More

    ‘ಅಂಡರ್‌ಕರೆಂಟ್ ಇಷ್ಟು ದೊಡ್ಡದಾಗಿದೆ ಎಂದು ತಿಳಿದಿರಲಿಲ್ಲ’: ರಮಣ್ ಸಿಂಗ್

    ರಾಯ್‍ಪುರ್: ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಆರಂಭಿಕ ಮುನ್ನಡೆಯಲ್ಲಿತ್ತು. ಆದರೆ ಬೆಳಳಗ್ಗೆ 11 ಗಂಟೆಯ ನಂತರ ಚಿತ್ರಣ ಬದಲಾಗುತ್ತ ಹೋಗಿದ್ದು, ಬಿಜೆಪಿ ನಿರೀಕ್ಷೆ ಮೀರಿ ಪ್ರತಿಸ್ಪರ್ಧಿಯನ್ನು ಹಿಂದಿಕ್ಕಿತು. ಇದು ದೇಶಾದ್ಯಂತ ಜನರ ಗಮನಸೆಳೆಯಿತು.

    ಇದನ್ನೂ ಓದಿ : ‘ಅತಿ ದೊಡ್ಡ ಪನೌಟಿ ಯಾರು?’: ಬಿಜೆಪಿ ಮುನ್ನಡೆಯ ನಡುವೆ ರಾಹುಲ್ ಗಾಂಧಿ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

    ಮಧ್ಯಾಹ್ನ 12:32 ಕ್ಕೆ ಮತ ಎಣಿಕೆಗೆಯಲ್ಲಿ ಬಿಜೆಪಿ 54 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 34 ಸ್ಥಾನಗಳಲ್ಲಿದೆ.
    “ಜನರು ಮೋದಿಜಿಯವರ ಗ್ಯಾರಂಟಿಯನ್ನು ನಂಬಿದ್ದಾರೆ, ಅದನ್ನೇ ಟ್ರೆಂಡ್‌ಗಳು ತೋರಿಸುತ್ತವೆ. ನಾವು ಅಂಡರ್‌ಕರೆಂಟ್ ಅನ್ನು ನೋಡಿದ್ದೇವೆ, ಅದು ಇಷ್ಟು ದೊಡ್ಡದಾಗಿದೆ ಎಂದು ತಿಳಿದಿರಲಿಲ್ಲ. ಭೂಪೇಶ್ ಬಘೇಲ್ ಅವರನ್ನು ಛತ್ತೀಸ್‌ಗಢ ಜನ ತಿರಸ್ಕರಿಸಿದ್ದಾರೆ. ಅವರ ಭ್ರಷ್ಟಾಚಾರ, ಮದ್ಯ ಹಗರಣ, ಮಹದೇವ್ ಆ್ಯಪ್ ಹಗರಣವು ಕೊಡುಗೆ ನೀಡಿದೆ. ಇದು ಫಲಿತಾಂಶದಲ್ಲಿ ಕಾಣಬಹುದಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

    ಪಕ್ಷ ಅಧಿಕಾರಕ್ಕೆ ಬಂದರೆ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದಕ್ಕೆ ಉತ್ತರಿಸಿದ ಸಿಂಗ್, “ಇದು ಪಕ್ಷದ ನಿರ್ಧಾರವಾಗಿರುತ್ತದೆ, ನಾನು ಎಂದಿಗೂ ಏನನ್ನೂ ಕೇಳಲಿಲ್ಲ, ನನಗೆ ಯಾವುದೇ ಕೆಲಸವನ್ನು ನಿಯೋಜಿಸಿದ್ದರೂ, ನಾನು ಅದನ್ನು ಸಂಪೂರ್ಣ ಸಮರ್ಪಣೆಯಿಂದ ಮಾಡಿದ್ದೇನೆ. ” ಎಂದರು

    ನಾಲ್ಕು ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್ ಬಹುಮತದ 46 (ಛತ್ತೀಸ್‌ಗಢ ಅಸೆಂಬ್ಲಿ 90 ಸ್ಥಾನಗಳನ್ನು ಹೊಂದಿದೆ) ದಾಟುತ್ತದೆ ಎಂದು ಭವಿಷ್ಯ ನುಡಿದಿದ್ದವು. ಇನ್ನೆರಡು 42-44 ಮತ್ತು ಉಳಿದ ಮೂರು 40 ಕ್ಕಿಂತ ಹೆಚ್ಚು ಎಂದು ಭವಿಷ್ಯ ನುಡಿದಿದ್ದವು. ಒಂಬತ್ತು ಎಕ್ಸಿಟ್ ಪೋಲ್‌ಗಳಲ್ಲಿ ಎರಡು ಮಾತ್ರ ಬಿಜೆಪಿಗೆ ರಾಜ್ಯವನ್ನು ಗೆಲ್ಲಲು ಬೇಕಾದ 46+ ಸ್ಥಾನಗಳನ್ನು ನೀಡಿದ್ದವು. ಆದರೆ ಮತದಾರ ಬಿಜೆಪಿ ಕಡೆ ಒಲವು ತೋರಿದ ಎಂದರು.

    ನ.7 ಮತ್ತು 17 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಸಲಾಯಿತು. ಮತದಾನದ ಪ್ರಮಾಣವು ಶೇಕಡಾ 76.31 ರಷ್ಟಿತ್ತು. ಇದು 2018 ರ ಚುನಾವಣೆಯಲ್ಲಿ ದಾಖಲಾದ ಶೇಕಡಾ 76.88 ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ.

    ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿನಿಂದ ಬಿಜೆಪಿಗೆ ಲಾಭ; ಏನಿದು ಲೆಕ್ಕಾಚಾರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts