INDvsAFG: ಏರ್​ಫೋರ್ಸ್​ ಸಮವಸ್ತ್ರ ಧರಿಸಿ ವಿಶ್ವಕಪ್​ ಪ್ರಿ ಶೋಗೆ​ ನಟಿ ಕಂಗನಾ ರಣಾವತ್​ ಎಂಟ್ರಿ!

Untitled design - 2023-10-11T141515.976
Published on

ನವದೆಹಲಿ: ದೇಶದಲ್ಲಿ ಕ್ರಿಕೆಟ್​ ವಿಶ್ವಕಪ್ 2023ರ ಪಂದ್ಯಗಳು ಬಿರುಸಿನಿಂದ ಆರಂಭಗೊಂಡಿದ್ದು, ಇಂದು ಭಾರತ ತನ್ನ ಎರಡನೇ ಪಂದ್ಯವನ್ನು ಆಫ್ಘಾನಿಸ್ತಾನದ ವಿರುದ್ಧ ಅರುಣ್​ ಜೆಟ್ಲಿ ಸ್ಟೇಡಿಯಂನಲ್ಲಿ ಎದುರಿಸುತ್ತಿದೆ. ಈ ಪಂದ್ಯದ ವಿಶೇಷ ಕಾರ್ಯಕ್ರಮಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತೆ, ಬಾಲಿವುಡ್​ ನಟಿ ಕಂಗನಾ ರಣಾವತ್​ ಭೇಟಿ ನೀಡಿದ್ದಾರೆ.

ವಿಶ್ವಕಪ್ ಪೂರ್ವ ಶೋಗಾಗಿ ಸ್ಟಾರ್ ಸ್ಪೋರ್ಟ್ಸ್ ಸ್ಟುಡಿಯೋಗೆ ಆಗಮಿಸಿದ ನಟಿ ಕಂಗನಾ, ಏರ್​ಫೋರ್ಸ್​​ ಸಮವಸ್ತ್ರವನ್ನು ಧರಿಸಿ ಕಾರ್ಯಕ್ರಮಕ್ಕೆ ಭೇಟಿ ನೀಡುವ ಮುಖೇನ ಅನೇಕರ ಗಮನ ಸೆಳೆದಿದ್ದಾರೆ. ನೆಟ್ಟಿಗರು ಈ ರೀತಿ ಬರಲು ಕಾರಣವೇನು? ಇದರ ಹಿಂದಿರುವ ಉದ್ದೇಶವೇನು ಎಂದು ಪ್ರಶ್ನಿಸಿದರು.

ತಮ್ಮ ಮುಂದಿನ ಸಿನಿಮಾ 'ತೇಜಸ್' ಪ್ರಚಾರಕ್ಕಾಗಿ ಕಂಗನಾ ಏರ್‌ಫೋರ್ಸ್ ಸಮವಸ್ತ್ರದಲ್ಲಿ ಆಗಮಿಸಿದರು. ನಿರ್ದೇಶಕ ಸರ್ವೇಶ್ ಮೇವಾರ ನಿರ್ದೇಶಿಸಿದ ಈ ಚಿತ್ರದಲ್ಲಿ ಏರ್​ಪೋರ್ಸ್​ ಪೈಲೆಟ್​​ ತೇಜಸ್​ ಗಿಲ್​ ಅವರ ಪಾತ್ರದಲ್ಲಿ ನಟಿ ಕಂಗನಾ ಅಭಿನಯಿಸಿದ್ದು, ವಿಶೇಷ ಕಥಾಹಂದರದ ಸಿನಿಮಾವನ್ನು ಪ್ರೇಕ್ಷಕರ ಮುಂದೆ ಹಾಜರುಪಡಿಸಲು ಚಿತ್ರತಂಡ ಸಿದ್ಧಗೊಂಡಿದೆ.

ಚಿತ್ರ ಇದೇ ಅಕ್ಟೋಬರ್​ 27 ರಂದು ಬಿಡುಗಡೆಗೊಳಿಸಲು ತಯಾರಿ ನಡೆಸಿದೆ. ಇದರ ನಡುವೆಯೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net