ಚೈಲ್ಡ್​ ಕೇರ್​ ಸೆಂಟರ್​ನಲ್ಲೇ ಮಕ್ಕಳಿಗೆ ಲೈಂಗಿಕ ಕಿರುಕುಳ! ರಹಸ್ಯ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಮುಖ್ಯಸ್ಥ!

mangalore
Published on

ಮಂಗಳೂರು: ಚೈಲ್ಡ್​ ಕೇರ್​ ಸೆಂಟರ್​ ಒಂದರಲ್ಲೇ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನೀಡಲಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕಮೀಷನರ್​ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.

ಮಂಗಳೂರಿನ ಉಳ್ಳಾಲದ ನೂರಾನಿ ಯತೀಂಖಾನ & ದಾರುಲ್ ಮಸಾಕಿನ್ ಸೆಂಟರ್​ನಲ್ಲಿ ಇಂತಹ ಕೃತ್ಯ ನಡೆದಿದೆ. ಆಯೂಬ್ (52) ವರ್ಷದ ವ್ಯಕ್ತಿಯಿಂದ ಲೈಂಗಿಕ ಕಿರುಕುಳವಾಗಿರುವುದಾಗಿ ವರದಿಯಾಗಿದೆ. ಸೆಂಟರ್​ನ ಉಸ್ತಾದ್​ (ಮುಖ್ಯಸ್ಥ) ಆಗಿರುವ ಈತ 14 ವರ್ಷದ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ಕಿರುಕುಳ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಸುಮಾರು ಎರಡು ತಿಂಗಳಿನಿಂದ ಕನಿಷ್ಠ ಐದು ಮಕ್ಕಳಿಗೆ ಈ ರೀತಿ ಕಿರುಕುಳ ನೀಡಿದ್ದಾಗಿ ಹೇಳಲಾಗಿದೆ.

ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ಅದರಲ್ಲಿ ಆಯೂಬ್​ನ ನಿಜ ಬಣ್ಣ ಬಯಲಾಗಿದೆ. ಈ ಸಂಬಂಧ ಪೋಕ್ಸೋ ಕಾಯಿದೆಯಡಿ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುವುದಾಗಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net