ಅಮೀರ್ ಖಾನ್ ಮುಂದಿನ ಚಿತ್ರ 'ಸಿತಾರೆ ಜಮೀನ್ ಪರ್'!; ಇದು 'ತಾರೆ ಜಮೀನ್ ಪರ್‌' ಸೀಕ್ವೆಲ್​?

Untitled-design-2023-10-11T133909.105
Published on

ಮುಂಬೈ: ಬಾಲಿವುಡ್​ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಖ್ಯಾತಿ ಪಡೆದ ನಟ ಅಮೀರ್​ ಖಾನ್​ ಇತ್ತೀಚೆಗೆಷ್ಟೇ ತಮ್ಮ ಮುಂದಿನ ಸಿನಿಮಾ ಯಾರೊಂದಿಗೆ ಮತ್ತು ಯಾವ ಚಿತ್ರ ಎಂಬುದನ್ನು ಅಭಿಮಾನಿಗಳ ಮುಂದೆ ಬಹಿರಂಪಡಿಸಿದ್ದರು. ಇದೀಗ ಈ ಮಧ್ಯೆ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ತಮ್ಮ ಮತ್ತೊಂದು ಹೊಸ ಸಿನಿಮಾ 'ಸಿತಾರೆ ಜಮೀನ್ ಪರ್' ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

ಸನ್ನಿ ಡಿಯೋಲ್ ಅವರೊಂದಿಗೆ 'ಲಾಹೋರ್ 1947' ಎಂಬ ಹೊಸ ಪ್ರಾಜೆಕ್ಟ್​ ಬಗ್ಗೆ ಘೋಷಣೆ ಮಾಡಿದ ಬೆನ್ನಲ್ಲೇ ತಮ್ಮ ಮುಂದಿನ ಮತ್ತೊಂದು ಯೋಜನೆಯಾದ 'ಸಿತಾರೆ ಜಮೀನ್ ಪರ್' ಅನ್ನು ಅಧಿಕೃತವಾಗಿ ಘೋಷಿಸಿದರು. ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅನೇಕರು ಅಚ್ಚರಿಗೊಂಡಿದ್ದು, ಇದು 'ತಾರೆ ಜಮೀನ್​ ಪರ್​' ಚಿತ್ರದ ಮುಂದಿನ ಭಾಗವೇ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ಆರ್‌.ಎಸ್ ಪ್ರಸನ್ನ ನಿರ್ದೇಶಿಸಲಿರುವ ಈ ಚಿತ್ರವು ಭಾಗಶಃ ಈ ಹಿಂದೆ ಬಿಡುಗಡೆಗೊಂಡು ಬ್ಲಾಕ್​ಬಸ್ಟರ್​ ಹಿಟ್​ ಆಗಿದ್ದ 'ತಾರೆ ಜಮೀನ್​ ಪರ್'​ ಸಿನಿಮಾದ ಸೀಕ್ವೆಲ್​ ಎಂದು ಹೇಳಲಾಗಿದೆ. ಚಿತ್ರದ ಚಿತ್ರೀಕರಣ ಜನವರಿ 2024 ರಲ್ಲಿ ಪ್ರಾರಂಭವಾಗಲಿದ್ದು, ಕ್ರಿಸ್‌ಮಸ್ ಹಬ್ಬಕ್ಕೆ ಬಿಡುಗಡೆಗೊಳಿಸಲು ಯೋಜಿಸಲಾಗಿದೆ. ಪಾತ್ರವರ್ಗ ಮತ್ತು ಹೆಚ್ಚಿನ ಮಾಹಿತಿ ಕುರಿತು ಶೀಘ್ರವೇ ಪ್ರಕಟವಾಗಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net