More

    ರಿಮೂವ್ ಚೀನಾ ಆಪ್ಸ್ ಪ್ಲೇಸ್ಟೋರ್​ನಿಂದಲೇ ರಿಮೂವ್​ ಆಯ್ತು!

    ನವದೆಹಲಿ: ಇತ್ತೀಚಿನ ದಿನಗಳಲ್ಲಿ ತೀವ್ರಗೊಂಡಿರುವ ಚೀನಾ ವಿರೋಧಿ ಚಳವಳಿಗೆ ಸಾಥ್ ನೀಡುವಂತೆ ಬಂದಿದ್ದ ‘ರಿಮೂವ್ ಚೀನಾ ಆಪ್ಸ್’ ಆಪನ್ನು ಗೂಗಲ್ ತನ್ನ ಪ್ಲೇ ಸ್ಟೋರ್​ನಿಂದ ತೆಗೆದುಹಾಕಿದೆ. ಈ ಆಪ್ ಗೂಗಲ್ ನೀತಿ ಉಲ್ಲಂಘಿಸಿರುವ ಕಾರಣದಿಂದಾಗಿ ತೆಗೆದುಹಾಕಿರುವುದಾಗಿ ಸಂಸ್ಥೆ ತಿಳಿಸಿದೆ.

    ಇದನ್ನೂ ಓದಿ: 17ರಂದು ವಿಶ್ವಸಂಸ್ಥೆ ಭದ್ರತಾ ಸಮಿತಿ ಸದಸ್ಯತ್ವಕ್ಕೆ ಚುನಾವಣೆ

    ಕರೊನಾ ವೈರಸ್ ಮೂಲ ಸ್ಥಾನ ಚೀನಾವಾಗಿರುವುದು ಮತ್ತು ಲಡಾಖ್ ಭಾಗದಲ್ಲಿ ಚೀನಾ ಮತ್ತು ಭಾರತದ ನಡುವೆ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಚೀನಾ ವಿರೋಧಿ ಚಳವಳಿ ಆರಂಭವಾಗಿದೆ. ಚೀನಾದ ಟಿಕ್​ಟಾಕ್, ಪಬ್​ಜಿ ಸೇರಿದಂತೆ ಅನೇಕ ಆಪ್​ಗಳನ್ನು ತೆಗೆದುಹಾಕಬೇಕು ಎಂದು ದೇಶದೆಲ್ಲೆಡೆ ಕೂಗು ಕೇಳಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಜೈಪುರದ ಒನ್ ಟಚ್ ಆಪ್ ಲ್ಯಾಬ್ಸ್ ಸಂಸ್ಥೆ ‘ರಿಮೂವ್ ಚೀನಾ ಆಪ್ಸ್’ ಹೆಸರಿನ ಆಪ್​ನ್ನು ಅಭಿವೃದ್ಧಿಪಡಿಸಿ ಗೂಗಲ್ ಪ್ಲೇ ಸ್ಟೋರ್​ಗೆ ಸೇರಿಸಿತ್ತು. ಮೇ 17ರಂದು ಪ್ಲೇ ಸ್ಟೋರ್​ಗೆ ಬಂದ ಈ ಆಪ್, 15 ದಿನಗಳಲ್ಲಿ 50 ಲಕ್ಷಕ್ಕೂ ಹೆಚ್ಚಿನ ಜನರಿಂದ ಡೌನ್​ಲೋಡ್ ಆಗಿತ್ತು.

    ಇದನ್ನೂ ಓದಿ: ನಿಮ್ಮ ಮೊಬೈಲ್​ನಲ್ಲಿ ಚೀನಾದ ಆ್ಯಪ್​ ಇದೆಯೆ- ಪತ್ತೆ ಹಚ್ಚೋದು ಹೇಗೆ?

    ಪ್ಲೇ ಸ್ಟೋರ್​ನ ಉಚಿತ ಆಪ್​ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಕಾಣಿಸಿಕೊಂಡಿತ್ತು. ಭಾರತ ಮಾತ್ರವಲ್ಲದೆ ಆಸ್ಟ್ರೇಲಿಯಾದಲ್ಲೂ ಆಪ್ ಬಳಕೆಯಾಗಲಾರಂಭಿಸಿತ್ತು. ಈ ಆಪ್​ನ ಮೂಲಕ ಮೊಬೈಲ್​ನಲ್ಲಿರುವ ಚೀನಾ ಆಪ್​ಗಳನ್ನು ಗುರುತಿಸಿ ಅವುಗಳನ್ನು ತೆಗೆದುಹಾಕಬಹುದಾಗಿತ್ತು. ಈ ಹಿಂದೆ ಟಿಕ್​ಟಾಕ್ ಬದಲಾಗಿ ಬಂದಿದ್ದ ಭಾರತದ ಮಿತ್ರೋ ಆಪ್​ನ್ನು ಸಹ ಗೂಗಲ್ ಪ್ಲೇ ಸ್ಟೋರ್ ತೆಗೆದುಹಾಕಿತ್ತು.

    ಬಸ್ ಪ್ರಯಾಣಿಕರು ಮಾಸ್ಕ್ ಧರಿಸದೇ ಇದ್ದುದಕ್ಕೆ ಕಂಡಕ್ಟರ್‌ಗೆ ನೋಟಿಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts