VIDEO | ಮಳೆಗಾಗಿ ದೇವರ ಮೊರೆ ಹೋಗುತ್ತಿರುವ ರೈತರು! ಮುತ್ತೈದೆಯರಿಂದ ವಿಶೇಷ ಪೂಜೆ

Pooje
Published on

ಗದಗ: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕಳೆದ ಒಂದು ವಾರಗಳಿಂದ ಮಳೆಯಾಗುತ್ತಿದ್ದರೂ, ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಾಗಿಲ್ಲ. ಇದು ಈ ಭಾಗದ ರೈತರಿಗೆ ಚಿಂತೆ ಕಾಡುವಂತೆ ಮಾಡಿದೆ. ಜೂನ್ ತಿಂಗಳು ಆರಂಭವಾಗಿದ್ದರೂ ವಾಡಿಕೆಯಂತೆ ಮಳೆಯಾಗದೇ ಇರುವುದರಿಂದ ರೈತರು ದೇವರ ಮೊರೆ ಹೋಗುತ್ತಿದ್ದಾರೆ. ಇದನ್ನೂ ಓದಿ: ತಂದೆಯ ಮರಣ ಪ್ರಮಾಣ ಪತ್ರ ಮಾಡಿಸಿಕೊಂಡಿದ್ದ ಮಕ್ಕಳಿಗೆ ಶಾಕ್!

ಗದಗ ಜಿಲ್ಲೆ ರೋಣ ತಾಲೂಕಿನ ಕೌಜಗೇರಿ ಗ್ರಾಮದಲ್ಲಿ ಮಳೆ ಕೊರತೆ ಉಂಟಾಗಿದೆ. ಸರಿಯಾಗಿ ಮಳೆಯಾಗದೇ ಇರುವುದರಿಂದ ಕೃಷಿ ಚಟುವಟಿಕೆ ಆರಂಭಿಸಿಲು ರೈತರು ಯೋಚಿಸುವಂತಾಗಿದೆ. ಇದೀಗ ಕೌಜಗೇರಿ ಗ್ರಾಮದ ಮುತ್ತೈದೆಯರು ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ.

ಕೌಜಗೇರಿ ಗ್ರಾಮದಲ್ಲಿ ಮುತ್ತೈದೆಯರು ಸೇರಿಕೊಂಡು ವಿಶೇಷ ಪೂಜೆ ನೆರವೇರಿಸಿದ್ದಾರೆ. ಗ್ರಾಮದ ಶ್ರೀ ಲಕ್ಷ್ಮಿ ದೇವಸ್ಥಾನದಿಂದ ಸುಮಾರು ನಾಲ್ಕು ಕಿಲೋ ಮೀಟರ್ ದೂರ ಹೊನ್ಯತ್ತೇಮ ದೇವಸ್ಥಾನದವರಿಗೆ ಪಾದಯಾತ್ರೆ ಕೈಗೊಂಡಿದ್ದಾರೆ. ಬಳಿಕ ಸಗಟ್ಟಿ, ಸಾರು ಮಾಡಿ ದೇವತೆಗೆ ನೈವೇದ್ಯ ಅರ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net