ಮೈಸೂರು: ಬಾಲಕ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಂಡಿರುವ ಘಟನೆ ಮೈಸೂರಿನ ವಿಶ್ವೇಶ್ವರಯ್ಯನಗರದ ಅಪಾರ್ಟ್ಮೆಂಟ್ (Apartment) ಒಂದರಲ್ಲಿ ನಡೆದಿದೆ.
ಮೃತರನ್ನು ಪ್ರಿಯಂವದ(65), ಚೇತನ್( 45), ರೂಪಾಲಿ (43) ಹಾಗೂ ಕುಶಾಲ್( 15,) ಎಂದು ಗುರುತಿಸಲಾಗಿದೆ. ವಿಶ್ವೇಶ್ವರಯ್ಯನಗರದ ಅಪಾರ್ಟ್ಮೆಂಟ್ (Apartment) ಒಂದರಲ್ಲಿ ಈ ಘಟನೆ ನಡೆದಿದ್ದು, ಮೊದಲು ಚೇತನ್ ತನ್ನ ತಾಯಿ,ಪತ್ನಿ ಹಾಗೂ ಮಗನಿಗೆ ವಿಷ ಉಣಿಸಿ ಕೊಲೆ ಮಾಡಿದ ಶಂಕೆ. ನಂತರ ತಾನು ನೇಣು ಬಿಗಿದು ಅತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಘಟನಾ ಸ್ಥಳಕ್ಕೆ ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಡಿಸಿಪಿ ಜಾಹ್ನವಿ, ವಿದ್ಯಾರಣ್ಯಪುರಂ ಇನ್ಸ್ಪೆಕ್ಟರ್ ಮೋಹಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಕುರಿತು ಮಾತನಾಡಿರುವ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ತನ್ ಕುಟುಂಬ ಹಾಗೂ ಚೇತನ್ ತಾಯಿ ಪ್ರಿಯಂವದ ಅಕ್ಕಪಕ್ಕದ ಫ್ಲ್ಯಾಟ್ನಲ್ಲಿ ವಾಸವಿದ್ದರು. ತಾಯಿ ಒಂದು ಕಡೆ ಇದ್ದರು, ಮಗ ಇನ್ನೊಂದು ಕಡೆ ಇದ್ದರು. ತಾಯಿ ಪ್ರಿಯಂವದ ಮತ್ತು ಮಗ ಚೇತನ್ ಕುಟುಂಬ ಒಟ್ಟಾಗಿಭಾನುವಾರ ಒಟ್ಟಾಗಿ ಗೊರೂರಿಗೆ ಹೋಗಿದ್ದರು.
ಮೃತ ಚೇತನ್ ಹಾಸನ ಜಿಲ್ಲೆ ಗೊರೂರು ಮೂಲದ ನಿವಾಸಿಯಾಗಿದ್ದರು. ಚೇತನ್ ಪತ್ನಿ ರೂಪಾಲಿ ಮೈಸೂರಿನ ನಿವಾಸಿಯಾಗಿದ್ದರು. 2019 ರಿಂದ ಚೇತನ್ ಮತ್ತು ರೂಪಾಲಿ ಮೈಸೂರಿನಲ್ಲೇ ನೆಲೆಸಿದ್ದರು. ಚೇತನ್ ಕಾರ್ಮಿಕರನ್ನು ಸೌದಿಗೆ ಕಳಿಸುವ ಏಜೆನ್ಸಿಯೊಂದನ್ನು ನಡೆಸುತ್ತಿದ್ದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ.
ಗಂಡನನ್ನೇ ಹಂಚಿಕೊಂಡ ಪತ್ನಿಯರು; ಅಷ್ಟಕ್ಕೂ ನಡೆದಿದ್ದಾರು ಏನು? ಇಲ್ಲಿದೆ ರೋಚಕ ಕಹಾನಿ