2021ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

sahity apic
Published on

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ ಈ ಕೆಳಕಂಡ 5 ಜನ ಹಿರಿಯ ಸಾಹಿತಿಗಳಿಗೆ 50,000 ಸಾವಿರ ರೂ. ನಗದು, ಪ್ರಶಸ್ತಿ ಫಲಕ, ಪ್ರಮಾಣ ಪತ್ರದೊಂದಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2021ನೆಯ ವರ್ಷದ ಪ್ರಶಸ್ತಿ ನೀಡಬೇಕೆಂದು ಅಕಾಡೆಮಿ ಅಧ್ಯಕ್ಷರಾದ ಡಾ. ಬಿ.ವಿ.ವಸಂತಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ.

2021ನೆಯ ವರ್ಷದ ಗೌರವ ಪ್ರಶಸ್ತಿ ಪುರಸ್ಕೃತರು:

1. ಶ್ರೀ ಜಿನದತ್ತ ದೇಸಾಯಿ
2. ಡಾ. ನಾ. ಮೊಗಸಾಲೆ
3. ಡಾ. ಸರಸ್ವತಿ ಚಿಮ್ಮಲಗಿ
4. ಪ್ರೊ. ಬಸವರಾಜ ಕಲ್ಗುಡಿ
5. ಶ್ರೀ ಯಲ್ಲಪ್ಪ ಕೆ.ಕೆ. ಪುರ

2021ನೇ ವರ್ಷದ 'ಸಾಹಿತ್ಯಶ್ರೀ' ಪ್ರಶಸ್ತಿ ಪುರಸ್ಕೃತರು:

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಗಮನಾರ್ಹವಾದ ಸೇವೆಯನ್ನು ಪರಿಗಣಿಸಿ ಈ ಕೆಳಕಂಡ 10 ಜನ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2021ನೇ ವರ್ಷದ ಸಾಹಿತ್ಯಶ್ರೀ ಪ್ರಶಸ್ತಿಯನ್ನು ನೀಡುತ್ತಿದ್ದು, ಈ ಬಾರಿ ಸೃಜನಶೀಲ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದವರಿಗೆ 5 ಪ್ರಶಸ್ತಿಗಳು, ಸೃಜನೇತರ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದವರಿಗೆ 3 ಪ್ರಶಸ್ತಿಗಳು, ಸಾಹಿತ್ಯ ಪಾರಿಚಾರಿಕೆಗೆ 1 ಪ್ರಶಸ್ತಿ ಹಾಗೂ ಹೊರನಾಡಿನ ಸಾಧಕರಿಗೆ 1 ಪ್ರಶಸ್ತಿಯಂತೆ ಒಟ್ಟು 10 ಜನರಿಗೆ ಸಾಹಿತ್ಯ ಪ್ರಶಸ್ತಿ ನೀಡಲಾಗಿದೆ. 25,000 ಸಾವಿರ ರೂ. ನಗದು, ಫಲಕ, ಶಾಲು, ಹಾರ, ಹಾಗೂ ಪ್ರಮಾಣಪತ್ರದೊಂದಿಗೆ ಸಾಹಿತ್ಯಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಬೇಕೆಂದು ಅಕಾಡೆಮಿ ಅಧ್ಯಕ್ಷರಾದ ಡಾ. ಬಿ.ವಿ. ವಸಂತಕುಮಾರ್ ಅವರ ಅಧ್ಯಕ್ಷತೆಯಲ್ಲಿ ತೀರ್ಮಾನಿಸಲಾಗಿದೆ.

1. ಡಾ. ಚಂದ್ರಕಲಾ ಬಿದರಿ
2. ಪ್ರೊ ಎಂ.ಎನ್. ವೆಂಕಟೇಶ್
3. ಡಾ. ಚನ್ನಬಸವಯ್ಯ ಹಿರೇಮಠ
4. ಡಾ. ಮ.ರಾಮಕೃಷ್ಣ
5. ಶ್ರೀ ಅಬ್ದುಲ್ ರಶೀದ್
6. ಡಾ. ವೈ.ಎಂ. ಭಜಂತ್ರಿ
7. ಶ್ರೀ ಜೋಗಿ (ಗಿರೀಶ್​​ರಾವ್ ಹತ್ವಾರ್)
8. ಶ್ರೀ ಮೈಸೂರು ಕೃಷ್ಣಮೂರ್ತಿ
9. ಶ್ರೀ ಗಣೇಶ ಅಮೀನಗಡ
10. ಶ್ರೀ ಆಲೂರು ದೊಡ್ಡನಿಂಗಪ್ಪ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net