ಮಿಸ್ಡ್​ಕಾಲ್​ನಲ್ಲಿ ಪರಿಚಯವಾದ ಯುವಕನೊಂದಿಗೆ ಹಾಸಿಗೆ ಹಂಚಿಕೊಂಡ ಗೃಹಿಣಿ... ಆಕೆ ಗಂಡ ಮಾಡಿದ್ದಾದರೂ ಏನು?

Murder attmept 27 APR 20
Published on

ಬೆಂಗಳೂರು: ಮಿಸ್ಡ್​ಕಾಲ್​ ಮೂಲಕ ಪರಿಚಯವಾದ ಗೃಹಿಣಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ 20 ವರ್ಷದ ಯುವಕನನ್ನು ಆಕೆಯ ಪತಿ ಮತ್ತು ಸಂಬಂಧಿಕರೇ ಹತ್ಯೆ ಮಾಡಿದ್ದಾರೆ.

ಮಾದಾವರ ನಿವಾಸಿ ಚಂದ್ರಶೇಖರ್ (20) ಕೊಲೆಯಾದವ. ಈತನಿಗೆ ಮಿಸ್ಡ್​ಕಾಲ್​ ಮೂಲಕ ಚಿನ್ನಾದೇವಿ ಅಗ್ರಹಾರದ ಮಹಿಳೆಯೊಬ್ಬಳು ಪರಿಚಯವಾಗಿದ್ದಳು. ಆರಂಭದಲ್ಲಿ ಸ್ನೇಹಿತರಂತೆ ಚಾಟಿಂಗ್​ ಮಾಡಿಕೊಳ್ಳುತ್ತಿದ್ದ ಇವರಿಬ್ಬರ ನಡುವೆ ಆಪ್ತತೆ ಬೆಳೆದು ಅಕ್ರಮ ಸಂಬಂಧಕ್ಕೂ ತಿರುಗಿತ್ತು. ವಿಷಯ ಮನೆಯವರಿಗೆ ತಿಳಿಯುತ್ತಿದ್ದಂತೆ ಪತಿಯನ್ನು ತೊರೆದು ಆಕೆ ಯುವಕನ ಜತೆ ವಾಸಿಸುತ್ತಿದ್ದಳು.

ಕೊನೆಗೆ ಪತ್ನಿಗೆ ಬುದ್ಧಿವಾದ ಹೇಳಿದ ಪತಿ, ಆಕೆಯನ್ನು ಮನೆಗೆ ವಾಪಸ್​ ಕರೆತಂದಿದ್ದ. ಇಷ್ಟಾದರೂ ಆಕೆ ಮಾತ್ರ ಚಂದ್ರಶೇಖರ್​ ಜತೆಗಿನ ನಂಟು ಮುಂದುವರಿಸಿದ್ದಳು. ಇತ್ತೀಚೆಗೆ ಮತ್ತೆ ಪತಿಯನ್ನು ತೊರೆದು ಪ್ರಿಯಕರನ ಮನೆ ಸೇರಿದ್ದಳು.

ಪತ್ನಿಯ ನಡತೆಯಿಂದ ಬೇಸತ್ತ ಪತಿ, ತನ್ನ ಸಹೋದರನೊಂದಿಗೆ ಹೋಗಿ ಚಂದ್ರಶೇಖರ್ ಹಾಗೂ ಪತ್ನಿ ಜತೆ ಜಗಳ ಮಾಡಿದ್ದ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಚಂದ್ರಶೇಖರ್ ಮೇಲೆ ಹಲ್ಲೆ ನಡೆಸಿದ್ದ. ತೀವ್ರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net