More

    ಪೊಲೀಸರೇ ಕಿಡ್ನ್ಯಾಪರ್​ಗಳನ್ನು ಬಿಟ್ಟು ಕಳಿಸಿದರೂ ಜೈಲಿಗೆ ತಳ್ಳಿದ ವಾಟ್ಸ್ಆ್ಯಪ್ ಸ್ಟೇಟಸ್​!

    ಬೆಂಗಳೂರು: ಕೆಫೆ ಮಾಲೀಕನನ್ನು ಅಪಹರಿಸಿ 26 ಲಕ್ಷ ರೂಪಾಯಿ ಮತ್ತು ಆಡಿ ಕಾರು ಸುಲಿಗೆ ಮಾಡಿದ್ದ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರೇ ಅವರನ್ನು ಬಿಟ್ಟು ಕಳುಹಿಸಿ ಈಗ ಪೇಚಿಗೆ ಸಿಲುಕಿದ್ದಾರೆ!

    ಕೆಫೆ ಮಾಲೀಕನ ಕಿಡ್ನ್ಯಾಪ್​ ಪಕ್ರರಣ ಸಂಬಂಧ ಸದಾಶಿವನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ ಆನಂತರ ಬಿಟ್ಟು ಕಳುಹಿಸಿದ್ದರು. ಆರೋಪಿಗಳು ಹೊರಬಂದ ಖುಷಿಯಲ್ಲಿ ಮೊಬೈಲ್​ ಸ್ಟೇಟಸ್​ನಲ್ಲಿ ಅಪ್​ಡೇಟ್​ ಮಾಡಿ ಮತ್ತೆ ಜೈಲು ಸೇರಿದ್ದಾರೆ. ಪೊಲೀಸರ ವಿರುದ್ಧವೇ ಆರೋಪ ಕೇಳಿಬಂದಿದ್ದರಿಂದ ಪ್ರಕರಣದ ತನಿಖೆಯನ್ನು ಹೈಗ್ರೌಂಡ್ಸ್​ ಠಾಣೆಗೆ ವರ್ಗಾವಣೆ ಮಾಡಿ ಪೊಲೀಸ್​ ಇಲಾಖೆ ಆದೇಶಿಸಿದೆ.

    ಇದನ್ನೂ ಓದಿರಿ ಒಂದೇ ಠಾಣೆಯ ಮೂವರು ಪೇದೆಗಳಿಗೆ ಕರೊನಾ ಪಾಸಿಟಿವ್​

    ರಾಚೇನಹಳ್ಳಿಯ ಅಭಿನವ್​ ಸಿಂಘಾಲ್​(41) ಅಪಹರಣಕ್ಕೆ ಒಳಗಾದವರು. ನ್ಯೂ ಬಿಇಎಲ್​ ರಸ್ತೆ ಬಳಿ “ಕೆಫೆ ಡೇ ಲಾಂಚ್​ ಸ್ಟುಡಿಯೋ” ಎಂಬ ರೆಸ್ಟೋರೆಂಟ್​ನ್ನು ಪಾಲುದಾರ ಆರ್ಯನ್​ ಪ್ರತಾಪ್​ ಜತೆ ನಡೆಸುತ್ತಿದ್ದರು. ಇವರಿಬ್ಬರ ನಡುವೆ ಹಣಕಾಸಿನ ವಿವಾದ ಎಡೆಮಾಡಿಕೊಟ್ಟಿತ್ತು.

    ಮೇ 13ರ ಮಧ್ಯಾಹ್ನ 12.30ರಲ್ಲಿ ರೆಸ್ಟೋರೆಂಟ್​ ಕ್ಯಾಷಿಯರ್​ ಸೇರಿ 9 ಮಂದಿ ಗ್ಯಾಂಗ್​ ರೆಸ್ಟೋರೆಂಟ್​ಗೆ ಅಭಿವನ್​ ಸಿಂಘಾಲ್​ರನ್ನು ಕರೆಸಿಕೊಂಡು ಅಪಹರಣ ಮಾಡಿದ್ದರು. ಬನ್ನೇರುಘಟ್ಟ ರಸ್ತೆಯಲ್ಲಿನ ಗೋದಾಮಿನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿ ಚೆಕ್​ಗಳಿಗೆ ಸಹಿ ಮಾಡಿಸಿಕೊಂಡಿದ್ದರು. ಅಲ್ಲಿಂದ ಬ್ಯಾಂಕಿಗೆ ಕರೆತಂದು 26 ಲಕ್ಷ ರೂ. ಆರ್​ಟಿಜಿಎಸ್​ ಮೂಲಕ ಸುಲಿಗೆ ಮಾಡಿ ಆಡಿ ಕಾರು, ಆಭರಣ ಕಿತ್ತುಕೊಂಡು ಪೊಲೀಸರಿಗೆ ದೂರು ಕೊಡದಂತೆ ಬೆದರಿಕೆಹಾಕಿ ಬಿಟ್ಟು ಕಳುಹಿಸಿದ್ದರು.

