

ನವದೆಹಲಿ: ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಅವರ ಪ್ರೇಮಕಥೆ ಕಳೆದ ಹಲವಾರು ವರ್ಷಗಳಿಂದ ಬಾಲಿವುಡ್ ಕಾರಿಡಾರ್‌ಗಳಲ್ಲಿ ಫೇಮಸ್. ಇತ್ತೀಚೆಗೆ ಈ ಜೋಡಿಯ ಬಗ್ಗೆ ಬ್ರೇಕಪ್ ವದಂತಿಗಳು ಸಾಮಾಜಿಕ ಮಾಧ್ಯಮ ಸೇರಿದಂತೆ ಹಲವು ವೆಬ್‌ಸೈಟ್‌ಗಳಲ್ಲಿ ಹರಡುತ್ತಿವೆ. ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ದೂರವಾಗಿದ್ದಾರೆ ಎಂದು ಹೇಳಲಾಗುತ್ತಿದೆ, ಆದರೂ ಈ ಜೋಡಿ ಅಂತಹ ಸುದ್ದಿಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅರ್ಜುನ್ ಮತ್ತು ಮಲೈಕಾ ಬೇರೆಯಾಗಿದ್ದಾರಾ?
ಅರ್ಜುನ್ ಕಪೂರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರವಾಸದಲ್ಲಿದ್ದ ಚಿತ್ರವನ್ನು ಹಂಚಿಕೊಂಡಿದ್ದರು, ಅದರಲ್ಲಿ ಅವರು ಏಕಾಂಗಿಯಾಗಿದ್ದನ್ನು ನೋಡಿ ಮಲೈಕಾ ಮತ್ತು ಅರ್ಜುನ್ ಅವರ ಬ್ರೇಕಪ್ ಸುದ್ದಿ ಪ್ರಾರಂಭವಾಯಿತು. ಆದರೆ ಅರ್ಜುನ್ ಮತ್ತು ಮಲೈಕಾ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕುಶಾ ಜೊತೆ ತಳುಕು ಹಾಕಿಕೊಂಡ ಅರ್ಜುನ್ ಕಪೂರ್ ಹೆಸರು
ಕೆಲವು ದಿನಗಳಿಂದ ನಟಿ ಕುಶಾ ಕಪಿಲಾ ಅವರ ಹೆಸರು ಅರ್ಜುನ್ ಕಪೂರ್ ಜತೆ ತಳುಕು ಹಾಕಿಕೊಂಡಿದೆ. ಆದರೆ ಇದೀಗ ಕುಶಾ ಕಪಿಲಾ ಈ ಎಲ್ಲಾ ವರದಿಗಳ ಬಗ್ಗೆ ಮೌನ ಮುರಿದು ಈ ರೀತಿ ಮಾತನಾಡುತ್ತಿರುವವರಿಗೆ ತಕ್ಕ ಉತ್ತರ ನೀಡಿದ್ದಾರೆ. ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿರುವ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿದ ಕುಶಾ, “Roz apne baare mein itni bakwas padh kar mujhe apna khud see ek formal introduction karwana padega'' ಎಂದು ಬರೆದುಕೊಂಡಿದ್ದಾರೆ.
ಇಬ್ಬರ ವದಂತಿಯೂ ಕರಣ್ ಪಾರ್ಟಿಯಿಂದಲೇ ಶುರು
ಈ ಹಿಂದೆ, ಅರ್ಜುನ್ ಕಪೂರ್ ಮತ್ತು ಕುಶಾ ಕಪಿಲಾ ನಿರ್ದೇಶಕ ಕರಣ್ ಜೋಹರ್ ಅವರ ಮನೆಯಲ್ಲಿ ಕಾಣಿಸಿಕೊಂಡಿದ್ದರು. ಇಲ್ಲಿ ಮಲೈಕಾ ಅರೋರಾ ಅವರನ್ನು ನೋಡದ ಜನ ಬೇರೆ ಬೇರೆ ಮಾತುಗಳನ್ನಾಡತೊಡಗಿದರು.