VIDEO: ಕಪಿಲ್​ ಶರ್ಮಾ ಕಾಮಿಡಿ ಶೋದಲ್ಲಿ ಸೋನು ಸೂದ್​​ ಕಣ್ಣೀರು!; ಭಾವುಕ ಕ್ಷಣಗಳ ವಿಡಿಯೋ ಇಲ್ಲಿದೆ..

Sonu
Published on

ಕಳೆದ ನಾಲ್ಕು ತಿಂಗಳಿಂದ ಕಪಿಲ್​ ಶರ್ಮಾ ನಡೆಸಿಕೊಡುವ ಕಾಮಿಡಿ ಶೋ ಸಹ ಕರೊನಾದಿಂದಾಗಿ ಸ್ಥಗಿತಗೊಂಡಿತ್ತು. ಹಳೇ ಏಪಿಸೋಡ್​ಗಳನ್ನೇ ಮರುಪ್ರಸಾರ ಮಾಡಲಾಗಿತ್ತು. ಇದೀಗ ಶನಿವಾರದಿಂದ ಹೊಸ ಶೋಗಳ ಆರಂಭವಾಗಿದೆ. ಆ ಮರುಆರಂಭವಾದ ಶೋನ ಮೊದಲ ಏಪಿಸೋಡ್​ನಲ್ಲಿ ಸೋನು ಸೂದ್​ ಅತಿಥಿಯಾಗಿ ಆಗಮಿಸಿದ್ದರು. ಹೆಸರೇ ಹೇಳುವಂತೆ ಇದೊಂದು ಪಕ್ಕಾ ಕಾಮಿಡಿ ಶೋ. ಆದರೆ, ಶನಿವಾರದ ಶೋ ಭಾವುಕವಾಗಿತ್ತು. ಸ್ವತಃ ಸೋನು ಸೂದ್​ ಕಣ್ಣೀರು ಹಾಕಿದರು.

ಕಳೆದ ನಾಲ್ಕು ತಿಂಗಳಿಂದ ಒಂದಲ್ಲ ಒಂದು ಕಾರ್ಯದಲ್ಲಿ ಸೂನು ಸೂದ್​ ತೊಡಗಿಸಿಕೊಂಡಿದ್ದರು. ಸಾವಿರಾರು ಮಂದಿಯನ್ನು ಅವರವರ ಊರು ಮುಟ್ಟಿಸಿದ್ದರು. ಕೆಲಸ ಇಲ್ಲದವರಿಗೆ ಕೆಲಸ ನೀಡಿದ್ದರು. ನಿರ್ಗತಿಕರಿಗೆ ಧನ ಸಹಾಯ ಮಾಡಿದ್ದರು. ಒಟ್ಟಾರೆಯಾಗಿ ಇಡೀ ದೇಶವೇ ಅವರ ಕಾರ್ಯವನ್ನು ಮುಕ್ತವಾಗಿ ಕೊಂಡಾಡಿತ್ತು. ಯಾರೂ ಮಾಡದ ಆ ಸೇವೆಯನ್ನು ಸೋನು ಸೂದ್​ ಕಿಂಚಿತ್ತೂ ಬೇಸರ ಪಟ್ಟುಕೊಳ್ಳದೆ ಮಾಡಿದ್ದರು. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ಕಪಿಲ್​ ಶರ್ಮಾ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ, ಅವರೊಂದಿಗೆ ಆ ಪಯಣವನ್ನು ಮತ್ತೆ ತೆರೆದಿಟ್ಟಿದ್ದಾರೆ.

ಶೋದಲ್ಲಿ ಹಾಸ್ಯದ ಜತೆಗೆ ಸೋನು ಸೂದ್​ ಮಾಡಿದ ಕೆಲಸಗಳಿಗೆ ಜನತೆಯ ಕೃತಜ್ಞತೆ ಅರ್ಪಿಸಿದ ವಿಡಿಯೋಗಳನ್ನು ಪ್ರಸಾರ ಮಾಡಲಾಯಿತು. ಆ ವಿಡಿಯೋ ತುಣುಕುಗಳನ್ನು ನೋಡಿ ಸೋನು ಅಕ್ಷರಶಃ ಕಣ್ಣೀರಾದರು. ಅವರ ಮೊಗದಲ್ಲಿ ಸಾರ್ಥಕ ಭಾವ ಕಾಣುತ್ತಿತ್ತು. ಅವರ ಆ ಭಾವುಕ ಕ್ಷಣಗಳ ವಿಡಿಯೋಗಳು ಇಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net