ಸೆಟ್ಟೇರಿದ ಬಿಳಿ ಚುಕ್ಕಿ ಹಳ್ಳಿ ಹಕ್ಕಿ; 'ಮಹಿರ' ಮಹೇಶ್ ನಿರ್ದೇಶನದ ಚಿತ್ರ

bili hakki chukki
Published on

ಬೆಂಗಳೂರು: ‘ಮಹಿರ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಿರ್ದೇಶಕ ಮಹೇಶ್ ಗೌಡ ಹೊಸ ಚಿತ್ರ ೋಷಣೆ ಮಾಡಿದ್ದಾರೆ. ಅದರ ಶೀರ್ಷಿಕೆ ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’.

ಇದು ತೊನ್ನು (ವಿಟಿಲಿಗೋ) ಸಮಸ್ಯೆ ಸುತ್ತ ಹೆಣೆದ ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ನ ಸಿನಿಮಾ ಆಗಿದ್ದು, ನವಿರಾದ ಪ್ರೇಮಕಥೆಯೂ ಇದೆ. ವರಮಹಾಲಕ್ಷ್ಮೀ ಹಬ್ಬದ ಶುಭ ಸಂದರ್ಭದಲ್ಲಿ ಚಿತ್ರೀಕರಣ ಶುರು ಮಾಡಲಾಗಿದೆ. ನಿರ್ದೇಶನದ ಜತೆಗೆ ಮಹೇಶ್ ನಾಯಕರಾಗಿಯೂ ಬಣ್ಣ ಹಚ್ಚಲಿದ್ದಾರೆ.

ಅವರಿಗೆ ಜೋಡಿಯಾಗಿ ಕಿರುತೆರೆ ನಟಿ ವೈಷ್ಣವಿ ಕಾಣಿಸಿಕೊಳ್ಳಲಿದ್ದಾರೆ. ಶೃಂಗೇರಿ, ಕೊಪ್ಪ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net