ಯುಎಇ ತಲುಪಿದ ಕರ್ನಾಟಕ ನರ್ಸ್​ಗಳು

page 7 2
Published on

ನವದೆಹಲಿ: ಕೊವಿಡ್-19 ಎದುರಿಸಲು ಅರಬ್ ಸಂಯುಕ್ತ ಸಂಸ್ಥಾನದ (ಯುಎಇ) ಆರೋಗ್ಯ ವೃತ್ತಿನಿರತರಿಗೆ ನೆರವಾಗುವ ಉದ್ದೇಶದಿಂದ ಭಾರತದ 88 ದಾದಿಯರ ಪ್ರಥಮ ತಂಡ ಶನಿವಾರ ದುಬೈ ತಲುಪಿದೆ. ಈ ದಾದಿಯರು ತುರ್ತು ನಿಗಾ ಘಟಕಗಳಲ್ಲಿ (ಐಸಿಯು) ಕಾರ್ಯ ನಿರ್ವಹಿಸುವ ತಜ್ಞತೆ ಹೊಂದಿದ್ದಾರೆ.

ಕೊಲ್ಲಿ ರಾಷ್ಟ್ರವಾದ ಯುಎಇಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 17,417 ದಾಟಿದೆ. ಶನಿವಾರ 624 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ದೇಶದ ಆರೋಗ್ಯ ಸಚಿವಾಲಯ ತಿಳಿಸಿದೆ. ಒಟ್ಟು 185 ಜನರು ಮೃತಪಟ್ಟಿದ್ದಾರೆ.

ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರದ ಈ ದಾದಿಯರನ್ನು ಮೊದಲು 14 ದಿನಗಳ ಕ್ವಾರಂಟೈನ್​ನಲ್ಲಿ ಇಡಲಾಗುತ್ತದೆ. ನಂತರ ಅವರನ್ನು ವಿವಿಧ ಆಸ್ಪತ್ರೆಗಳಲ್ಲಿ ಕೆಲಸದ ಮೇಲೆ ನಿಯೋಜಿಸಲಾಗುತ್ತದೆ. ದಾದಿಯರ ನಿಯೋಜನೆ ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಬಲಪಡಿಸಲಿದೆ ಎಂದು ಯುಎಇಯ ಭಾರತ ರಾಯಭಾರಿ ಪವನ್ ಕಪೂರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net