    ಇದನ್ನೂ ಓದಿರಿ ಈ ಚಿತ್ರ ನೋಡಿ… ಗರ್ಭಿಣಿ ಆನೆಯ ದಾರುಣ ಸಾವಿಗೆ ಕಂಬನಿ ಮಿಡಿಯುತ್ತಿದೆ!

    ಬಳಿಕ ಅಭಿನವ್​ ಸಿಂಘಾಲ್​, ಸದಾಶಿವನಗರ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು, ಆಡಿ ಕಾರು ಸಹಿತ 9 ಮಂದಿಯನ್ನು ಕೆಲವೇ ದಿನಗಳಲ್ಲಿ ಬಂಧಿಸಿದ್ದರು. ಸರಿಯಾದ ವಿಚಾರಣೆ ನಡೆಸದೆ ಆಡಿ ಕಾರು ಜಪ್ತಿ ಮಾಡಿ ಮೂವರು ಪ್ರಮುಖ ಆರೋಪಿಗಳನ್ನು ಬಿಟ್ಟು ಕಳುಹಿಸಿದ್ದರು. ಈ ಬಗ್ಗೆ ದೂರುದಾರ ಪೊಲೀಸ್​ ಠಾಣೆಗೆ ಹೋಗಿ ಪ್ರಶ್ನಿಸಿದಾಗ ಅವಾಜ್​ ಹಾಕಿ ಕಳುಹಿಸಿದ್ದಾರೆ ಎನ್ನಲಾಗಿದೆ.

    ಬಳಿಕ ಕೇಂದ್ರ ವಿಭಾಗ ಡಿಸಿಪಿ ಡಾ. ಚೇತನ್​ ಸಿಂಗ್​ ರಾಥೋಡ್​ರನ್ನು ಭೇಟಿ ಮಾಡಿದ ಅಭಿನವ್​ ಸಿಂಘಾಲ್​, ಸದಾಶಿವನಗರ ಪೊಲೀಸರ ವಿರುದ್ಧ ದೂರು ನೀಡಿದ್ದರು. ಪ್ರಕರಣದ ತನಿಖೆಯನ್ನು ಬೇರೆ ಪೊಲೀಸ್​ ಠಾಣೆಗೆ ವರ್ಗಾವಣೆ ಮಾಡಬೇಕು ಎಂದು ಮನವಿ ಮಾಡಿದ್ದರು. ಗಂಭೀರವಾಗಿ ಪರಿಗಣಿಸಿದ ಡಿಸಿಪಿ, ಹೈಗ್ರೌಂಡ್ಸ್​ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಿ ಮರು ತನಿಖೆಗೆ ಸೂಚನೆ ನೀಡಿದ್ದಾರೆ.

    ಇದನ್ನೂ ಓದಿರಿ ಮಿಸ್ಡ್​ಕಾಲ್​ನಲ್ಲಿ ಪರಿಚಯವಾದ ಯುವಕನೊಂದಿಗೆ ಹಾಸಿಗೆ ಹಂಚಿಕೊಂಡ ಗೃಹಿಣಿ… ಆಕೆ ಗಂಡ ಮಾಡಿದ್ದಾದರೂ ಏನು?

    ಸದಾಶಿವನಗರ ಠಾಣೆ ಪೊಲೀಸರು ಲಂಚ ಪಡೆದು ಆರೋಪಿಗಳನ್ನು ಬಿಟ್ಟು ಕಳುಹಿಸಿರುವ ಅನುಮಾನ ಇರುವುದಾಗಿ ದೂರುದಾರ ಅಭಿನವ್​ ಸಿಂಘಾಲ್​ ಆರೋಪ ಮಾಡಿದ್ದರು. ಈ ಬಗ್ಗೆ ಪ್ರತ್ಯೇಕ ತನಿಖೆ ನಡೆಸಿ ವರದಿ ನೀಡುವಂತೆ ಎಸಿಪಿಗೆ ಡಿಸಿಪಿ ಸೂಚಿಸಿದ್ದಾರೆ.

    ಹೈಗ್ರೌಂಡ್ಸ್​ ಠಾಣೆ ಪೊಲೀಸರು ರೆಸ್ಟೋರೆಂಟ್​ ಕ್ಯಾಷಿಯರ್​ ಶರತ್​ಕುಮಾರ್​, ರಾಜ್​ಕಿರಣ್​, ಹೇಮಂತ್​, ವಾಸೀಂ, ಅರುಣ್​ ಕುಮಾರ್​, ಲೋಕೇಶ್​, ಥಾಮಸ್​, ಡಾನಿಯಲ್​ ಸೇರಿ 9 ಮಂದಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

    ಇದನ್ನೂ ಓದಿರಿ ಮೃತ ಸ್ನೇಹಿತನ ಮನೆ ಕಟ್ಟಿ.. ಅಲ್ಲೇ 11ನೇ ದಿನದ ಕಾರ್ಯ ನೆರವೇರಿಸಿದ ಯುವಕರ ಸಾಹಸಗಾಥೆ ಇದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts