ದುಬೈ: ಫೆಬ್ರವರಿ 19ರಿಂದ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಗೆ (Champions Trophy) ಕ್ಷಣಗಣನೆ ಆರಂಭವಾಗಿದ್ದು, ಮಿನಿ ವಿಶ್ವಕಪ್ ಎಂದೇ ಖ್ಯಾತಿ ಪಡೆದಿರುವ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನೂ ಭಾರತದ (Team India) ವಿಚಾರಕ್ಕೆ ಬರುವುದಾದರೆ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಗೆದ್ದು ಭರ್ಜರಿ ಹುಮ್ಮಸ್ಸಿನಲ್ಲಿರುವ ಟೀಮ್ ಇಂಡಿಯಾ ಈಗಾಗಲೇ ದುಬೈನಲ್ಲಿ ಲ್ಯಾಂಡ್ ಆಗಿದ್ದು, ಟೂರ್ನಿಗೆ ತಯಾರಿ ಆರಂಭಿಸಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ (Champions Trophy) ಭಾರತ ಫೆಬ್ರವರಿ 20ರಂದು ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಆಡಲಿದ್ದು, ಫೆಬ್ರವರಿ 23ರಂದು ಪಾಕಿಸ್ತಾನ ಹಾಗೂ ಮಾರ್ಚ್ 02ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಆದರೆ, ಟೂರ್ನಿ ಆರಂಭಕ್ಕೂ ಮುನ್ನ ಇದೀಗ ಭಾರತ ತಂಡಕ್ಕೆ (Team India) ಆಘಾತವೊಂದು ಎದುರಾಗಿದ್ದು, ಸ್ಟಾರ್ ಆಟಗಾರನೋರ್ವ ಅಭ್ಯಾಸದ ವೇಳೆ ಗಾಯಗೊಂಡಿದ್ದು, ಟೂರ್ನಿಗೆ ಅಲಭ್ಯರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಅಭ್ಯಾಸದ ವೇಳೆ ಟೀಮ್ ಇಂಡಿಯಾದ (Team India) ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್ (Rishabh Pant) ಮೊಣಕಾಲಿಗೆ ಗಾಯವಾಗಿದ್ದು, ಅಭ್ಯಾಸವನ್ನು ಮೊಟಕುಗೊಳಿಸಿ ಪಂತ್ ಮೈದಾನದಿಂದ ಹೊರನಡೆದಿರುವುದಾಗಿ ವರದಿಯಾಗಿದೆ. ಚಿಕಿತ್ಸೆ ಬಳಿಕ ಪಂತ್ ಅಭ್ಯಾಸವನ್ನು ಮುಂದುವರೆಸಿದ್ದಾರೆ ಎಂದು ಹೇಳಲಾಗಿದ್ದು, ಹಾರ್ದಿಕ್ ಪಾಂಡ್ಯ ಅವರು ಪಂತ್ಗೆ ಬೌಲಿಂಗ್ ಮಾಡುತ್ತಿದ್ದರು.
Rishabh Pant got hit on his knees 👀
– hope this is not serious 🙏 pic.twitter.com/Nz4e93Jf1b
— Nikhil (@TheCric8Boy) February 16, 2025
2022ರ ವರ್ಷಾಂತ್ಯದಲ್ಲಿ ಸಂಭವಿಸಿದ್ದ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪಂತ್ 2024ರಲ್ಲಿ ಕ್ರಿಕೆಟ್ಗೆ ಮರಳಿದ್ದರು. ಕಾರು ಅಪಘಾತದ ಸಂದರ್ಭದಲ್ಲಿ ಅವರ ಎಡಮೊಣಕಾಲಿಗೆ ಗಂಭೀರವಾಗಿ ಗಾಯವಾಗಿತ್ತು. ಇದೀಗ ಅದೇ ಭಾಗಕ್ಕೆ ಮತ್ತೊಮ್ಮೆ ಚೆಂಡು ತಗುಲಿ ಗಾಯವಾಗಿದ್ದು, ಗಾಯದ ಸ್ವರೂಪ ಇನ್ನಷ್ಟೇ ತಿಳಿಯಬೇಕಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ (Champions Trophy) ಭಾರತಕ್ಕೆ ಇದು ದುಬಾರಿಯಾಗಿ ಪರಿಣಮಿಸಲಿದೆಯಾ ಎಂದು ಕಾದು ನೋಡಬೇಕಿದೆ.
ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೀ), ಕೆಎಲ್ ರಾಹುಲ್ (ವಿಕೀ), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್.
Apartment ಅಲ್ಲಿ ಒಂದೇ ಕುಟುಂಬದ ನಾಲ್ವರು ಸಾವು; ಘಟನೆ ಕುರಿತು ಪೊಲೀಸರು ಹೇಳಿದ್ದಿಷ್ಟು