ನವದೆಹಲಿ: ಚಾಂಪಿಯನ್ಸ್ ಟ್ರೋಫಿ (Champions Trophy) ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ತಂಡಗಳು ಈಗಾಗಲೇ ಟೂರ್ನಿಗೆ ಬೇಕಾಗಿರುವ ಅಗತ್ಯ ತಯಾರಿಯನ್ನು ಮಾಡಿಕೊಂಡಿವೆ. ಈ ಬಾರಿಯ ಟೂರ್ನಿಯು ಪಾಕಿಸ್ತಾನ ಹಾಗೂ ದುಬೈ (ಭಾರತದ ಪಂದ್ಯಗಳು ಮಾತ್ರ) ಆತಿಥ್ಯದಲ್ಲಿ ನಡೆಯುತ್ತಿದ್ದು, ಒಂದಿಲ್ಲೊಂದು ಕಾರಣಕ್ಕೆ ಕ್ರೀಡಾಭಿಮಾನಿಗಳು ಗಮನ ಸೆಳೆಯುವಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ. ಇದೀಗ ಟೂರ್ನಿ ಸಮೀಪಿಸಿದಂತೆ ಪಾಕಿಸ್ತಾನ ತನ್ನ ನರಿಬುದ್ಧಿಯನ್ನು ಪ್ರದರ್ಶಿಸಿದ್ದು, ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.
ಮಿನಿವಿಶ್ವಕಪ್ ಎಂದೇ ಖ್ಯಾತಿ ಪಡೆದಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ (Champions Trophy) ಭಾರತ, ಪಾಕಿಸ್ತಾನ ಸೇರಿದಂತೆ ಒಟ್ಟು 08 ತಂಡಗಳು ಭಾಗಿಯಾಗುತ್ತಿವೆ. ಆದರೆ, ಟೂರ್ನಿ ನಡೆಯುವ ಕ್ರೀಡಾಂಗಣಗಳಲ್ಲಿ ಭಾರತದ ಧ್ವಜಗಳನ್ನ ಬಿಟ್ಟು ಉಳಿದ ಏಳು ರಾಷ್ಟ್ರಗಳ ಧ್ವಜಗಳು ಹಾರಾಡುತ್ತಿರುವುದು ಕಂಡು ಬಂದಿದ್ದು, ಇದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
No Indian flag in Karachi: As only the Indian team faced security issues in Pakistan and refused to play Champions Trophy matches in Pakistan, the PCB removed the Indian flag from the Karachi stadium while keeping the flags of the other guest playing nations.
– Absolute Cinema,… pic.twitter.com/2zmcATn7iQ
— Nawaz 🇵🇰 (@Rnawaz31888) February 16, 2025
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಭಾರತದ ಧ್ವಜ ಬಿಟ್ಟು ಟೂರ್ನಿಯಲ್ಲಿ ಭಾಗಿಯಾಗುತ್ತಿರುವ ಉಳಿದ ರಾಷ್ಟ್ರಗಳ ಧ್ವಜ ಹಾರಾಡುತ್ತಿರುವುದನ್ನು ನೋಡಬಹುದಾಗಿದೆ. ಸದ್ಯ ಈ ವಿಚಾರ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದು, ಪಾಕಿಸ್ತಾನದ ನರಿಬುದ್ಧಿ ವಿರುದ್ಧ ಹರಿಹಾಯ್ದಿದ್ದಾರೆ. ಟೂರ್ನಿ ಸಮಯದಲ್ಲಿ ಪಾಕಿಸ್ತಾನದ ಈ ಕ್ರಮಕ್ಕೆ ಐಸಿಸಿ ಏನು ಹೇಳುತ್ತದೆ ಎಂದು ಕಾದು ನೋಡಬೇಕಿದೆ.
ಭದ್ರತೆಯ ಕಾರಣ ನೀಡಿ ಭಾರತ ಪಾಕಿಸ್ತಾನದಲ್ಲಿ ಆಡುವುದಿಲ್ಲ ಎಂದು ಹೇಳಿ ತನ್ನೆಲ್ಲಾ ಪಂದ್ಯಗಳನ್ನು ದುಬೈನಲ್ಲಿ (ಹೈಬ್ರಿಡ್ ಮಾದರಿ) ಆಡುತ್ತಿದೆ. ಆರ್ಥಿಕ ಭೀತಿಯಿಂದ ನರಳಿರುವ ಪಾಕಿಸ್ತಾನವು ಭಾರತದ ಮೂಲಕ ತನ್ನ ದೇಶದ ಆರ್ಥಿಕ ಸುಧಾರಣೆ ಕಾಣಬಹುದು ಎಂದು ಕನಸು ಕಂಡಿತ್ತು. ಆದರೆ, ಪಾಕಿಸ್ತಾನದ ಆಸೆಗೆ ತಣ್ಣೀರೆರಚಿದ್ದ ಭಾರತ ತನ್ನೆಲ್ಲಾ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ ಆಡುವುದಾಗಿ ಹೇಳಿ ತನ್ನ ನಿಲುವಿಗೆ ಬದ್ಧವಾಗಿತ್ತು.
ಭಾರತವನ್ನು ಸೋಲಿಸುವುದಕ್ಕಿಂತ ನಮಗೆ… Champions Trophy ವಿಚಾರವಾಗಿ ಪಾಕ್ ಉಪನಾಯಕನ ಹೇಳಿಕೆ ವೈರಲ್
ಚಾಲೆಂಜ್… ದರ್ಶನ್ ಬರ್ತ್ಡೇ ಪ್ರಯುಕ್ತ The Devil ಟೀಸರ್ ರಿಲೀಸ್; ದಾಸನ ಆ್ಯಕ್ಷನ್ಗೆ ಫ್ಯಾನ್ಸ್ ಫಿದಾ