ರಾಜಮೌಳಿ ಅವರ ಸಿನಿಮಾದಲ್ಲಿ ಯಾವುದೇ ಲಾಜಿಕ್ ಇರುವುದಿಲ್ಲ ಬರೀ... Karan Johar ಹೇಳಿಕೆ ವೈರಲ್​

Karan Rajamouli
Published on

ಮುಂಬೈ: ಆರ್​ಆರ್​ಆರ್, ಮಗಧೀರ, ವಿಕ್ರಮಾರ್ಕುಡು ಸೇರಿದಂತೆ ಅನೇಕ ಬ್ಲಾಕ್​ಬಸ್ಟರ್ ಚಿತ್ರಗಳನ್ನು ನೀಡಿ ಖ್ಯಾತಿ ಪಡೆದಿರುವ ನಿರ್ದೇಶಕ ಎಸ್​.ಎಸ್​. ರಾಜಮೌಳಿ ತಮ್ಮ ಮುಂದಿನ ಸಿನಿಮಾದಲ್ಲಿ ಮಹೇಶ್​ಬಾಬುಗೆ ಆ್ಯಕ್ಷನ್ ಕಟ್ ಹೇಳಲಿದ್ದು, ಚಿತ್ರದ ಕೆಲಸಗಳು ಪ್ರಾರಂಭಗೊಂಡಿದೆ. ಆದರೆ, ರಾಜಮೌಳಿ ಅವರ ಚಿತ್ರದಲ್ಲಿ ಲಾಜಿಕ್ ಇರುವುದಿಲ್ಲ ಎಂದು ಹೇಳುವ ಮೂಲಕ ಬಾಲಿವುಡ್​ನ ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ವಿವಾದದ ಕಿಡಿಯನ್ನು ಹೊತ್ತಿಸಿದ್ದಾರೆ.

ಭಾರತೀಯ ಚಿತ್ರರಂದಲ್ಲಿ ಅತ್ಯಂತ ಯಶಸ್ವಿ ನಿರ್ದೇಶಕ ಮತ್ತು ನಿರ್ಮಾಪಕರಲ್ಲಿ ಒಬ್ಬರಾದ ಕರಣ್ ಜೋಹರ್​ (Karan Johar) ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದು, ಸಿನಿ ರಸಿಕರ ಕೆಂಗಣ್ಣಿಗೆ ಗುರಿಯಾಗಿದೆ.

ನಂಬಿಕೆ ಎಂಬುದು ಬಹಳ ಮುಖ್ಯ. ದೊಡ್ಡ ನಿರ್ದೇಶಕರ ಸಿನಿಮಾಗಳನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ದೊಡ್ಡ ಸಿನಿಮಾಗಳು ಯಶಸ್ಸು ಕಂಡಿರುವುದೇ ನಂಬಿಕೆ ಮೇಲೆ. ಸಿನಿಮಾದಲ್ಲಿ ಲಾಜಿಕ್ ಎಂಬುದು ಮುಖ್ಯವಾಗಲ್ಲ. ರಾಜಮೌಳಿ ಮಾಡಿದ ಯಾವುದೇ ಸಿನಿಮಾವನ್ನು ಉದಾಹರಣೆಯಾಗಿ ಹೇಳಬಹುದು. ಅವುಗಳಲ್ಲಿ ಲಾಜಿಕ್ ಏನಿದೆ ಅಲ್ಲಿ ನಂಬಿಕೆಯೇ ಮುನ್ನೆಲೆಗೆ ಬರುತ್ತದೆ.

ಅನಿಮಲ್, ಆರ್​ಆರ್​ಆರ್​, ಗದರ್​ ಸಿನಿಮಾಗಳಲ್ಲಿ ಲಾಜಿಕ್ ಇಲ್ಲ. ಒಬ್ಬ ವ್ಯಕ್ತಿ ಸಾವಿರ ಜನರಿಗೆ ಹೊಡೆಯುತ್ತಾನೆ ಎಂದರೆ ಅದು ನಂಬಿಕೆ ಅಷ್ಟೇ. ಸನ್ನಿ ಡಿಯೋಲ್ ಅದನ್ನು ಮಾಡುತ್ತಾರೆ ಎಂಬುದು ಗದರ್ ಸಿನಿಮಾದ ನಿರ್ದೇಶಕ ಅನಿಲ್ ಶರ್ಮ ಅವರ ನಂಬಿಕೆ. ನಿಮ್ಮ ಮೇಲೆ ನಿಮಗೆ ನಂಬಿಕೆ ಇಲ್ಲದಿದ್ದರೆ, ಪ್ರೇಕ್ಷಕರನ್ನು ನೀವು ಅನುಮಾನಿಸಿದರೆ, ಲಾಜಿಕ್ ಬಗ್ಗೆ ತುಂಬ ಗಮನ ಹರಿಸಿದರೆ ಸಮಸ್ಯೆ ಆರಂಭ ಆಗುತ್ತದೆ ಎಂದು ಕರಣ್ ಜೋಹರ್ (Karan Johar) ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net