ಸುಶಾಂತ್​ ಪ್ರಕರಣದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಕಂಗನಾ ರಣಾವತ್​!

Kangana-Sushant
Published on

ಬಾಲಿವುಡ್​ನ ಯುವ ನಟ ಸುಶಾಂತ್​ ಸಿಂಗ್​ ಸಾವನ್ನಪ್ಪಿ ಎರಡು ತಿಂಗಳ ಮೇಲಾಯಿತು. ಇಂದಿಗೂ ಅವರ ಸಾವಿನ ಪ್ರಕರಣ ಒಂದಲ್ಲ ಒಂದು ರೀತಿ ಸದ್ದು ಮಾಡುತ್ತಿದೆ. ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್​ಗಳು ಎದುರಾಗುತ್ತಿವೆ. ಅದರಲ್ಲೂ ನಟಿ ಕಂಗನಾ ರಣಾವತ್ ಸ್ವಜನಪಕ್ಷಪಾತವನ್ನೇ ಗುರಿಯನ್ನಾಗಿಸಿಕೊಂಡು, ಬಾಲಿವುಡ್​ನ ಸ್ಟಾರ್ ಕುಟುಂಬಗಳನ್ನು ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಇದೀಗ ಕಂಗನಾ ಅವರ ಈ ನಡೆಯನ್ನು ಸುಶಾಂತ್​ ಸಿಂಗ್​ ರಜಪೂತ್​ ಕುಟುಂಬದ ಪರ ವಕೀಲ ವಿಕಾಸ್​ ಸಿಂಗ್​ ಖಂಡಿಸಿದ್ದಾರೆ.

‘ತನ್ನ ವೈಯಕ್ತಿಕ ವಿಚಾರಗಳನ್ನು ಬಳಸಿಕೊಂಡು, ಅವುಗಳನ್ನೇ ಬಂಡವಾಳವಾಗಿಸಿಕೊಂಡು ತಮಗೆ ಸಮಸ್ಯೆ ಮಾಡಿದವರ ಮೇಲೆ ಆಕ್ರಮಣ ಮಾಡುತ್ತಿದ್ದಾರೆ. ಅವರ ಹೇಳಿಕೆಗಳಿಗೂ ಸುಶಾಂತ್​ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಕುಟುಂಬ ನೀಡಿದ ಎಫ್​ಐಆರ್​ಗೆ ಅವರ ಹೇಳಿಕೆಗಳಿಗೆ ಯಾವುದೇ ಸಂಬಂಧವಿಲ್ಲ. ಅಷ್ಟಕ್ಕೂ ಕಂಗನಾ ಸುಶಾಂತ್​ ಸ್ನೇಹಿತೆಯಲ್ಲ. ಪ್ರತಿನಿಧಿಯೂ ಅಲ್ಲ’ ಎಂದಿದ್ದಾರೆ.

ಅಂದಹಾಗೆ, ಕಳೆದ ಎರಡು ತಿಂಗಳಿಂದ ಸುಶಾಂತ್​ ಸಿಂಗ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಗನಾ ರಣಾವತ್​, ಕರಣ್​ ಜೋಹರ್, ಮಹೇಶ್​ ಭಟ್​, ಆಲಿಯಾ ಭಟ್​, ಸಲ್ಮಾನ್​ ಖಾನ್​ ಸೇರಿ ಬಹುತೇಕ ಘಟಾನುಘಟಿ ಸ್ಟಾರ್ ನಟರು ಮತ್ತು ಸಿನಿಮಾ ಮೇಕರ್​ಗಳನ್ನು ನೇರವಾಗಿ ತಮ್ಮ ಹಳೇ ವೈಷಮ್ಯವನ್ನೇ ಗುರಿಯಾಗಿಸಿಕೊಂಡು ಹೇಳಿಕೆಗಳನ್ನು ನೀಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net