ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಂದು (ಫೆಬ್ರವರಿ 16) ತಮ್ಮ 48ನೇ ಜನುಮದಿನಕ್ಕೆ ಕಾಲಿಟ್ಟಿದ್ದು, ಅನಾರೋಗ್ಯದ ಕಾರಣ ಈ ವರ್ಷ ಬರ್ತ್ಡೇ ಆಚರಿಸಿಕೊಳ್ಳುವುದಿಲ್ಲ ಎಂದು ಮೊದಲೇ ತಿಳಿಸಿದ್ದರು. ನೆಚ್ಚಿನ ನಟ ಜನುಮದಿನವನ್ನು ಆಚರಿಸಿಕೊಳ್ಳದಿದ್ದರೂ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದ್ದು, ದರ್ಶನ್ ನಟನೆಯ ದಿ ಡೆವಿಲ್ (The Devil) ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.
ಈ ಹಿಂದೆ ಘೋಷಣೆಯಾದಂತೆ ದರ್ಶನ್ ಅವರ ಜನುಮದಿನದಂದೇ ದಿ ಡೆವಿಲ್ (The Devil) ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಸಂಭ್ರಮವನ್ನು ಡಬಲ್ ಮಾಡಿದೆ. ಟೀಸರ್ನ ಕೊನೆಯಲ್ಲಿ ದರ್ಶನ್ ಅವರ ಡೈಲಾಗ್ಗೆ ಫ್ಯಾನ್ಸ್ ಫಿದಾ ಆಗಿದ್ದು, ದರ್ಶನ್ ಲುಕ್, ಆ್ಯಕ್ಷನ್, ಫೈಟಿಂಗ್ ಸೀನ್, ಮ್ಯೂಸಿಕ್ ಎಲ್ಲವೂ ಮಸ್ತ್ ಅಂತಿದ್ದಾರೆ ಫ್ಯಾನ್ಸ್.
1:04 ನಿಮಿಷ ಅವಧಿಯ ಟೀಸರ್ನಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವ ನಟ ದರ್ಶನ್ ಭರ್ಜರಿ ಸ್ಟಂಟ್ ಹಾಗೂ ಆ್ಯಕ್ಷನ್ ಮೂಲಕವೇ ಅಬ್ಬರಿಸಿದ್ದು, ಟೀಸರ್ನ ಕೊನೆಯಲ್ಲಿ ಚಾಲೆಂಜ್ .. ಹೂಂ ಎಂದು ಡೈಲಾಗ್ ಹೊಡೆದಿದ್ದಾರೆ. ಟೀಸರ್ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಮಂದಿ ಇದನ್ನು ವೀಕ್ಷಿಸಿದ್ದು, ದರ್ಶನ್ಗೆ ಶುಭಹಾರೈಸಿ ಸಿನಿಮಾ ರಿಲೀಸ್ ಡೇಟ್ಅನ್ನು ರಿವೀಲ್ ಮಾಡುವಂತೆ ಕಮೆಂಟ್ ಹಾಕುತ್ತಿದ್ದಾರೆ.
ಟೀಸರ್ ಬಿಡುಗಡೆಗೆ ಮುನ್ನವೇ ಡೆವಿಲ್ ಸಿನಿಮಾದ ಟೈಟಲ್‌ನಲ್ಲಿ ಬದಲಾವಣೆಯಾಗಿತ್ತು. ಸಿನಿಮಾ ಸೆಟ್ಟೇರಿದಾಗ ‘ಡೆವಿಲ್ ದಿ ಹೀರೋ’ ಅಂತಿದ್ದ ಟೈಟಲ್ ಈಗ ‘ದಿ ಡೆವಿಲ್’ (The Devil) ಎಂದು ಬದಲಾವಣೆಯಾಗಿದೆ. ದಿಢೀರ್ ಎಂದು ಟೈಟಲ್‌ನಲ್ಲಿ ಮಾರ್ಪಾಡು ಮಾಡಿದ್ಯಾಕೆ ಎಂದು ಚಿತ್ರತಂಡವಾಗಲಿ, ನಿರ್ದೇಶಕರಾಗಲಿ ಎಲ್ಲೂ ಸ್ಪಷ್ಟನೆ ಕೊಟ್ಟಿಲ್ಲ.
ಕೇಳಿದಷ್ಟು ವರದಕ್ಷಿಣೆ ತರಲಿಲ್ಲವೆಂದು ಸೊಸೆಗೆ HIV ಸೋಂಕಿತ ಸೂಜಿಯನ್ನು ಚುಚ್ಚಿದ ಅತ್ತೆ-ಮಾವ
NewDelhi ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಪ್ರಕರಣ; ಮೋದಿ ಸರ್ಕಾರದ ಅಸಮರ್ಥ ಆಡಳಿತವೇ ಕಾರಣ: ಕಾಂಗ್ರೆಸ್ ಆರೋಪ