ಕಪಿಲೇಶ್ವರ ದೇವರ ಜಾತ್ರೆ

kapileshwara jatre
ಕಪಿಲೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
Published on

ಕೊಪ್ಪ: ಬಿಂತ್ರವಳ್ಳಿ ಗ್ರಾಪಂ ಕುದುರೆಗುಂಡಿ ಸಮೀಪದ ಕಪಿಲಾ ನದಿಯ ತಟದಲ್ಲಿನ ಕಪಿಲೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು. ಜಾತ್ರೆ ಅಂಗವಾಗಿ ದೇವರ ಸನ್ನಿಧಿಯಲ್ಲಿ ಕರ್ಪೂರದಾರತಿ, ಕುಂಕುಮಾರ್ಚನೆ, ಪಂಚಕಜ್ಜಾಯ ಸೇವೆ ಹಾಗೂ ಅಖಂಡ ಭಜನೆ ಹಮ್ಮಿಕೊಳ್ಳಲಾಗಿತ್ತು. ಜಾತ್ರಾ ಮಹೋತ್ಸವಕ್ಕೆ ಪಕ್ಕದ ಊರುಗಳಾದ ವಿಠಲಮಕ್ಕಿ, ತಲಮಕ್ಕಿ, ಕೆರೆಗದ್ದೆ, ನುಗ್ಗಿ ಭಾಗದಿಂದ ಸಾಕಷ್ಟು ಭಕ್ತರು ಆಗಮಿಸಿ ದರ್ಶನ ಪಡೆದರು. ಲಾಹಾರದ ವ್ಯವಸ್ಥೆ ಮಾಡಲಾಗಿತ್ತು. ಅಚ್ಯುತ್ ಭಟ್ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು. ಕಪಿಲೇಶ್ವರ ಸೇವಾ ಸಮಿತಿ ಅಧ್ಯಕ್ಷ ಡಾಕಪ್ಪ ಗೌಡ, ಹೇಮಂತ್ ಶೆಟ್ಟಿ, ನಾಗೇಶ್ ನಾಯಕ್, ಎಚ್.ಎಲ್.ದೀಪಕ್, ಗ್ರಾಪಂ ಸದಸ್ಯ ಹೇಮಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net