ನಾಳೆ ರಾಜ್ಯ ಬಂದ್​! ಸಾರ್ವಜನಿಕರಿಗೆ ಏನಿರುತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ ಮಾಹಿತಿ | Karnataka Bandh

ವಿಜಯವಾಣಿ (43)
Published on

Karnataka Bandh: ಇತ್ತೀಚೆಗೆ ಮಹಾರಾಷ್ಟ್ರ ಮರಾಠಿ ಪುಂಡರು ನಡೆಸಿದ ಅಟ್ಟಹಾಸ, ದಬ್ಬಾಳಿಕೆಯನ್ನು ತೀವ್ರ ಖಂಡಿಸಿರುವ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್​, ಮಾ.22ರಂದು ರಾಜ್ಯಾದ್ಯಂತ ಬಂದ್​ಗೆ ಕರೆ ನೀಡಿದ್ದಾರೆ. ಬಂದ್​ಗೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿದರೆ, ಇನ್ನೂ ಕೆಲವು ಸಂಘಟನೆಗಳು ನೈತಿಕ, ನೇರ ಬಂಬಲ ಕೊಟ್ಟಿಲ್ಲ ಎಂಬುದು ಗಮನಾರ್ಹ.

ವಾಟಾಳ್​ ನಾಗರಾಜ್​ ನೇತೃತ್ವದಲ್ಲಿ ನಡೆಯಲಿರುವ ನಾಳಿನ ಕರ್ನಾಟಕ ಬಂದ್​ಗೆ ಹಲವು ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಆದರೆ, ರಾಜ್ಯ ಸರ್ಕಾರ ಮಾತ್ರ ಬಂದ್​ಗೆ ಬೆಂಬಲ ಸೂಚಿಸಿಲ್ಲ. ಬದಲಿಗೆ ವಿರೋಧ ವ್ಯಕ್ತಪಡಿಸಿದೆ. ಪ್ರತಿಭಟನೆ ಮೂಲಕ ಬಂದ್​ಗೆ ಕರೆ ಕೊಡುವ ಅವಶ್ಯಕತೆ ಇರಲಿಲ್ಲ. ತಮ್ಮ ಸಮಸ್ಯೆಗಳ ಕುರಿತಂತೆ ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸಬಹುದಿತ್ತು ಎಂದು ಡಿಸಿಎಂ ಡಿಕೆ ಶಿವಕುಮಾರ್​ ತಿಳಿಸಿದರು.

ಕರ್ನಾಟಕ ಬಂದ್​ ಹಿನ್ನೆಲೆ ರಾಜ್ಯದಲ್ಲಿ ಬಸ್, ಆಟೋ ಸಂಚಾರ, ಹೋಟೆಲ್​, ಶಾಪಿಂಗ್ ಮಾಲ್ ತೆರೆದಿರುತ್ತವೆಯೇ? ಬಂದ್​ ಕಾವೇರಿರುವ ಕಾರಣ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆಯೇ ಎಂಬ ಹತ್ತು ಹಲವು ಪ್ರಶ್ನೆಗಳು ರಾಜ್ಯದ ಜನತೆಯನ್ನು ಬೆಂಬಿಡದೆ ಕಾಡುತ್ತಿದೆ. ಅಸಲಿಗೆ ಏನೇನು ಇರಲಿದೆ? ಇರವುದಿಲ್ಲ ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.

  • ಬಂದ್​ಗೆ ರಾಜ್ಯ ಸರ್ಕಾರ ಬೆಂಬಲ ಸೂಚಿಸದ ಹಿನ್ನೆಲೆ ಬಸ್, ಆಟೋ​ ಸಂಚಾರ ಎಂದಿನಂತೆ ಇರಲಿದೆ. ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ತೆರೆದಿರಲಿದೆ.
  • ಖಾಸಗಿ ಶಾಲೆಗಳ ಒಕ್ಕೂಟ ಬಂದ್​ಗೆ ನೈತಿಕ ಬೆಂಬಲ ಸೂಚಿಸಿದ್ದೇ ಆದರೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದಿಲ್ಲ ಎಂದು ತಿಳಿಸಿದೆ. ಪ್ರಸ್ತುತ ಮಕ್ಕಳಿಗೆ ಪರೀಕ್ಷೆಗಳು ನಡೆಯುತ್ತಿದ್ದು, ರಜೆ ಕೊಡಲು ಮುಂದಾಗುವುದಿಲ್ಲ ಎಂದು ತಿಳಿಸಿದೆ.
  • ಮಾ.22 ನಾಲ್ಕನೇ ಶನಿವಾರ ಆದ ಹಿನ್ನೆಲೆ ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕ್​ಗಳು ಕೂಡ ರಜೆ ಇರಲಿವೆ.

ಏನಿರುತ್ತೆ? ಏನಿರಲ್ಲ?

  • ಬಿಎಂಟಿಸಿ, ನಮ್ಮ ಮೆಟ್ರೋ, ಕೆಎಸ್​ಆರ್​ಟಿಸಿ, ಆಸ್ಪತ್ರೆ ವೈದ್ಯಕೀಯ ಸೇವೆಗಳು, ಉಪಹಾರ ಕ್ಯಾಂಟೀನ್​, ಹೋಟೆಲ್​ಗಳು, ಶಾಲಾ-ಕಾಲೇಜು, ರೆಸ್ಟೋರೆಂಟ್​, ಪಬ್​ಗಳು ತೆರದಿರಲಿವೆ.
  • ಚಿತ್ರಮಂದಿರಗಳಲ್ಲಿ ಬೆಳಗ್ಗಿನ ಆಟ ನಡೆಯುವುದಿಲ್ಲ. ಮೊದಲ ಪ್ರದರ್ಶನ ಇರುವುದಿಲ್ಲ.
  • ಓಲಾ, ಊಬರ್​ ಆಟೋ, ಟ್ಯಾಕ್ಸಿ ಸೇವೆಗಳಲ್ಲಿ ವ್ಯತ್ಯಯ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net