ಒಂದೇ ಠಾಣೆಯ ಮೂವರು ಪೇದೆಗಳಿಗೆ ಕರೊನಾ ಪಾಸಿಟಿವ್​

corona virus2
Published on

ರಾಯಚೂರು: ಹೊರ ರಾಜ್ಯದಿಂದ ಆಗಮಿಸಿದವರನ್ನು ಕ್ವಾರಂಟೈನ್​ ಮಾಡಲಾಗಿದ್ದ ಕಟ್ಟಡಗಳಿಗೆ ಭದ್ರತೆಗೆ ನಿಯೋಜನೆಗೊಂಡಿದ್ದ ಮೂವರು ಪೇದೆಗಳಿಗೆ ಗುರುವಾರ ಕರೊನಾ ಪಾಸಿಟಿವ್​ ದೃಢಪಟ್ಟಿದೆ.

ನಗರದ ಪಶ್ಚಿಮ ಠಾಣೆಯ ಮೂವರು ಪೇದೆಗಳನ್ನು ಕೃಷಿ ವಿಜ್ಞಾನ ವಿವಿಯ ವಿದ್ಯಾರ್ಥಿ ನಿಲಯ ಕಟ್ಟಡದಲ್ಲಿನ ಕ್ವಾರಂಟೈನ್​ಗೆ ಭದ್ರತೆ ನಿಯೋಜಿಸಲಾಗಿತ್ತು. ಆಂಧ್ರದಿಂದ ಆಗಮಿಸಿದವರನ್ನು ಈ ಕಟ್ಟಡದಲ್ಲಿ ಕ್ವಾರಂಟೈನ್​ ಮಾಡಲಾಗಿದ್ದು, ಇದರಲ್ಲಿದ್ದ ಐವರಿಗೆ ಕರೊನಾ ಸೋಂಕು ಪಾಸಿಟಿವ್​ ಬಂದಿದೆ.

ಪೊಲೀಸ್​ ಸಿಬ್ಬಂದಿಗೆ ನಡೆಸಲಾಗುತ್ತಿರುವ ಕೋವಿಡ್​ ಪರಿಶೀಲನೆ ಸಂದರ್ಭ ಈ ಮೂವರು ಪೇದೆಗಳಿಗೂ ಸೋಂಕು ತಗುಲಿರುವುದು ಗೊತ್ತಾಗಿದೆ. ಮೂವರು ಠಾಣೆಗೆ ಬಂದು ಹೋಗಿರುವುದರಿಂದ ಠಾಣೆಯನ್ನು ಸೀಲ್​ಡೌನ್​ ಮಾಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net