EXIT POLL ಪ್ರಕಟ: ಈ ಬಾರಿ ಯಾರಿಗೆ ಬಹುಮತ? ಇಲ್ಲಿದೆ ವಿವರ…

Exit Poll F
Published on

ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ನಿಗದಿತ ಸಮಯ ಮುಗಿಯುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆಗಳು ಹೊರಬೀಳಲಾರಂಭಿಸಿದ್ದು, ಪಕ್ಷಗಳ ಬಲಾಬಲ, ಗೆಲುವಿನ ಲೆಕ್ಕಾಚಾರಗಳು ಬಹಿರಂಗಗೊಂಡಿವೆ.

ವಿವಿಧ ಮಾಧ್ಯಮ ಸಂಸ್ಥೆಗಳು ತಮ್ಮ ಚುನಾವಣೋತ್ತರ ಸಮೀಕ್ಷೆಯ ಅಂಶಗಳನ್ನು ಪ್ರಕಟಿಸಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಭಾರಿ ಪೈಪೋಟಿ ಇರುವುದು ಕಂಡುಬಂದಿದೆ. ಇನ್ನು ಕೆಲವು ಸಮೀಕ್ಷೆಗಳಲ್ಲಿ ಸ್ಪಷ್ಟ ಬಹುಮತ ಕಂಡುಬಂದಿದ್ದರೂ, ಸಮೀಕ್ಷೆಗಳಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತವಾಗಿರುವುದರಿಂದ ಇಂಥದ್ದೇ ಪಕ್ಷ ಬಹುಮತದೊಂದಿಗೆ ಹೊರಹೊಮ್ಮಲಿದೆ ಎಂಬ ಒಮ್ಮತದ ಅಭಿಪ್ರಾಯಕ್ಕೆ ಬರುವುದು ಕಷ್ಟ ಎಂಬಂತಾಗಿದೆ. ಅಂದರೆ ಕೆಲವು ಸಮೀಕ್ಷೆಗಳಲ್ಲಿ ಬಿಜೆಪಿಗೆ ಬಹುಮತ ಎಂದಾಗಿದ್ದರೆ, ಇನ್ನು ಕೆಲವುದರಲ್ಲಿ ಕಾಂಗ್ರೆಸ್​ಗೆ ಬಹುಮತ ಎಂದಾಗಿದೆ.

ಸದ್ಯ ಎಬಿಪಿ ನ್ಯೂಸ್​-ಸಿವೋಟರ್​, ನ್ಯೂಸ್​ ನೇಷನ್​-ಸಿಜಿಎಸ್, ರಿಪಬ್ಲಿಕ್ ಟಿವಿ-ಪಿ ಮಾರ್ಕ್​, ಸುವರ್ಣ ನ್ಯೂಸ್-ಜನ್ ​ಕಿ ಬಾತ್, ಟಿವಿ9 ಭರತವರ್ಷ್-ಪೋಲ್ ಸ್ಟ್ರೀಟ್, ಝೀ ನ್ಯೂಸ್-ಮ್ಯಾಟ್ರಿಜ್ ಏಜೆನ್ಸಿ ಹಾಗೂ ದಿಗ್ವಿಜಯ ನ್ಯೂಸ್ ನಡೆಸಿದ್ದ ಚುನಾವಣೋತ್ತರ​ ಸಮೀಕ್ಷೆಗಳು ಪ್ರಕಟಗೊಂಡಿವೆ.

ಎಬಿಪಿ ನ್ಯೂಸ್-ಸಿ ವೋಟರ್

ಬಿಜೆಪಿ: 83-95

ಕಾಂಗ್ರೆಸ್​: 100-112

ಜೆಡಿಎಸ್​: 21-29

ಇತರ: 2-6

ನ್ಯೂಸ್ ನೇಷನ್-ಸಿಜಿಎಸ್

ಬಿಜೆಪಿ: 114

ಕಾಂಗ್ರೆಸ್​: 86

ಜೆಡಿಎಸ್​: 21

ಇತರ: 3

ರಿಪಬ್ಲಿಕ್ ಟಿವಿ-ಪಿ ಮಾರ್ಕ್

ಬಿಜೆಪಿ: 85-100

ಕಾಂಗ್ರೆಸ್​: 94-108

ಜೆಡಿಎಸ್​: 24-32

ಇತರ: 0-2

ಸುವರ್ಣ ನ್ಯೂಸ್- ಜನ್​ ಕಿ ಬಾತ್

ಬಿಜೆಪಿ: 94-117

ಕಾಂಗ್ರೆಸ್​: 91-106

ಜೆಡಿಎಸ್​: 14-24

ಇತರ: 0-2

ಟಿವಿ 9 ಭರತವರ್ಷ- ಪೋಲ್​ಸ್ಟ್ರೀಟ್

ಬಿಜೆಪಿ: 88-98

ಕಾಂಗ್ರೆಸ್​: 99-109

ಜೆಡಿಎಸ್​: 21-26

ಇತರ: 0-4

ಝೀ ನ್ಯೂಸ್-ಮ್ಯಾಟ್ರಿಜ್ ಏಜೆನ್ಸಿ

ಬಿಜೆಪಿ: 79-94

ಕಾಂಗ್ರೆಸ್​: 103-118

ಜೆಡಿಎಸ್​: 25-33

ಇತರ: 2-5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net