ತೆಲಂಗಾಣ ಚುನಾವಣಾ ಫಲಿತಾಂಶ 2023: ಕಾಂಗ್ರೆಸ್​ ಕಚೇರಿಗೆ ಡಿ.ಕೆ. ಶಿವಕುಮಾರ್, ರೇವಂತ್ ರೆಡ್ಡಿ ಎಂಟ್ರಿ! ಏನಿದೆ ಲೆಕ್ಕಾಚಾರ?

Untitled design (13)
Published on

ತೆಲಂಗಾಣ: ತೆಲಂಗಾಣ ಚುನಾವಣೆ 2023ರ ಫಲಿತಾಂಶಗಳು ತೀವ್ರ ಕುತೂಹಲ ಕೆರಳಿಸುತ್ತಿದ್ದು, ಕಾಂಗ್ರೆಸ್​ ಮತ್ತು ಬಿಆರ್​ಎಸ್​ ಮಧ್ಯೆ ಬಿರುಸಿನ ಹಣಾಹಣಿ ನಡೆಯುತ್ತಿದೆ. 64 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಕಾಂಗ್ರೆಸ್​ ಬೆನ್ನಲ್ಲೇ ಇದೀಗ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ತೆಲಂಗಾಣದ ಕಾಂಗ್ರೆಸ್​ ಕಚೇರಿಗೆ ಭೇಟಿ ನೀಡಿದ್ದಾರೆ.

119 ಸ್ಥಾನಗಳ ತೆಲಂಗಾಣ ವಿಧಾನಸಭೆಯು ನವೆಂಬರ್ 30 ರಂದು ಒಂದೇ ಹಂತದಲ್ಲಿ ಮತದಾನಕ್ಕೆ ಸಿದ್ಧಗೊಂಡಿತು. ಎಕ್ಸಿಟ್ ಪೋಲ್ ಪ್ರಕ್ಷೇಪಗಳು ಕಾರ್ಯರೂಪಕ್ಕೆ ಬಂದರೆ, ಇದು ಈ ಹಿಂದೆ 2018ರಲ್ಲಿ 119ರಲ್ಲಿ 15 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್‌ಗೆ ಪುನರುಜ್ಜೀವನವನ್ನು ಸೂಚಿಸುವಂತಿದೆ. ಇಂದಿನ ಹಣಾಹಣಿಯಲ್ಲಿ ಭಾರತ್ ರಾಷ್ಟ್ರ ಸಮಿತಿ (BRS) ಸದ್ಯದ ಮಟ್ಟಿಗೆ ಹಿಂದೆ ಉಳಿದಿದ್ದು, ಮುನ್ನಡೆ ಸಾಧಿಸಲಿದೆಯೇ ಎಂಬುದು ಇನ್ನು ಕೆಲವೇ ನಿಮಿಷಗಳಲ್ಲಿ ತಿಳಿಯಲಿದೆ.

ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್​ ಮುನ್ನಡೆ ಗುರುತಿಸುತ್ತಿದ್ದಂತೆ​ ಕಾರ್ಯಕರ್ತರೊಂದಿಗೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ರೇವಂತ್​ ಜತೆಗೆ ಇದೀಗ ಡಿ.ಕೆ. ಶಿವಕುಮಾರ್ ಕೂಡ ಸೇರಿಕೊಂಡಿದ್ದು, ಹೈದರಾಬಾದ್ ಪಕ್ಷದ ಕಚೇರಿಯಲ್ಲಿ ಮುಂದಿನ ಲೆಕ್ಕಾಚಾರಗಳ ಚರ್ಚೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net