ಸಿಇಟಿಗೆ ಅರ್ಜಿ ಸಲ್ಲಿಕೆ ನಾಳೆಯಿಂದಲೇ ಆರಂಭ; ಕೊನೆಯ ದಿನಾಂಕ ಯಾವಾಗ?

cet
Published on

ಬೆಂಗಳೂರು: ವೃತ್ತಿಪರ ಕೋರ್ಸ್​ಗಳಿಗೆ ಪ್ರವೇಶ ಪಡೆಯಲು ನಡೆಸಲಾಗುವ 2021ರ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜೂ.15ರಿಂದ ಆರಂಭವಾಗಲಿದೆ.

ಇಂಜಿನಿಯರಿಂಗ್​, ಪಶುವೈದ್ಯ, ಕೃಷಿ ವಿಜ್ಞಾನ, ಆರ್ಕಿಟೆಕ್ಟ್​ ಹಾಗೂ ಫಾರ್ಮಸಿ ಕೋರ್ಸ್​ಗಳಿಗೆ ಈ ಪ್ರವೇಶ ಪರೀಕ್ಷೆ ಮೂಲಕ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ. ಈ ಬಾರಿ ದ್ವೀತಿಯ ಪಿಯು ಪರೀಕ್ಷೆಯನ್ನು ರದ್ದುಗೊಳಿಸಿರುವ ಕಾರಣದಿಂದ ಅರ್ಹತಾ ಅಂಕಗಳನ್ನು ಕೈಬಿಡಲಾಗಿದೆ. ಹೀಗಾಗಿ ಎಲ್ಲರೂ ಪರೀಕ್ಷೆ ಬರೆಯಬಹುದು. ಜತೆಗೆ, ರ್ಯಾಂಕಿಂಗ್​ ಹಾಗೂ ಸೀಟು ಹಂಚಿಕೆಗೆ ಸಿಇಟಿಯಲ್ಲಿ ಪಡೆಯುವ ಅಂಕಗಳನ್ನೇ ಮಾನದಂಡವಾಗಿಸಿಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ಈಗಾಗಲೆ ತಿಳಿಸಿದೆ.

ಪದವಿ ವಿಜ್ಞಾನ ಕೋರ್ಸ್​ಗಳಿಗೂ ಸಿಇಟಿ ಅಂಕಗಳನ್ನು ಪರಿಗಣಿಸುವ ಚಿಂತನೆ ನಡೆದಿದ್ದು, ಈ ಬಗ್ಗೆ ಅಂತಿಮ ತೀರ್ಮಾನವನ್ನು ಇನ್ನಷ್ಟೇ ತೆಗೆದುಕೊಳ್ಳಬೇಕಿದೆ. ಆ.28& 30ರವರೆಗೆ ಸಿಇಟಿ ನಡೆಯಲಿದ್ದು, 500ಕ್ಕೂ ಅಧಿಕ ಕೇಂದ್ರಗಳನ್ನು ಗುರುತಿಸಲಾಗಿದೆ.

ಅರ್ಜಿ ಸಲ್ಲಿಸಲು ಜು.10 ಮತ್ತು ಶುಲ್ಕ ಪಾವತಿಸಲು ಜು.13 ಕೊನೆಯ ದಿನವಾಗಿದೆ. ಜು.16&20 ಪ್ರಮಾಣಪತ್ರ ಸಲ್ಲಿಕೆ ಹಾಗೂ ಜು.19&22 ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಆ.13ರಂದು ಪ್ರವೇಶ ಪತ್ರ ಬಿಡುಗಡೆ ಮಾಡುವುದಾಗಿ ಕರ್ನಾಟಕ ಪರಿಕ್ಷಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net