More

    ಹುಡುಗಿ ಹುಡುಕಿಕೊಡಿ ಎಂದು ಪೊಲೀಸ್​ ಠಾಣೆ ಮೆಟ್ಟಿಲು ಹತ್ತಿದ್ದವನಿಗೆ ಎಂಗೇಜ್ಮೆಂಟ್!

    ಲಖನೌ: ಇತ್ತೀಚೆಗೆ 30 ಇಂಚು ಎತ್ತರದ ವ್ಯಕ್ತಿಯೊಬ್ಬ ತನಗೆ ಮದುವೆಯಾಗಲು ಹುಡುಗಿ ಹುಡುಕಿಕೊಡಿ ಎಂದು ಪೊಲೀಸ್​ ಠಾಣೆಯ ಮೆಟ್ಟಿಲೇರಿರುವ ವಿಚಾರ ನಿಮಗೆಲ್ಲ ತಿಳಿದಿದೆ. ಆ ವ್ಯಕ್ತಿಗೆ ಸಲ್ಮಾನ್​ ಖಾನ್​ ಭೇಟಿ ಮಾಡಲು ಅವಕಾಶ ಸಿಕ್ಕಿದ್ದು, ಅದಾದ ಮೇಲೆ ಹುಡುಗಿಯರ ಲಿಸ್ಟೇ ಅವನೆದುರಿಗೆ ಬಂದಿದ್ದು ಎಲ್ಲವೂ ವೈರಲ್ ವಿಚಾರಗಳೇ. ಇದೀಗ ಆ ವ್ಯಕ್ತಿಗೆ ಎಂಗೇಜ್ಮೆಂಟ್​ ಕೂಡ ಆಗಿದೆಯಂತೆ.

    ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನಾದ ಅಜೀಮ್​ ಮಂಸೂರಿ ಹುಡುಗಿಗಾಗಿ ಒದ್ದಾಡಿದ್ದ ವ್ಯಕ್ತಿ. ಕೇವಲ 30 ಇಂಚು ಎತ್ತರ ಇದ್ದ ಕಾರಣ ಆತನಿಗೆ ಹುಡುಗಿಯೇ ಸಿಕ್ಕಿರಲಿಲ್ಲವಂತೆ. ಮನೆಯವರೂ ಮದುವೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಆತ ಪೊಲೀಸ್​ ಠಾಣೆಗೆ ತೆರಳಿ, ಪೊಲೀಸರ ಬಳಿ ಸಹಾಯ ಕೇಳಿದ್ದ. ನೀವಾದರೂ ನನಗೆ ಹುಡುಗಿಯನ್ನು ಹುಡುಕಿ ಕೊಡಿ ಎಂದು ಮನವಿ ಮಾಡಿದ್ದ. ಇದೀಗ ಆತನಿಗೆ ಬುಶಾರಾ ಜತೆ ಎಂಗೇಜ್ಮೆಂಟ್​ ಆಗಿದೆ.

    ಬುಶಾರಾ ಮೂರು ಅಡಿಯಷ್ಟು ಎತ್ತರವಿದ್ದಾರಂತೆ. ಪ್ರಥಮ ವರ್ಷದ ಬಿಕಾಂ ಪದವಿ ವಿದ್ಯಾಭ್ಯಾಸ ಮಾಡುತ್ತಿರುವ ಬುಶಾರೊಂದಿಗೆ ಅಜೀಂ ಮಾರ್ಚ್​ 31ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬುಶಾರಿಗೆ ಇನ್ನೊಬ್ಬ ಸಹೋದರಿಯಿದ್ದು, ಅವರಿಗಾಗಿ ವರನನ್ನು ಹುಡುಕಲಾಗುತ್ತಿದೆ. ಅವಳಿಗೂ ವರ ಸಿಕ್ಕ ಮೇಲೆ ಮುಂದಿನ ವರ್ಷ ಇಬ್ಬರಿಗೂ ಒಟ್ಟಿಗೆ ಮದುವೆ ಮಾಡಲಾಗುತ್ತದೆಯಂತೆ. (ಏಜೆನ್ಸೀಸ್​)

    ಮಗನ ಜತೆ ಮಗಳ ಮದುವೆ! ಕಳೆದು ಹೋಗಿದ್ದ ಮಗಳನ್ನೇ ಸೊಸೆಯಾಗಿ ತಂದುಕೊಂಡ ತಾಯಿ!

    ಚೈಲ್ಡ್​ ಕೇರ್​ ಸೆಂಟರ್​ನಲ್ಲೇ ಮಕ್ಕಳಿಗೆ ಲೈಂಗಿಕ ಕಿರುಕುಳ! ರಹಸ್ಯ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಮುಖ್ಯಸ್ಥ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts