

ಬೆಂಗಳೂರು; ‘ಕರ್ನಾಟಕ’ ನಾಮಕರಣದ ಸುವರ್ಣ ಸಂಭ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ವರ್ಷಪೂರ್ತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದು, ಏಕೀಕರಣಕ್ಕಾಗಿ ಶ್ರಮಿಸಿದ ಐವತ್ತು ಮಹನಿಯರನ್ನು ಗುರುತಿಸಿ ಪುರಸ್ಕಾರ ನೀಡುತ್ತಿದ್ದು, ಇದೇ ವೇಳೆ 5 ಪ್ರಶಸ್ತಿಗಳನ್ನು ಘೋಷಿಸಿದೆ.
ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಮಾತನಾಡಿ, 50 ಪ್ರಶಸ್ತಿಗಳಲ್ಲದೆ, ಏಕೀಕರಣಕ್ಕಾಗಿ ಹುತಾತ್ಮರಾದ ‘ರಂಜಾನ್ ಸಾಬ್’, ಕೋಮು ಸೌಹಾರ್ದತೆ ಹಾಗೂ ಭಾವೈಕ್ಯತೆಗೆ ಹೆಸರಾದ ‘ಸಂತ ಶಿಶಿನಾಳ ಶರೀರು ಮತ್ತು ಕಳಸದ ಗುರು ಗೋವಿಂದ ಭಟ್ಟರು’, ಕನ್ನಡಕ್ಕೆ ಮೊದಲ ನಿಘಂಟು ನೀಡಿದ ‘ರ್ಡಿನೆಂಡ್ ಕಿಟಲ್’ ಹೆಸರಿನಲ್ಲಿ 4 ಪ್ರಶಸ್ತಿ ಹಾಗೂ ವಿದೇಶದಲ್ಲಿ ನೆಲೆಸಿ ಕನ್ನಡಕ್ಕಾಗಿ ಅನುಮಪ ಸೇವೆ ಸಲ್ಲಿಸುತ್ತಿರುವ ಕನ್ನಡಿಗರು ಹಾಗೂ ಸಂಘ-ಸಂಸ್ಥೆಗಳಿಗೆ ‘ವಿಶೇಷ ಪ್ರಶಸ್ತಿತಯನ್ನು ಪರಿಷತ್ತಿನಿಂದ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಈ ಪ್ರಶಸ್ತಿಗಳ ಮಾನದಂಡ, ಸ್ವರೂಪಗಳ ಕುರಿತು ರೂಪುರೇಷೆ ಸಿದ್ಧಪಡಿಸಲು ಹಾಗೂ ಪುರಸ್ಕೃತರ ಆಯ್ಕೆಗಾಗಿ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು. ಯಾವುದೇ ಅರ್ಜಿ, ಶಿಾರಸುಗಳ್ಳಿಲ್ಲದೆ ಪಾರದರ್ಶಕವಾಗಿ ಅರ್ಹ ವ್ಯಕ್ತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಸುವರ್ಣ ಸಂಭ್ರಮದ ಅಂಗವಾಗಿ ನೀಡಲಾಗುತ್ತಿರುವ 50 ಪ್ರಶಸ್ತಿಗಳನ್ನು 50 ಮಹನೀಯರಿಂದ ಪ್ರದಾನ ಮಾಡಿಸಲು ಚಿಂತನೆ ನಡೆಸಲಾಗಿದ್ದು, ಕಾರ್ಯಕ್ರಮದಲ್ಲಿ 50 ಸಾವಿರ ಜನರನ್ನು ಒಗ್ಗೂಡಿಸುವ ಆಶಯ ಇದೆ ಎಂದರು.
ವರ್ಷಪೂರ್ತಿ ಕಾರ್ಯಕ್ರಮ: ‘ಕರ್ನಾಟಕ’ ನಾಮಕರಣ ಸುವರ್ಣ ಸಂಭ್ರಮದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ವರ್ಷ ಪೂರ್ತಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ವಿಶೇಷವಾಗಿ ಕನ್ನಡ ಕವಿಗಳ, ಕನ್ನಡ ಪ್ರೇಮದ, ಕರ್ನಾಟಕದ ಹಿರಿಮೆ ಸಾರುವ ‘ನಾವಾಡುವ ನುಡಿಯೇ ಕನ್ನಡ ನುಡಿ’ ಹೆಸರಲ್ಲಿ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗುವುದು. ಕನ್ನಡ, ಕನ್ನಡಿಗ, ಕರ್ನಾಟಕ ಕುರಿತು ಅರಿವು ಹೆಚ್ಚಿಸಲು ಕನ್ನಡ ಪ್ರೇಮ ಬೆಳೆಸಲು ಗ್ರಾಮ, ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಗುವುದು ಎಂದು ಜೋಶಿ ಹೇಳಿದರು.
ಹೆಸರಾಯಿತು ಕರ್ನಾಟಕ-50: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮ ಹಾಗೂ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕಸಾಪ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ನ.1ರಂದು ಇಡೀ ದಿನ ‘ಹೆಸರಾಯಿತು ಕರ್ನಾಟಕ -50’ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೆಳಗ್ಗೆ 10.30ಕ್ಕೆ ಮುಖ್ಯ ಮಾಹಿತಿ ಆಯುಕ್ತ ಎನ್.ಸಿ.ಶ್ರೀನಿವಾಸ ಉದ್ಘಾಟಿಸಲಿದ್ದಾರೆ. ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲಶಾಸೀ ಕಸಾಪ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಇದೇ ವೇಳೆ ಏಕೀಕರಣಕ್ಕಾಗಿ ಹುತಾತ್ಮರಾದ ರಂಸಾನ್‌ಸಾಬ್ ಮೊಮ್ಮಗ ಶರ್ಮಾಸ್ ವಲಿ ಅವರನ್ನು ಅಭಿನಂದಿಸಲಾಗುವುದು.
ಶಿಕ್ಷಣ ತಜ್ಞ ಗುರುರಾಜ ಕರಜಗಿ ‘ಒಂದೇ ಒಂದೇ ಕರ್ನಾಟಕ ಒಂದೇ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 1ರಿಂದ ಕವಯಿತ್ರಿ ಪಿ.ಚಂದ್ರಿಕಾ ಅಧ್ಯಕ್ಷತೆಯಲ್ಲಿ ‘ಚಿರಂತನ ಕರ್ನಾಟಕ’ ಕವಿಗೋಷ್ಠಿ ಹಾಗೂ ಮಧ್ಯಾಹ್ನ 3ರಿಂದ ಭಾಗ್ಯಶ್ರೀ ಗೌಡ ಮತ್ತು ತಂಡದಿಂದ ‘ಹಚ್ಚೇವು ಕನ್ನಡದ ದೀಪ’ ಗೀತ ಗಾಯನ ನಡೆಯಲಿದೆ. ಸಂಜೆ 4.30ಕ್ಕೆ ಸಾಹಿತಿ ದೊಡ್ಡರಂಗೇಗೌಡ ಸಮಾರೋಪ ಭಾಷಣ ಮಾಡಲಿದ್ದಾರೆ.