

ಬೆಂಗಳೂರು: ರಾಜ್ಯ ಪೊಲೀಸ್ ಅಧಿಕಾರಿ/ಸಿಬ್ಬಂದಿಗೆ ಸದ್ಯಕ್ಕೆ ವೇತನ ಅರಿಯರ್ಸ್, ಹಬ್ಬದ ಮುಂಗಡ, ವಾರದ ಭತ್ಯೆ ಇನ್ನಿತರ ಭತ್ಯೆಗಳು ಸಿಗುವುದಿಲ್ಲ. ಕೇವಲ ವೇತನ ಮಾತ್ರ ಕೈ ಸೇರಲಿದೆ.
ಕರೊನಾ ಲಾಕ್ಡೌನ್ನಿಂದ ಉಂಟಾಗಿರುವ ಆಥಿರ್ಕ ಸಂಕಷ್ಟವನ್ನು ಸರಿದೂಗಿಸಲು 2020 ಮತ್ತು 21ನೇ ಸಾಲಿನ ಆಥಿರ್ಕ ವರ್ಷದಲ್ಲಿ ವೇತನ ಬಿಲ್ಗಳನ್ನು ಮಾತ್ರ ಖಜಾನೆಗೆ ಕಳುಹಿಸುವಂತೆ ಜಿಲ್ಲಾ ಎಸ್ಪಿ, ಕಮಿಷನರ್ಗಳಿಗೆ ರಾಜ್ಯ ಪೊಲೀಸ್ ಇಲಾಖೆ ಸುತ್ತೋಲೆ ಹೊರಡಿಸಿದೆ.
ಅರಿಯರ್ಸ್, ಹಬ್ಬದ ಮುಂಗಡ, ವಾರದ ಭತ್ಯೆ ಮತ್ತು ವೇತನದ ಇನ್ನಿತರ ಭತ್ಯೆಗಳ ಬಿಲ್ಲುಗಳನ್ನು ಖಜಾನೆ-2ಗೆ ಸಲ್ಲಿಸಲು ಆಥಿರ್ಕ ಇಲಾಖೆಯ ಅನುಮತಿ ಪಡೆಯಬೇಕಾಗಿದೆ. ಒಂದು ವೇಳೆ ಡ್ರಾ ಮಾಡಲು ಖಜಾನೆ-2ಗೆ ಬಾಕಿ ಬಿಲ್ಲುಗಳನ್ನು ರವಾನೆ ಮಾಡಿದರೆ ನಿರ್ವಾಹಕರು, ಶಾಖಾಧೀಕ್ಷಕರು ಹಾಗೂ ಸಹಾಯಕ ಆಡಳಿತಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಡಿಜಿ ಮತ್ತು ಐಜಿಪಿ ಪ್ರವಿಣ್ ಸೂದ್ ಎಚ್ಚರಿಕೆ ನೀಡಿದ್ದಾರೆ.