More

    ಹಬ್ಬದ ಸಿಹಿ ಊಟ; ಪಾಯಲ್ ರಾಧಾಕೃಷ್ಣ ವರಮಹಾಲಕ್ಷ್ಮಿ ಆಚರಣೆ

    ವರಮಹಾಲಕ್ಷ್ಮೀ ಹಬ್ಬ ಎಂದರೆ ಮಹಿಳೆಯರಿಗೆ ವಿಶೇಷ. ದೇವಿಯ ಪೂಜೆ, ಭಕ್ತಿ ಜತೆಗೆ ವಿಶೇಷ ನೈವೇದ್ಯಗಳ ಸವಿ ಮನೆ ತುಂಬಿರುತ್ತದೆ. ಸಿನಿಮಾ ರಂಗದ ಹಲವು ತಾರೆಯರೂ ಈ ಹಬ್ಬದ ವಾತಾವರಣ, ಸಂಭ್ರಮವನ್ನು ಮನೆಯಲ್ಲಿ ಕುಟುಂಬದವರೊಂದಿಗೆ ಆಚರಿಸಲು ಇಚ್ಛಿಸುತ್ತಾರೆ. ಪೂಜೆ, ಹಬ್ಬವನ್ನು ಇಷ್ಟಪಡುವ ನಟಿ ಪಾಯಲ್ ರಾಧಾಕೃಷ್ಣ ಹಬ್ಬದ ಆಚರಣೆ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ್ದಾರೆ.

    ವಿಶೇಷ ಸಿಹಿ ತಿಂಡಿ:
    ಮೂಲತಃ ಮಂಗಳೂರಿನವರಾಗಿದ್ದರೂ ಮೈಸೂರಿನಲ್ಲಿ ನಿವಾಸವಿರುವುದರಿಂದ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸುವ ಪಾಯಲ್,‘ಎಲ್ಲರ ಮನೆಯಲ್ಲಿ ಇರುವಂತೆ ನಮ್ಮ ಮನೆಯಲ್ಲೂ ಪೂಜೆ ಇರುತ್ತದೆ. ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಹಬ್ಬ ಆಚರಿಸುವುದು, ನೈವೇದ್ಯಕ್ಕೆಂದು ಮಾಡುವ ವಿಶೇಷ ಸಿಹಿ ತಿಂಡಿಗಳು ನನಗಿಷ್ಟ. ನೀರ್‌ದೋಸೆ, ಬೆಲ್ಲ ಮತ್ತು ಅವಲಕ್ಕಿ ಹಾಕಿದ ಸಿಹಿ, ದಾಲ್‌ತೊಯ್ ಜತೆ ಕುಚಲಕ್ಕಿ ಅನ್ನ ಹಾಗೂ ಎರಡು ಬಗೆಯ ಪಾಯಸ ಇರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಚಿನ್ನ ಖರೀದಿಗೆ ಇದೊಂದು ಶುಭಸಂದರ್ಭ. ಹೀಗಾಗಿ ಅಪ್ಪ ನನಗೆಂದು ಪ್ರತಿವರ್ಷ ಬಂಗಾರ ಕೊಡಿಸುತ್ತಾರೆ’ ಎನ್ನುತ್ತಾರೆ.

    ಶೂಟಿಂಗ್ ನಡುವೆ ಆಚರಣೆ:
    ಸದ್ಯ ಪಾಯಲ್ ವೈಝಾಗ್‌ನಲ್ಲಿ ತೆಲುಗಿನ ‘ಪ್ರಸನ್ನ ವದನಂ’ ಚಿತ್ರದ ಶೂಟಿಂಗ್‌ನಲ್ಲಿ ಬಿಜಿಯಿದ್ದಾರೆ. ಈ ನಡುವೆ,‘ಹಬ್ಬದ ವಾತಾವರಣವನ್ನು ನಾನು ಸಾಮಾನ್ಯವಾಗಿ ತಪ್ಪಿಸಿಕೊಳ್ಳಲು ಇಷ್ಟಪಡುವುದಿಲ್ಲ. ಎಲ್ಲೇ ಶೂಟಿಂಗ್ ಇದ್ದರೂ ಕೊನೇ ಪಕ್ಷ ಹತ್ತಿರದ ಪರಿಚಯದವರ ಮನೆಗಾದರೂ ಹೋಗಿ ಆಚರಿಸಲು ಇಷ್ಟಪಡುತ್ತೇನೆ. ಆದರೆ, ಈ ಬಾರಿ ಹೊರಗೆ ಶೂಟಿಂಗ್ ಇರುವುದರಿಂದ ಎಲ್ಲಿಗೂ ಹೋಗುವುದು ಕಷ್ಟವಾಗಬಹುದು. ಆದರೆ, ಇಲ್ಲಿಯೂ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸುವುದರಿಂದ, ಆ ದಿನ ಬಹುಶಃ ಯಾರೂ ಕೆಲಸ ಮಾಡುವುದಿಲ್ಲ. ಶೂಟಿಂಗ್ ಸೆಟ್‌ನಲ್ಲಿಯೇ ಹಬ್ಬವನ್ನು ಆಚರಿಸುವ ನಿರೀಕ್ಷೆಯಿದೆ. ಇನ್ನು ಮನೆಯಲ್ಲಿ ಅಪ್ಪ ಈ ಬಾರಿಯೂ ಚಿನ್ನ ತಂದಿರುತ್ತಾರೆ. ಮುಂದಿನ ವಾರ ಮನೆಗೆ ಹೋಗಲು ಕಾಯುತ್ತಿದ್ದೇನೆ’ ಎಂದು ಸಂತಸ ಹಂಚಿಕೊಳ್ಳುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts