ಕರೀನಾ ಕಪೂರ್​ ಮಗುವಿನ ಫೋಟೋ ವೈರಲ್​! ಇಲ್ಲಿದೆ ನೋಡಿ ಆ ಫೋಟೋ..

kareena
Published on

ಮುಂಬೈ: ಬಾಲಿವುಡ್​ನ ನಟಿ ಕರೀನಾ ಕಪೂರ್​ ಫೆಬ್ರವರಿ 21ರಂದು ಎರಡನೇ ಮಗುವಿಗೆ ಜನ್ಮವಿತ್ತಿದ್ದಾರೆ. ಒಂದೂವರೆ ತಿಂಗಳಾದರೂ ಮಗುವಿನ ಫೋಟೋವನ್ನು ಕರೀನಾ ಮತ್ತು ಸೈಫ್​ ಅಲಿ ಖಾನ್​ ಎಲ್ಲಿಯೂ ಹಂಚಿಕೊಂಡಿಲ್ಲ. ಆದರೆ ಇದೀಗ ಕರೀನಾ ಅವರ ತಂದೆ ರಣಧೀರ್​ ಕಪೂರ್​ ಅವರು ಮಗುವಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

ರಣಧೀರ್​ ಕಪೂರ್ ಅವರು ಇಂದು ಕೊಲ್ಯಾಜ್​ ಮಾಡಿದ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ಇಬ್ಬರು ಮಕ್ಕಳ ಫೋಟೋ ಕೊಲ್ಯಾಜ್ ಮಾಡಿರುವುದನ್ನು ನೀವು ಕಾಣಬಹುದು. ಈ ಎರಡು ಫೋಟೋಗಳಲ್ಲಿ ಒಂದರಲ್ಲಿರುವುದು ಕರೀನಾ ಅವರ ಮೊದಲ ಮಗ ತೈಮೂರ್ ಅಲಿ ಖಾನ್ ಎನ್ನಲಾಗಿದೆ. ಹಾಗೆಯೇ ಇನ್ನೊಂದು ಮಗುವನ್ನು ಅವರ ಎರಡನೇ ಮಗುವೆಂದು ಹೇಳಲಾಗಿದೆ. ಎರಡನೇ ಮಗು ಕೂಡ ತೈಮೂರ್​ ರೀತಿಯೇ ಇರುವುದುನ್ನು ನೆಟ್ಟಿಗರು ಗಮನಿಸಿದ್ದಾರೆ.

ಫೋಟೋ ಶೇರ್​ ಮಾಡಿ ಕೆಲವೇ ಹೊತ್ತಿನಲ್ಲಿ ರಣಧೀರ್ ಅವರು ಫೋಟೋವನ್ನು ಡಿಲೀಟ್​ ಮಾಡಿದ್ದಾರೆ. ಆದರೆ ಅದಾಗಲೇ ಫೋಟೋ ಎಲ್ಲೆಡೆ ಶೇರ್​ ಆಗಿದ್ದು, ವೈರಲ್​ ಆಗಿದೆ.

ಕರೀನಾ ಅವರು ಮಹಿಳಾ ದಿನಾಚರಣೆಯಂದು ತಾವು ಮಗುವನ್ನು ಎತ್ತಿಕೊಂಡಿರುವ ಫೋಟೋ ಶೇರ್​ ಮಾಡಿದ್ದರು. ಆದರೆ ಮಗುವಿನ ಮುಖ ಕಾಣದಂತೆ ನೋಡಿಕೊಂಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net