More

    ಬಿಹಾರ ಪೊಲೀಸರ ಕೈಗೆ ಇನ್ನೂ ಸಿಕ್ಕಿಲ್ಲ ರಿಯಾ ಚಕ್ರವರ್ತಿ

    ಬಿಹಾರದ ಪೊಲೀಸರು, ರಿಯಾ ಚಕ್ರವರ್ತಿಯನ್ನು ವಿಚಾರಣೆ ನಡೆಸುವುದಕ್ಕೆ ಮುಂಬೈಗೆ ಬಂದು ನಾಲ್ಕು ದಿನಗಳಾಗಿವೆ. ಆದರೆ, ಇದುವರೆಗೂ ರಿಯಾ ಮಾತ್ರ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ ಎನ್ನುವುದು ವಿಚಿತ್ರ.

    ಇದನ್ನೂ ಓದಿ: ‘ರವಿ-ಚಂದ್ರ’ ಚಿತ್ರದ ಹೆಸರು ಬದಲಾಯ್ತಾ?

    ಸುಶಾಂತ್ ಸಿಂಗ್​ ರಜಪೂತ್​ ಅವರ ಆತ್ಮಹತ್ಯೆ ತನಿಖೆಯನ್ನು ಮುಂಬೈ ಪೊಲೀಸರು ಮಾಡುತ್ತಿರುವುದು ಗೊತ್ತೇ ಇದೆ. ಈಗಾಗಲೇ ಮುಂಬೈ ಪೊಲೀಸ್​ 35ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಿದೆ. ಈ ಮಧ್ಯೆ, ಸುಶಾಂತ್​ ಅವರ ತಂದೆ ಕೆ.ಕೆ. ಸಿಂಗ್​, ಬಿಹಾರದ ಪೊಲೀಸರಿಗೆ ರಿಯಾ ಚಕ್ರವರ್ತಿ ವಿರುದ್ಧ ದೂರು ನೀಡಿದ್ದರು.

    ಈ ಸಂಬಂಧ ರಿಯಾ ಅವನ್ನು ವಿಚಾರಣೆಗೆ ಒಳಪಡಿಸುವುದಕ್ಕೆಂದು, ಬಿಹಾರದ ಪೊಲೀಸರು ಬುಧವಾರ ಮುಂಬೈಗೆ ಆಗಮಿಸಿದ್ದಾರೆ. ರಿಯಾ ಅವರನ್ನು ವಿಚಾರಣೆ ಮಾಡಬೇಕೆಂದು ಅವರ ಮನೆಗೆ ಹೋದರೂ, ರಿಯಾ ಸಿಕ್ಕಿಲ್ಲ. ಅದಾಗಿ ನಾಲ್ಕು ದಿನಗಳೇ ಕಳೆದಿವೆ. ಇನ್ನು ಪೊಲೀಸರು ಹುಡುಕಾಟ ನಡೆಸುತ್ತಲೇ ಇದ್ದಾರೆ.

    ಈ ಮಧ್ಯೆ, ರಿಯಾ ತಮ್ಮ ಮೇಲಿರುವ ಆರೋಪಗಳ ಕುರಿತಾಗಿ ಒಂದು ವಿಡಿಯೋ ಮಾಡಿ, ಅದನ್ನು ಬಿಡುಗಡೆ ಮಾಡಿದ್ದಾರೆ. ಸುಶಾಂತ್​ ಪ್ರಕರಣದಲ್ಲಿ ತಾವು ನಿರ್ದೋಷಿ ಎಂದು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಲೀಕ್​ ಆಯ್ತು ರಜನಿಕಾಂತ್ ಅಭಿನಯದ ‘ಅಣ್ಣಾತ್ತೆ’ ಕಥೆ …

    ಇಷ್ಟಕ್ಕೂ ಯಾಕೆ ಬಿಹಾರದ ಪೊಲೀಸರಿಗೆ ರಿಯಾ ಚಕ್ರವರ್ತಿ ಸಿಗುತ್ತಿಲ್ಲ? ಈ ಕುರಿತು ಮಾತನಾಡಿರುವ ಬಿಹಾರ ಪೊಲೀಸ್​ನ ಡಿಜಿ ಗುಪ್ತೇಶ್ವರ್​ ಪಾಂಡೆ, ‘ಈ ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಸದ್ಯಕ್ಕೆ ರಿಯಾ ಇನ್ನೂ ನಮಗೆ ಸಿಕ್ಕಿಲ್ಲ. ಅವರಿಗಾಗಿ ಹುಡುಕಾಟ ನಡೆಸಿದ್ದೇವೆ’ ಎಂದು ಅವರು ಹೇಳಿಕೊಂಡಿದ್ದಾರೆ.

    ಲೀಕ್​ ಆಯ್ತು ರಜನಿಕಾಂತ್ ಅಭಿನಯದ ‘ಅಣ್ಣಾತ್ತೆ’ ಕಥೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts