ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಕಸಾಪ ಕಡೆಗಣನೆಗೆ ಅಸಮಾಧಾನ

Kasapa
Published on

ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಆಯ್ಕೆ ಮಾಡುವ ಸಲಹಾ ಸಮಿತಿಯಲ್ಲಿ ಪದನಿಮಿತ್ತ ಸದಸ್ಯರಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಹೆಸರನ್ನು ಕೈ ಬಿಟ್ಟಿರುವುದಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಅಸಮಾಧಾನ ವ್ಯಕ್ತಪಡಿಸಿದೆ.

ಈವರೆಗಿನ ಯಾವುದೇ ಸರ್ಕಾರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಪದ ನಿಮಿತ್ತ ಸದಸ್ಯರಾಗಿ ಇರುತ್ತಿದ್ದರು. ಕಳೆದ ವರ್ಷವೂ ಮುಖ್ಯಮಂತ್ರಿಗಳು ಪರಿಷತ್ತಿನ ಅಧ್ಯಕ್ಷರನ್ನು ಸಭೆಗೆ ಆಹ್ವಾನಿಸಿದ್ದರು. ಇದು ಪರಂಪರಾಗತವಾಗಿ ನಡೆದು ಕೊಂಡು ಬಂದಿರುವ ಸಂಗತಿ. ಆದರೆ ಈ ಪರಿಷತ್ತಿನ ಅಧ್ಯಕ್ಷರ ಹೆಸರು ಕೈಬಿಟ್ಟಿರುವುದು ತಪ್ಪು ಸಂದೇಶ ನೀಡಿದಂತಾಗಿದೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಸ್ಪಷ್ಟನೆ ನೀಡಬೇಕೆಂದು ಪರಿಷತ್ತು ಒತ್ತಾಯಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net