆ ಕಾಲ್ತುಳಿತ ಘಟನೆಯ ಕುರಿತು ತುರ್ತು ಅರ್ಜಿಯನ್ನು ವಿಚಾರಣೆ ಮಾಡಲು ಮದ್ರಾಸ್ ಹೈಕೋರ್ಟ್ ಒಪ್ಪಿಕೊಂಡಿದೆ. ಅರ್ಜಿದಾರರು ನಟ ವಿಜಯ್ ಅವರ ತಮಿಳಗಾ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಯಾವುದೇ ಸಾರ್ವಜನಿಕ ಸಭೆಗಳು, ರ್ಯಾಲಿಗಳು ಅಥವಾ ಸಭೆಗಳನ್ನು ನಡೆಸಲು ಅನುಮತಿ ನೀಡದಂತೆ ತಮಿಳುನಾಡು ಪೊಲೀಸ್ ಮಹಾನಿರ್ದೇಶಕರು/ಪೊಲೀಸ್ ಪಡೆ ಮುಖ್ಯಸ್ಥರಿಂದ ಆದೇಶವನ್ನು ಕೋರಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net