

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ನಾಳೆ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ನೂರಾರು ಸಂಘಟನೆಗಳು ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿದ್ದು, ನಾಳೆ ಇಡೀ ರಾಜ್ಯವೇ ಸ್ತಬ್ಧವಾಗುವ ಸಾಧ್ಯತೆ ಇದೆ. ಬಂದ್ ಯಶಸ್ವಿ ಮಾಡಲು ಕನ್ನಡಪರ ಹಾಊ ರೈತ ಪರ ಸಂಘಟನೆಗಳಿಂದ ಭಾರೀ ತಯಾರಿ ನಡೆದಿದೆ.
ಈಗಾಗಲೇ ಇಡೀ ರಾಜ್ಯಕ್ಕೆ ಕನ್ನಡಪರ ಸಂಘಟನೆಗಳು ಸಂದೇಶ ಕೊಟ್ಟಿವೆ. ಕಳೆದ ಮಂಗಳವಾರವಷ್ಟೇ ಬೆಂಗಳೂರು ಬಂದ್ ಆಚರಿಸಲಾಯಿತು. ಇದೀಗ ಅಖಂಡ ಕರ್ನಾಟಕ ಬಂದ್ ಆಚರಣೆಗೆ ಸಕಲ ತಯಾರಿ ನಡೆಯುತ್ತಿದೆ. ಬೆಂಗಳೂರು ಬಂದ್ ದಿನವೇ ಕನ್ನಡಿಗರಿಗೆ ಮತ್ತೊಂದು ಆಘಾತ ಉಂಟಾಯಿತು. ತಮಿಳುನಾಡಿಗೆ ಪ್ರತಿನಿತ್ಯ ಮೂರು ಸಾವಿರ ಕ್ಯೂಸೆಕ್ ನೀರನ್ನು ಹರಿಸಲು ಅಂದು ನಡೆದ ಸಭೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಶಿಫಾರಸು ಮಾಡಿತು. ಇದರಿಂದ ರೈತರ ಆಕ್ರೋಶದ ಕಟ್ಟೆ ಹೊಡೆದಿದ್ದು, ನಾಳಿನ ಬಂದ್ ಪರಿಣಾಮ ಹೆಚ್ಚಾಗಿರಲಿದೆ ಎಂದು ಊಹಿಸಲಾಗಿದೆ.
ಬಂದ್ ಹಿನ್ನೆಲೆಯ್ಲಲಿ ನಾಳೆ ರಾಜ್ಯದಲ್ಲಿ ಏನೆಲ್ಲ ಸೇವೆಗಳು ಇರುತ್ತವೆ ಮತ್ತು ಏನೆಲ್ಲ ಬಂದ್ ಆಗಲಿವೆ ಎಂಬುದನ್ನು ನಾವೀಗ ತಿಳಿಯೋಣ.
* ಆಸ್ಪತ್ರೆ
* ಮೆಡಿಕಲ್ ಸ್ಟೋರ್
* ಹಾಲಿನ ಬೂತ್
* ಅಗತ್ಯ ವಸ್ತುಗಳು
* ಮೆಟ್ರೋ
* ಆಂಬ್ಯುಲೆನ್ಸ್
* ಆಟೋ, ಕ್ಯಾಬ್
* ಗೂಡ್ಸ್ ವಾಹನಗಳು
* ಖಾಸಗಿ ಬಸ್‌ಗಳು
* ಥಿಯೇಟರ್
* ಸೂಪರ್ ಮಾರ್ಕೆಟ್
* ಪೆಟ್ರೋಲ್ ಬಂಕ್
* ಶಾಲಾ -ಕಾಲೇಜ್
* ಅಂಗಡಿಗಳು
* ಬೀದಿ ಬದಿ ಅಂಗಡಿಗಳು
* ಜ್ಯುವೆಲ್ಲರಿ ಶಾಪ್‌ಗಳು
* ಕೈಗಾರಿಕೆಗಳು
* ಹೋಟೆಲ್‌ಗಳು
* ಮಾಲ್‌ಗಳು
* ಬಿಎಂಟಿಸಿ ಬಸ್
ಕರ್ನಾಟಕದಿಂದ ತಮಿಳುನಾಡಿಗೆ 15 ದಿನಗಳವರೆಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರನ್ನು ಹರಿಸಬೇಕೆಂದು ಸೆ.12ರಂದು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ್ದ ಆದೇಶವನ್ನು ಪಾಲಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸೆ.18ರಂದು ಆದೇಶ ಹೊರಡಿಸಿತ್ತು. ಇದರ ವಿರುದ್ಧ ಸುಪ್ರೀಂಕೋರ್ಟ್ಗೆ ಕರ್ನಾಟಕ ಮೇಲ್ಮನವಿ ಸಲ್ಲಿಸಿತ್ತು. ಸೆ.21ರಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ CWMA ಆದೇಶವನ್ನು ಎತ್ತಿಹಿಡಿದಿತ್ತು. ಅದರಂತೆ ರಾಜ್ಯ ಸರ್ಕಾರ ನೀರು ಬಿಡುಗಡೆ ಸಹ ಮಾಡಿತು. ಅತ್ತ ಸಂಘಟನೆಗಳು ಬಂದ್ ಸಹ ಆಚರಿಸಿದವು. ಇದರ ನಡುವೆ ಮತ್ತೆ 3000 ಸಾವಿರ ಕ್ಯೂಸೆಕ್ ನೀರು ಹರಿಸಲು ಕಾವೇರಿ ನದಿ ನೀರು ಸಮಿತಿ ಶಿಫಾರಸು ಮಾಡಿರುವುದರಿಂದ ನಾಳಿನ ಕರ್ನಾಟಕ ಬಂದ್ ತೀವ್ರತೆ ಪಡೆದುಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ನಾಳಿನ ಕರ್ನಾಟಕ ಬಂದ್‌ಗೆ ಇಂದು ಸಹ ಅಬ್ಬರದ ಪ್ರಚಾರ ನಡೆಯಲಿದೆ. ವಾಟಳ್ ನಾಗರಾಜ್ ನೇತೃತ್ವದಲ್ಲಿ ಬಂದ್‌ಗೆ ಬೆಂಬಲ ನೀಡುವಂತೆ ವಿವಿಧ ಸಂಘಟನೆಗಳು ಮನವಿ ಮಾಡಲಿವೆ. ನಗರ ಹಲವು ಕಡೆ ತೆರದ ವಾಹನದ ಮುಖಾಂತರ ವಾಟಳ್ ನಾಗರಾಜ್ ಮನವಿ ಮಾಡಲಿದ್ದಾರೆ. ನಿನ್ನೆ ಮಾಲ್, ಮಾರುಕಟ್ಟೆ ಸೇರಿ ಹಲವು ಕಡೆ ಹೋಗಿ ಪ್ರಚಾರ ಮಾಡಿದರು.