More

    ಇಸ್ರೇಲ್-ಪ್ಯಾಲೆಸ್ತೇನ್​ ಬಿಕ್ಕಟ್ಟಿಗೆ ಅಮೆರಿಕಾ ನೀತಿಯೇ ಕಾರಣ: ಪುತಿನ್

    ಮಾಸ್ಕೊ: ಅಮೇರಿಕಾದ ಮಧ್ಯಪ್ರಾಚ್ಯ ನೀತಿಗಳ ವೈಫಲ್ಯಗಳಿಗೆ ಇದು ಒಂದು ಜ್ವಲಂತ ಉದಾಹರಣೆ ಎಂದು ಹಲವು ನಾಯಕರು ನನ್ನೊಂದಿಗೆ ಚರ್ಚಿಸಿದ್ದಾರೆ. ಅಮೆರಿಕಾ ಶಾಂತಿ ಒಪ್ಪಂದ ಸ್ಥಾಪಿಸುವ ನಿಟ್ಟಿನಲ್ಲಿ ಏಕಸ್ವಾಮ್ಯವನ್ನು ಸಾಧಿಸಲು ಪ್ರಯತ್ನಿಸಿತು. ದುರದೃಷ್ಟವಶಾತ್ ಇಸ್ರೆಲ್​ ಮತ್ತು ಪ್ಯಾಲೆಸ್ತೀನಿಯರಿಗೆ ಸ್ವೀಕಾರಾರ್ಹವಾದ ಹೊಂದಾಣಿಕೆಗಳನ್ನು ಹುಡುಕುವಲ್ಲಿ ಗಮನ ಹರಿಸಲಿಲ್ಲ ಎಂದು ರಷ್ಯಾ ದೂರದರ್ಶನಕ್ಕೆ ತಿಳಿಸಿದ್ದಾರೆ.

    ಯುಎನ್ ಸೆಕ್ಯುರಿಟಿ ಕೌನ್ಸಿಲ್ ನಿರ್ಣಯಗಳಲ್ಲಿ ವಿವರಿಸಿದಂತೆ ಸ್ವತಂತ್ರ ಪ್ಯಾಲೆಸ್ತೇನ್​ ರಾಷ್ಟ್ರ ಅಥವಾ ರಾಜ್ಯವನ್ನು ರಚಿಸುವುದು ಸೇರಿದಂತೆ ಪ್ಯಾಲೆಸ್ತೇನಿಯರ ಪ್ರಮುಖ ಹಿತಾಸಕ್ತಿಗಳನ್ನು ಪರಿಗಣಿಸಿಲ್ಲ. ಏಕಪಕ್ಷೀಯ ಪರಿಹಾರಗಳನ್ನು ಹೇರುವ ಪ್ರಯತ್ನ ಅಮೆರಿಕಾ ನಡೆಸಿತು ಎಂದು ಪುಟಿನ್ ಕಳವಳ ವ್ಯಕ್ತಪಡಿಸಿದರು.

    ಇದನ್ನೂ ಓದಿ: ನಿಷೇಧಿತ ಸಂಘಟನೆ ಪಿಎಫ್‌ಐ ವಿರುದ್ಧ ಎನ್‌ಐಎ ಕ್ರಮ: 12 ಕಡೆ ದಾಳಿ

    ಅಮೆರಿಕಾ ಪ್ಯಾಲೆಸ್ತೇನ್ ಜನರ ಬೇಡಿಕೆಗಳನ್ನು ಎಂದಿಗೂ ಗಣನೆಗೆ ತೆಗೆದುಕೊಂಡಿಲ್ಲ. ಇಸ್ರೇಲ್ ಪ್ಯಾಲೇಸ್ತೇನ್​ ಸಂಘರ್ಷ ಎರಡೂ ಕಡೆಯ ನಾಗರಿಕರಿಗೆ ಹಾನಿಯಾಗುವಂತೆ ಮಾಡಿದೆ. ಇದನ್ನು ಕಡಿಮೆ ಮಾಡಲು ಆದ್ಯತೆ ನೀಡುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

    ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಸೇರಿದಂತೆ ರಷ್ಯಾದ ಹಿರಿಯ ಅಧಿಕಾರಿಗಳು ಸಹ ಯುಎಸ್ ನೀತಿಯನ್ನು ದೂಷಿಸಿದ್ದಾರೆ. ಯುಎಸ್, ರಷ್ಯಾ, ಇಯು ಮತ್ತು ಯುಎನ್ ಅನ್ನು ಒಳಗೊಂಡಿರುವ ಎಲ್ಲ ದೇಶಗಳು ಮಧ್ಯಪ್ರಾಚ್ಯದಲ್ಲಿ ಶಾಂತಿ ಮಾತುಕತೆ ನಡೆಸಲು ಪ್ರಮುಖ ಪಾತ್ರ ವಹಿಸಬೇಕೆಂದು ಲಾವ್ರೊವ್ ಪ್ರಸ್ತಾಪಿಸಿದರು, ಯುಎಸ್ ತನ್ನ ಸ್ವಂತ ಹಿತಾಸಕ್ತಿಗಾಗಿ ಮತ್ತು ಏಕಸ್ವಾಮ್ಯಕ್ಕಾಗಿ ಪ್ರಯತ್ನಿಸುತ್ತಿದೆ. ಇಸ್ರೇಲ್‌ಗೆ ಮಿಲಿಟರಿ ಬೆಂಬಲ ಸಹ ಘೋಷಿಸಿದೆ. ಮತ್ತೊಂದೆಡೆ ಹಮಾಸ್ ಅನ್ನು ಖಂಡಿಸಲು ಇತರ ರಾಷ್ಟ್ರಗಳಿಗೆ ಕರೆ ನೀಡಿದೆ. ಆದರೆ ಇದೇ ಸಂದರ್ಭದಲ್ಲಿ ಮಾಸ್ಕೋ ಜವಾಬ್ದಾರಿಯುತವಾಗಿ ನಡೆದುಕೊಂಡಿದೆ. ನಾಗರಿಕರ ಮೇಲಿನ ಎಲ್ಲಾ ಹಿಂಸಾಚಾರವನ್ನು ಖಂಡಿಸಿದೆ. ಶಾಶ್ವತ ಸಾಮರಸ್ಯ, ಎರಡೂ ಕಡೆ ಪರಿಹಾರಕ್ಕಾಗಿ ಪ್ರತಿಪಾದಿಸಿದೆ ಎಂದು ರಷ್ಯಾ ಟಿವಿ ವರದಿ ಮಾಡಿದೆ.

    ಗಾಜಾ ಮೇಲೆ ಇಸ್ರೇಲ್ ಬೆಂಕಿಯ ಮಳೆ ಸುರಿಸಿತೇ? ಏನಿದು​ ಬಿಳಿ ರಂಜಕ ಬಾಂಬ್?ಎಷ್ಟು ಡೇಂಜರ್​? ಇಲ್ಲಿದೆ ಮಾಹಿತಿ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts