

ಆಫ್ರಿಕಾ: ಕಾವೇರಿ ಕನ್ನಡ ಸಂಘ ದರ್ ಎಸ್ ಸಲಾಮ್ ಕನ್ನಡ ಬಂಧುಗಳು ಇಲ್ಲಿನ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ "ಬಾರಿಸು ಕನ್ನಡ ಡಿಂಡಿಮವ " ಗೀತೆಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕಿ ಸೌಮ್ಯ ಮಂಜುನಾಥ್ ಚವಾಣ್ ಅವರು ಸಂಘದ ಸದಸ್ಯರಿಗೆ ಸ್ವಾಗತ ಕೋರಿ ಶುಭ ಕೋರಿದ ನಂತರ ಸಂಘದ ಅಧ್ಯಕ್ಷ ಕಲ್ಯಾಣ್ ಕುಮಾರ್ ಅವರು " ಕನ್ನಡ ನಾಡು ನುಡಿ, ಹಿರಿಮೆಯನ್ನು ತಾಂಜಾನಿಯ ದೇಶದಲ್ಲಿ ಅವಿರತವಾಗಿ ಪಸರಿಸುವ ಹೊಣೆ ನಮ್ಮದು. ನಾವೆಲ್ಲರೂ ಜೊತೆಗೂಡಿ ಕನ್ನಡ ನಾಡಿನ ಹಿರಿಮೆ , ಕನ್ನಡ ನೆಲದ ಸಂಸ್ಕೃತಿಯನ್ನು ಆಚರಿಸುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ತಿಳಿಸೋಣ " ಎಂಬ ಆಶಯ ವ್ಯಕ್ತಪಡಿಸಿದರು.