More

    ಮಾನವೀಯತೆ ಮರೆತು ಗರ್ಭಿಣಿ ಆನೆ ಕೊಂದ ದುಷ್ಟರಿಗೆ ಮುಂದೆ ಕಾದಿದೆ ಮಾರಿಹಬ್ಬ

    ತಿರುವನಂತಪುರಂ (ಕೇರಳ): ಪೈನಾಪಲ್​ನಲ್ಲಿ ಸಿಡಿಮದ್ದು ಇಟ್ಟು ಗರ್ಭಿಣಿ ಆನೆ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭರವಸೆ ನೀಡಿದ್ದು, ಈಗಾಗಲೇ ದುಷ್ಟರ ಪತ್ತೆಗೆ ಉನ್ನತ ಮಟ್ಟದ ತಂಡವೊಂದನ್ನು ರಚಿಸಲಾಗಿದೆ. ​

    ಇದನ್ನೂ ಓದಿ: ಗರ್ಭಿಣಿ ಆನೆಗೆ ಸ್ಫೋಟಕ ತುಂಬಿದ ಪೈನಾಪಲ್​​ ತಿನ್ನಲು ಕೊಟ್ಟ ಜನರು; ದಾರುಣವಾಗಿ ಮೃತಪಟ್ಟ ಮುಗ್ಧ ಪ್ರಾಣಿ

    ಉತ್ತರ ಕೇರಳದ ಮಲಪ್ಪುರಂ ಜಿಲ್ಲೆಯ ಸೈಲೆಂಟ್​ ವ್ಯಾಲಿಯಲ್ಲಿ ಆಹಾರ ಹುಡುಕುತ್ತಾ ಗ್ರಾಮವೊಂದರ ಸಮೀಪಕ್ಕೆ ಬಂದಿದ್ದ ಗರ್ಭಿಣಿ ಆನೆಗೆ ಕೆಲ ಕಿಡಿಗೇಡಿಗಳು ಪೈನಾಪಲ್​ನಲ್ಲಿ ಸ್ಪೋಟಕ ತುಂಬಿ ತಿನ್ನಲು ಕೊಟ್ಟು ಆನೆಯ ದಾರುಣ ಸಾವಿಗೆ ಕಾರಣರಾಗಿ ಕ್ಷಮಿಸಲಾರದಂತಹ ಪ್ರಮಾದವೆಸಗಿದ್ದಾರೆ. ಈ ಮನಕಲಕುವ ಘಟನೆಗೆ ಇಡೀ ದೇಶವೇ ಕಂಬನಿ ಮಿಡಿದಿದ್ದು, ದುಷ್ಟರ ಅಟ್ಟಹಾಸಕ್ಕೆ ಒತ್ತಾಯಿಸಿದೆ.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಕೇರಳದ ಚೀಫ್​ ವೈಲ್ಡ್​ಲೈಫ್​ ವಾರ್ಡನ್​ ಸುರೇಂದ್ರ ಕುಮಾರ್​, ಇದೊಂದು ಉದ್ದೇಶಪೂರ್ವಕ ಕೃತ್ಯವಾಗಿದ್ದು, ಇದೇ ದೃಷ್ಟಿಕೋನದಲ್ಲಿ ಇಲಾಖೆಯು ಸಹ ತನಿಖೆ ಕೈಗೊಂಡಿದೆ. ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಆದಷ್ಟು ಬೇಗೆ ಅವರ ಬಂಧನದ ಸುದ್ದಿಯನ್ನು ಕೇಳುತ್ತೀರಾ ಎಂದು ಭರವಸೆ ನೀಡಿದ್ದಾರೆ.

    ಸಾಮಾನ್ಯವಾಗಿ ಬೆಳೆ ನಾಶ ಮಾಡುವ ಕಾಡುಹಂದಿಗಳನ್ನು ಕೊಲ್ಲಲು ಪೈನಾಪಲ್​ ಅಥವಾ ಇತರೆ ಹಣ್ಣುಗಳಲ್ಲಿ ಸ್ಪೋಟಕಗಳನ್ನಿಡುತ್ತಾರೆ. ಆದರೆ, ವನ್ಯಜೀವಿ ರಕ್ಷಣಾ ಕಾಯ್ದೆ ಅಡಿಯಲ್ಲಿ ಯಾವುದೇ ಕಾಡು ಪ್ರಾಣಿಗಳನ್ನು ಹಿಡಿಯುವುದು, ಬಲೆ ಬೀಸುವುದು ಮತ್ತು ವಿಷಪ್ರಾಸನ ಮಾಡುವುದು ಹಾಗೂ ಯತ್ನಿಸುವುದು ಕೂಡ ಅಪರಾಧವಾಗಿದ್ದು, ಇಂತಹ ಪ್ರಕರಣಗಳಿಗೆ 25 ಸಾವಿರ ರೂ. ದಂಡ ಅಥವಾ ಏಳು ವರ್ಷಗಳವರೆಗೂ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗುತ್ತದೆ.

    ಇದನ್ನೂ ಓದಿ: ಸಾಮಾಜಿಕ ಜಾಲತಾಣಕ್ಕೆ ಮರಳಿದ ಮೋಹಕತಾರೆ ರಮ್ಯಾರಿಂದ ಸಮಯ ಮೀಸಲಿಡಲು ಕರೆ…!

    ಘಟನೆ ಬಗ್ಗೆ ತೀವ್ರ ಮರುಕ ವ್ಯಕ್ತಪಡಿಸಿದ ಸುರೇಂದ್ರ ಕುಮಾರ್​ ಪ್ರಕರಣದ ತನಿಖೆಗೆ ಉನ್ನತ ಮಟ್ಟದ ತಂಡ ರಚನೆಯಾಗಿದೆ. ದುಷ್ಟರ ಬಂಧನ ಆಗೋವರೆಗೂ ನಮಗೆ ನೆಮ್ಮದಿ ಇಲ್ಲ. ಆದಷ್ಟು ಬೇಗೆ ನೀವೆಲ್ಲ ಅವರ ಬಂಧನವನ್ನು ನೋಡಲಿದ್ದೀರಾ ಎಂದು ತಿಳಿಸಿದ್ದಾರೆ.

    ಇನ್ನು ದೇಶಾದ್ಯಂತ ಗರ್ಭಿಣಿ ಆನೆ ಸಾವಿಗೆ ವ್ಯಾಪಕ ಆಕ್ರೋಶ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ದುಷ್ಕರ್ಮಿಗಳ ಎದೆಯಲ್ಲಿ ನಡುಕು ಹುಟ್ಟಿದೆ ಎಂದರೆ ತಪ್ಪಾಗಲಾರದು. ಮೂಕ ಪ್ರಾಣಿಯನ್ನು ಅಮಾನುಷವಾಗಿ ಕೊಂದ ಕಿಡಿಗೇಡಿಗಳಿಗೂ ಘೋರ ಶಿಕ್ಷೆಯಾಗಬೇಕೆಂಬುದೇ ನಮ್ಮ-ನಿಮ್ಮೆಲ್ಲರ ಆಶಯವಾಗಿದೆ. (ಏಜೆನ್ಸೀಸ್​)

    ರಿಮೂವ್ ಚೀನಾ ಆಪ್ಸ್ ಪ್ಲೇಸ್ಟೋರ್​ನಿಂದಲೇ ರಿಮೂವ್​ ಆಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts